AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs PAK: ಪಾಕ್ ತಂಡದ ಸೋಲಿಗೆ ನಾಯಕ ಬಾಬರ್ ದೂರಿದ್ದು ಯಾರನ್ನು ಗೊತ್ತಾ?

AUS vs PAK: ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 62 ರನ್‌ಗಳಿಂದ ಸೋಲುವುದಕ್ಕೆ ಪಾಕ್ ತಂಡದ ಕಳಪೆ ಫೀಲ್ಡಿಂಗ್​ಗೆ ಪ್ರಮುಖ ಕಾರಣವಾಯಿತು. ಇದನ್ನು ಪಾಕ್ ನಾಯಕ ಬಾಬರ್ ಆಝಂ ಕೂಡ ಒಪ್ಪಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ಬಾಬರ್, ಒಂದು ಕ್ಯಾಚ್ ಕೈಚೆಲ್ಲಿದು ಎಷ್ಟು ದುಬಾರಿಯಾಯಿತು ಎಂಬುದನ್ನು ಒಪ್ಪಿಕೊಂಡರು.

AUS vs PAK: ಪಾಕ್ ತಂಡದ ಸೋಲಿಗೆ ನಾಯಕ ಬಾಬರ್ ದೂರಿದ್ದು ಯಾರನ್ನು ಗೊತ್ತಾ?
ಬಾಬರ್ ಆಝಂ
ಪೃಥ್ವಿಶಂಕರ
|

Updated on: Oct 21, 2023 | 6:29 AM

Share

ಒಂದು ತಂಡ ಗೆಲುವು ಸಾಧಿಸಬೇಕೆಂದರೆ ತಂಡದ ಎಲ್ಲಾ ವಿಭಾಗವೂ ಉತ್ತಮ ಪ್ರದರ್ಶನ ನೀಡುವುದು ಅವಶ್ಯಕ. ಬ್ಯಾಟಿಂಗ್ ಅಥವಾ ಬೌಲಿಂಗ್ ವಿಭಾಗ ಮಾತ್ರ ಉತ್ತಮ ಪ್ರದರ್ಶನ ನೀಡಿದರೆ ಸಾಲದು. ಬದಲಿಗೆ ಫೀಲ್ಡಿಂಗ್ ವಿಭಾಗವೂ ಅದ್ಭುತ ಪ್ರದರ್ಶನ ನೀಡಬೇಕು. ಆಗ ಮಾತ್ರ ಒಂದು ತಂಡಕ್ಕೆ ಸುಲಭವಾಗಿ ಜಯ ದಕ್ಕುತ್ತದೆ. ಆದರೆ ಮೈದಾನದಲ್ಲಿ ಮಾಡುವ ಕಳಪೆ ಫೀಲ್ಡಿಂಗ್ ಎಷ್ಟು ದುಬಾರಿಯಾಗಬಹುದು ಎಂಬುದಕ್ಕೆ ಪಾಕಿಸ್ತಾನ ತಂಡ (Pakistan Cricket Team) ಒಂದು ಉತ್ತಮ ಉದಾಹರಣೆಯಾಗಿದೆ. ಬೌಲಿಂಗ್​ನಲ್ಲಿ ನಂಬರ್ ಒನ್ ತಂಡ ಎಂದು ಹೇಳಿಕೊಳ್ಳುವ ಪಾಕ್ ತಂಡ ಫೀಲ್ಡಿಂಗ್​ನಲ್ಲಿ ಮಾತ್ರ ಹೀನಾಯ ಸ್ಥಿತಿಗೆ ತಲುಪಿದೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ (Australia vs Pakistan) 62 ರನ್‌ಗಳಿಂದ ಸೋಲುವುದಕ್ಕೆ ಪಾಕ್ ತಂಡದ ಕಳಪೆ ಫೀಲ್ಡಿಂಗ್​ಗೆ ಪ್ರಮುಖ ಕಾರಣವಾಯಿತು. ಇದನ್ನು ಪಾಕ್ ನಾಯಕ ಬಾಬರ್ ಆಝಂ (Babar Azam) ಕೂಡ ಒಪ್ಪಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ಬಾಬರ್, ಒಂದು ಕ್ಯಾಚ್ ಕೈಚೆಲ್ಲಿದು ಎಷ್ಟು ದುಬಾರಿಯಾಯಿತು ಎಂಬುದನ್ನು ಒಪ್ಪಿಕೊಂಡರು.

ಬಾಬರ್ ಹೇಳಿದ್ದೇನು?

