ಒಂದೇ ಓವರ್​ನಲ್ಲಿ 20 ರನ್ ನೀಡಿ ಕ್ಯಾಮೆರಾ ಮೇಲೆ ಕೋಪ ತೋರಿದ ಸ್ಯಾಮ್ ಕರನ್; ವಿಡಿಯೋ ನೋಡಿ

ICC World Cup 2023: ತಂಡದ ಸ್ಟಾರ್ ಬೌಲರ್ ಸ್ಯಾಮ್ ಕರನ್ ಸರಾಗವಾಗಿ ರನ್​ ನೀಡಿ ದುಬಾರಿ ಎನಿಸಿಕೊಂಡರು. ಇದೇ ವೇಳೆ ಒಂದೇ ಓವರ್​ನಲ್ಲಿ 20 ರನ್​ ಬಿಟ್ಟುಕೊಟ್ಟ ಕರನ್ ತಮ್ಮ ಕೋಪವನ್ನು ಕ್ಯಾಮೆರಾ ಮೇಲೆ ತೋರಿದ ಪ್ರಸಂಗ ಕೂಡ ಕಂಡು ಬಂತು.

ಒಂದೇ ಓವರ್​ನಲ್ಲಿ 20 ರನ್ ನೀಡಿ ಕ್ಯಾಮೆರಾ ಮೇಲೆ ಕೋಪ ತೋರಿದ ಸ್ಯಾಮ್ ಕರನ್; ವಿಡಿಯೋ ನೋಡಿ
ಸ್ಯಾಮ್ ಕರನ್
Follow us
ಪೃಥ್ವಿಶಂಕರ
|

Updated on:Oct 16, 2023 | 12:15 PM

ಈ ಬಾರಿಯ ವಿಶ್ವಕಪ್​ನಲ್ಲಿ (ICC World Cup 2023) ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್​ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಆಡಿರುವ ಮೂರು ಪಂದ್ಯಗಳಿಂದ ಎರಡೆರಡು ಸೋಲನುಭವಿಸಿರುವ ಆಂಗ್ಲರಿಗೆ ವಿಶ್ವಕಪ್​ ಪಯಣ ಮತ್ತಷ್ಟು ಕಠಿಣವಾಗುತ್ತಿದೆ. ಭಾನುವಾರ ನಡೆದ ಟೂರ್ನಿಯ 13ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ (ENG vs AFG) ತಂಡವನ್ನು 69 ರನ್‌ಗಳಿಂದ ಸೋಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಚಿಕ್ಕ ತಂಡ ದೊಡ್ಡ ತಂಡವನ್ನು ಸೋಲಿಸಿದೆ ಎಂದು ಹಲವರು ಮಾತನಾಡುತ್ತಿದ್ದರೆ, ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದು ಅನೇಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ತಂಡದ ಸ್ಟಾರ್ ಬೌಲರ್ ಸ್ಯಾಮ್ ಕರನ್ (Sam Curran) ಸರಾಗವಾಗಿ ರನ್​ ನೀಡಿ ದುಬಾರಿ ಎನಿಸಿಕೊಂಡರು. ಇದೇ ವೇಳೆ ಒಂದೇ ಓವರ್​ನಲ್ಲಿ 20 ರನ್​ ಬಿಟ್ಟುಕೊಟ್ಟ ಕರನ್ ತಮ್ಮ ಕೋಪವನ್ನು ಕ್ಯಾಮೆರಾ ಮೇಲೆ ತೋರಿದ ಪ್ರಸಂಗ ಕೂಡ ಕಂಡು ಬಂತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆ ಬಳಿಕ ಮೊದಲು ಆಡಿದ ಅಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸುತ್ತದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಅಫ್ಘಾನ್ ಆಟಗಾರರು ಇಂಗ್ಲೆಂಡ್ ತಂಡದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು. ಅದರಲ್ಲೂ ಆರಂಭಿಕರು ಮೊದಲ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 79 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು. ಹಾಗೆಯೇ ಮೊದಲ ವಿಕೆಟ್​ಗೆ 114 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಆ ಬಳಿಕ ಸತತ ವಿಕೆಟ್ ಕಳೆದುಕೊಂಡು ಸಾಧಾರಣ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ತಂಡ ಅಂತಿಮವಾಗಿ 49.5 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.

