PAK vs AFG, ICC World Cup: ವಿಶ್ವಕಪ್​ನಲ್ಲಿಂದು ಪಾಕಿಸ್ತಾನ-ಅಫ್ಘಾನಿಸ್ತಾನ ಮುಖಾಮುಖಿ: ಬಾಬರ್​ಗೆ ಅಗ್ನಿಪರೀಕ್ಷೆ

|

Updated on: Oct 23, 2023 | 8:42 AM

Pakistan vs Afghanistan, ICC World Cup 2023: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆ ಆಗಿರುವುದು ಸ್ವತಃ ನಾಯಕನೇ ಫಾರ್ಮ್ ಕಳೆದುಕೊಂಡಿರುವುದು.

PAK vs AFG, ICC World Cup: ವಿಶ್ವಕಪ್​ನಲ್ಲಿಂದು ಪಾಕಿಸ್ತಾನ-ಅಫ್ಘಾನಿಸ್ತಾನ ಮುಖಾಮುಖಿ: ಬಾಬರ್​ಗೆ ಅಗ್ನಿಪರೀಕ್ಷೆ
AFG vs PAK
Follow us on

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ನಡೆಯಲಿರುವ 22ನೇ ಪಂದ್ಯದಲ್ಲಿ ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ಹಾಗೂ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ (Pakistan vs Afghanistan) ತಂಡಗಳು ಮುಖಾಮುಖಿ ಆಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ತಲಾ ಎರಡರಲ್ಲಿ ಸೋಲು-ಗೆಲುವು ಕಂಡಿರುವ ಪಾಕ್​ಗೆ ಈ ಪಂದ್ಯ ಮಹತ್ವದ್ದಾಗಿದೆ. ಪಾಯಿಂಟ್ ಟೇಬಲ್​ನಲ್ಲಿ ಮೇಲೇಳಲು ಬಾಬರ್ ಪಡೆಗೆ ಇದೊಂದು ಉತ್ತಮ ಅವಕಾಶ. ಇತ್ತ ಅಫ್ಘಾನ್ ಪಡೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದರಲ್ಲಷ್ಟೆ ಗೆದ್ದು ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.

ಬಾಬರ್​ಗೆ ಅಗ್ನಿಪರೀಕ್ಷೆ

ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆ ಆಗಿರುವುದು ಸ್ವತಃ ನಾಯಕನೇ ಫಾರ್ಮ್ ಕಳೆದುಕೊಂಡಿರುವುದು. ಬಾಬರ್ ಕಡೆಯಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬರಬೇಕಿದೆ. ಓಪನರ್​ಗಳಾದ ಅಬ್ದುಲ್ಲ ಶಾಹಿದಿ ಹಾಗೂ ಇಮಾಮ್-ಉಲ್-ಹಖ್ ಉತ್ತಮ ಆರಂಭ ನೀಡುತ್ತಿರುವುದು ತಂಡಕ್ಕೆ ನೆಮ್ಮದಿ ತಂದಿದೆ. ಮಧ್ಯಮ ಕ್ರಮಾಂಕದಲ್ಲಿ ರಿಝ್ವಾನ್, ಶಕೀಲ್, ಇಫ್ತಿಖರ್ ನೆರವಾಗಬೇಕು. ಬೌಲಿಂಗ್​ನಲ್ಲಿ ಈ ಬಾರಿ ಪಾಕ್ ಮಾರಕ ಎಂಬಂತೆ ಕಾಣುತ್ತಿಲ್ಲ. ಶಾಹಿಲ್ ಅಫ್ರಿದಿ ಮಾತ್ರ ವಿಕೆಟ್ ಟೇಕರ್ ಆಗಿದ್ದಾರೆ. ಹ್ಯಾರಿಸ್ ರೌಫ್ ರನ್ ಹರಿಬಿಡುತ್ತಿದ್ದಾರೆ.

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಆಂಗ್ಲರಿಗೆ ಬಿಗ್ ಶಾಕ್; ವಿಶ್ವಕಪ್​ನಿಂದ ಹೊರಬಿದ್ದ ಸ್ಟಾರ್ ಬೌಲರ್..!

ಇದನ್ನೂ ಓದಿ
ವಿಶ್ವಕಪ್​ನಲ್ಲಿ ಸೆಮಿ ಫೈನಲ್​ಗೇರಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಕಿವೀಸ್ ವಿರುದ್ಧ 95 ರನ್ ಸಿಡಿಸಿ ಹಲವು ದಾಖಲೆ ಮುರಿದ ವಿರಾಟ್ ಕೊಹ್ಲಿ..!
ಗೋಲ್ಡನ್ ಬ್ಯಾಟ್ ರೇಸ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕಿಂಗ್ ಕೊಹ್ಲಿ..!
ಪೋಸ್ಟ್ ಮ್ಯಾಚ್​ನಲ್ಲಿ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತುಗಳೇನು ನೋಡಿ

ಪುಟಿದೇಳುತ್ತಾ ಅಫ್ಘಾನ್?

ಅಫ್ಘಾನಿಸ್ತಾನ ತಂಡ ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಕಳೆದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಕೇವಲ 139 ರನ್​ಗಳಿಗೆ ಆಲೌಟ್ ಆಗಿತ್ತು. ಹಶ್ಮತುಲ್ಲಾ ಶಾಹಿದಿ ಕಡೆಯಿಂದ ನಾಯಕನ ಆಟಬರಬೇಕಿದೆ. ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ಒದಗಿಸಬೇಕು. ರಹಮತ್ ಷಾ ಮಾತ್ರ ಹೋರಾಟ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಅಫ್ಘಾನ್ ರಶೀದ್ ಖಾನ್ ಮತ್ತು ಮುಜೀಬ್ ಉರ್ ರಹಮಾನ್ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಚೆನ್ನೈ ಪಿಚ್ ವರದಿ

ಚಿದಂಬರಂ ಕ್ರೀಡಾಂಗಣವು ಸಮತೋಲಿತ ಪಿಚ್‌ಗೆ ಹೆಸರುವಾಸಿಯಾಗಿದೆ. ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗಿಬ್ಬರಿಗೂ ಸಹಕಾರಿಯಾಗಿದೆ. ಈ ವಿಕೆಟ್ ಸಾಮಾನ್ಯವಾಗಿ ಶುಷ್ಕವಾಗಿದ್ದು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಪಂದ್ಯವು ಮುಂದುವರೆದಂತೆ, ಪಿಚ್ ಸ್ವಲ್ಪ ನಿಧಾನವಾಗುತ್ತದೆ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವ ತಂಡಕ್ಕೆ ರನ್ ಕಲೆಹಾಕಲು ಕೊಂಚ ಕಷ್ಟಕರವಾಗಿಸುತ್ತದೆ. ಅದಕ್ಕಾಗಿಯೇ ಹೆಚ್ಚಿನ ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ.

ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