ಪಂದ್ಯದ ನಂತರ ಮಾತನಾಡಿದ ಬಾಬರ್, ‘ಇಂದು ನಮ್ಮ ಪ್ರದರ್ಶನ ನಿರಾಶಾದಾಯಕವಾಗಿತ್ತು. ವಾರ್ನರ್‌ನಂತಹ ಆಟಗಾರ ನೀಡಿದ ಕ್ಯಾಚ್ ಅನ್ನು ಕೈಬಿಟ್ಟರೆ, ಅದು ತಂಡದ ಸೋಲಿಗೆ ಕಾರಣವಾಗಬಹುದು. ಇದು ಸ್ಕೋರಿಂಗ್ ಮೈದಾನವಾಗಿತ್ತು. ಆದರೆ ಟಾರ್ಗೆಟ್ ದೊಡ್ಡದಿದ್ದರಿಂದ ಗೆಲ್ಲಲಲು ಸಾಧ್ಯವಾಗಲಿಲ್ಲ. ಪಂದ್ಯದ ಕೊನೆಯ ಓವರ್‌ಗಳಲ್ಲಿ ನಾವು ಪುನರಾಗಮನ ಮಾಡಿದೆವು. ಇದರ ಪೂರ್ಣ ಶ್ರೇಯವು ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಸಲ್ಲುತ್ತದೆ. ಆದರೆ ರನ್ ಚೇಸ್ ಮಾಡುವಾಗ ದೊಡ್ಡ ಜೊತೆಯಾಟ ಮಾಡಲು ಸಾಧ್ಯವಾಗಲಿಲ್ಲ ಎಂದು ಬಾಬರ್ ಆಝಂ ಹೇಳಿದರು.

AUS vs PAK: 4,6,1,4,4,4.. ಹ್ಯಾರಿಸ್​ ರೌಫ್​ ಬೆವರಿಳಿಸಿದ ಆಸೀಸ್ ಆರಂಭಿಕರು! ವಿಡಿಯೋ ನೋಡಿ

10 ರನ್‌ಗಳಿಗೆ ಔಟಾಗಬೇಕಿತ್ತು

ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 124 ಎಸೆತಗಳಲ್ಲಿ 14 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 163 ರನ್ ಗಳಿಸಿದರು. ವಾಸ್ತವವಾಗಿ, ಡೇವಿಡ್ ವಾರ್ನರ್ ಕೇವಲ 10 ರನ್‌ಗಳಿಗೆ ಔಟಾಗಬೇಕಿತ್ತು. ಆದರೆ ಶಾಹೀನ್ ಅಫ್ರಿದಿ ಬೌಲಿಂಗ್​ನಲ್ಲಿ ವಾರ್ನರ್ ನೀಡಿದ ಸುಲಭ ಕ್ಯಾಚ್ ಅನ್ನು ಉಸಾಮಾ ಮಿರ್ ಕೈಬಿಟ್ಟರು. ಆ ಬಳಿಕ ಈ ಕ್ಯಾಚ್ ಎಷ್ಟು ದುಬಾರಿಯಾಯಿತು ಎಂದರೆ, ವಾರ್ನರ್ ಈ ಪಂದ್ಯದಲ್ಲಿ ಬರೋಬ್ಬರಿ 163 ರನ್ ಸಿಡಿಸಿದರು.

ಮುಂದಿನ ಪಂದ್ಯ ಯಾವಾಗ?

ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯವನ್ನು ಇತ್ತೀಚಿಗೆ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 25 ರಂದು ದೆಹಲಿಯಲ್ಲಿ ಎದುರಿಸಲಿದೆ. ಹಾಗೆಯೇ ಪಾಕಿಸ್ತಾನವು ಕೂಡ ಅಕ್ಟೋಬರ್ 23 ರಂದು ಅಫ್ಘಾನಿಸ್ತಾನವನ್ನು ಎದುರಿಸಲು ಚೆನ್ನೈಗೆ ತೆರಳಲಿದೆ. ಆಸ್ಟ್ರೇಲಿಯಾ ಈಗ ಎರಡು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ್ದರೆ, ಪಾಕಿಸ್ತಾನವು ಅದೇ ಅಂಕಿಅಂಶಗಳನ್ನು ಹೊಂದಿದ್ದು ಪಾಯಿಂಟ್ ಟೇಬಲ್‌ನಲ್ಲಿ ಐದನೇICCICC world cup, world cup, ಸ್ಥಾನದಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