ಐತಿಹಾಸಿಕ ವಿಜಯದ ಬಳಿಕ ಮುಜೀಬ್​ರನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಪುಟ್ಟ ಅಭಿಮಾನಿ; ಮನಕಲಕುವ ವಿಡಿಯೋ ನೋಡಿ

ಒಂದೇ ಓವರ್​ನಲ್ಲಿ 20 ರನ್

ಇದೇ ವೇಳೆ ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಕರನ್ ಮಾಡಿದ ಕೆಟ್ಟ ಕೃತ್ಯವೊಂದು ಇದೀಗ ಅಂತರ್ಜಾಲದಲ್ಲಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಈ ಪಂದ್ಯದಲ್ಲಿ ಒಟ್ಟು 4 ಓವರ್ ಬೌಲಿಂಗ್ ಮಾಡಿದ ಕರನ್ 46 ರನ್ ನೀಡಿ ಕಳಪೆ ಬೌಲಿಂಗ್ ಪ್ರದರ್ಶಿಸಿದರು. ವಿಶೇಷವಾಗಿ ಗುರ್ಬಾಸ್ ವಿರುದ್ಧ ದುಬಾರಿಯಾದ ಕರನ್, ಒಂದೇ ಓವರ್​ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 20 ರನ್ ನೀಡಿದರು. ಬಳಿಕ ಮುಂದಿನ ಓವರ್‌ನಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಕರನ್ ಅವರನ್ನು ಕ್ಯಾಮರಾಮನ್ ಸೆರೆ ಹಿಡಿಯಲು ಯತ್ನಿಸಿದರು. ಆಗಲೇ ರನ್ ಲೀಕ್ ಆಗಿದ್ದಕ್ಕೆ ಬೇಸರಗೊಂಡಿದ್ದ ಸ್ಯಾಮ್ ಕರನ್ ಕ್ಯಾಮರಾ ಮ್ಯಾನ್ ಮೇಲೆ ಸಿಟ್ಟು ತೋರಿಸಿ, ತನ್ನ ಕೈಯಿಂದ ಹತ್ತಿರದಿಂದ ಚಿತ್ರ ತೆಗೆಯಲು ಹೋದ ಕ್ಯಾಮರಾಮನ್​ನನ್ನು ದೂರ ತಳ್ಳಿದರು. ಅವರ ಈ ಹೀನ ಕೃತ್ಯದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಕರನ್ ಅವರ ನಡೆಯನ್ನು ಖಂಡಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ಕಳಪೆ ಪ್ರದರ್ಶನ ನೀಡಿದ ಕರನ್ 23 ಎಸೆತಗಳನ್ನು ಎದುರಿಸಿ ಕೇವಲ 10 ರನ್ ಗಳಿಸಿದ್ದರು.

69 ರನ್‌ಗಳ ಜಯ

285 ರನ್​ಗಳ ಗೆಲುವಿನ ಗುರಿಯೊಂದಿಗೆ ಮೈದಾನಕ್ಕಿಳಿದ ಇಂಗ್ಲೆಂಡ್ ತಂಡ ಪುಟ್ಟ ಡೆಲ್ಲಿ ಮೈದಾನದಲ್ಲಿ ಸುಲಭ ಚೇಸ್ ಎಂದು ಭಾವಿಸಿತ್ತು. ಆದರೆ ಅಫ್ಘಾನಿಸ್ತಾನ ತಂಡದ ಅಮೋಘ ಸ್ಪಿನ್ ಎದುರಿಸಲಾಗದೆ ಪೇಚಿಗೆ ಸಿಲುಕಿತು. ಅಂತಿಮವಾಗಿ 40.3 ಓವರ್‌ಗಳಲ್ಲಿ ಆಲೌಟ್ ಆಗುವ ಮೂಲಕ 215 ರನ್​ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಅಫ್ಘಾನಿಸ್ತಾನ ತಂಡ 69 ರನ್‌ಗಳ ಜಯ ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Mon, 16 October 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು