AUS vs PAK: 4,6,1,4,4,4.. ಹ್ಯಾರಿಸ್​ ರೌಫ್​ ಬೆವರಿಳಿಸಿದ ಆಸೀಸ್ ಆರಂಭಿಕರು! ವಿಡಿಯೋ ನೋಡಿ

AUS vs PAK: ರೌಫ್, ತನ್ನ ವೇಗದಿಂದ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಆಗಲಿಲ್ಲ. ಆಸೀಸ್ ಇನ್ನಿಂಗ್ಸ್​ನ 9ನೇ ಓವರ್​ನಲ್ಲಿ ರೌಫ್ ಬರೋಬ್ಬರಿ 24 ರನ್ ಬಿಟ್ಟುಕೊಟ್ಟು ದುಬಾರಿಯಾದರು.

AUS vs PAK: 4,6,1,4,4,4.. ಹ್ಯಾರಿಸ್​ ರೌಫ್​ ಬೆವರಿಳಿಸಿದ ಆಸೀಸ್ ಆರಂಭಿಕರು! ವಿಡಿಯೋ ನೋಡಿ
ಹ್ಯಾರಿಸ್​ ರೌಫ್​ ಬೆವರಿಳಿಸಿದ ಆಸೀಸ್ ಆರಂಭಿಕರು
Follow us
ಪೃಥ್ವಿಶಂಕರ
|

Updated on: Oct 21, 2023 | 6:08 AM

ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಆಸ್ಟ್ರೇಲಿಯ ತಂಡವು ಗೆಲುವಿನ ಲಯಕ್ಕೆ ಮರಳಿದ್ದು, ಪಾಕಿಸ್ತಾನ (Australia vs Pakistan) ವಿರುದ್ಧದ ಪಂದ್ಯವನ್ನು 62 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಗೆಲುವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 368 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೂಡ ಉತ್ತಮ ಆರಂಭ ಪಡೆದಿತ್ತು. ಆದರೆ ಮಧ್ಯಮ ಕ್ರಮಾಂಕ ಎಂದಿನಂತೆ ವಿಫಲವಾದ ಕಾರಣ ಟೂರ್ನಿಯಲ್ಲಿ ಎರಡನೇ ಸೋಲು ಎದುರಿಸಬೇಕಾಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದರೆ, ಬಾಬರ್ ಪಡೆ ಕುಸಿತ ಕಂಡಿದೆ.

ಬರೋಬ್ಬರಿ 24 ರನ್

ಇನ್ನು ಈ ಪಂದ್ಯದಲ್ಲಿ ಆಸೀಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಆರಂಭದಿಂದಲೇ ಪಾಕ್ ಬೌಲರ್‌ಗಳ ಮೇಲೆ ದಾಳಿ ನಡೆಸಿ ತಲಾ ಶತಕ ಸಿಡಿಸಿ ಮಿಂಚಿದರು. ಅದರಲ್ಲೂ ಮಿಂಚಿನ ವೇಗದಲ್ಲಿ ಬೌಲಿಂಗ್ ಮಾಡಲು ಹೆಸರಾದ ಹ್ಯಾರಿಸ್ ರೌಫ್ ಅವರನ್ನು ಇನ್ನಿಲ್ಲದಂತೆ ದಂಡಿಸಿದರು. ರೌಫ್, ತನ್ನ ವೇಗದಿಂದ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಆಗಲಿಲ್ಲ. ಆಸೀಸ್ ಇನ್ನಿಂಗ್ಸ್​ನ 9ನೇ ಓವರ್​ನಲ್ಲಿ ರೌಫ್ ಬರೋಬ್ಬರಿ 24 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಪಾಕ್ ವಿರುದ್ಧ 163 ರನ್ ಚಚ್ಚಿದ ವಾರ್ನರ್..!

3 ಓವರ್‌ಗಳಲ್ಲಿ 47 ರನ್‌

ಈ ಓವರ್​ನ ಮೊದಲ ಎಸೆತದಲ್ಲಿ ವಾರ್ನರ್ ಬೌಂಡರಿ ಬಾರಿಸಿದರು. ಬಳಿಕ ಎರಡನೇ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು. ಅದರ ನಂತರ, ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮಾರ್ಷ್​ಗೆ ಸ್ಟ್ರೈಕ್ ನೀಡಿದರು. ನಂತರದ ಎಸೆತ ವೈಡ್ ಆಗಿದ್ದು, ಮಾರ್ಷ್ ಮೂರು ಎಸೆತಗಳನ್ನು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 24 ರನ್‌ಗಳು ಬಂದವು. ಆ ಬಳಿಕ 12ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ರೌಫ್‌ ಮತ್ತೊಮ್ಮೆ ದುಬಾರಿಯಾದರು. ಓವರ್​ನ ಮೊದಲ ಎಸೆತದಲ್ಲಿ ಮಾರ್ಷ್ ಬೌಂಡರಿ ಬಾರಿಸಿದರು. ಆ ನಂತರವೂ ಬೌಂಡರಿ ಮಳೆ ಸುರಿಯಿತು. ರೌಫ್ ಎಲ್ಲಾ ರೀತಿಯ ಲೆಂತ್ ಬೌಲ್ ಮಾಡಿದರೂ ಪ್ರಯೋಜನವಾಗಲಿಲ್ಲ. ರೌಫ್ ಕೇವಲ 3 ಓವರ್‌ಗಳಲ್ಲಿ 47 ರನ್‌ಗಳನ್ನು ನೀಡಿ ತೀರ ದುಬಾರಿಯಾದರು.

259 ರನ್​ಗಳ ಜೊತೆಯಾಟ

ಈ ನಡುವೆ ವಾರ್ನರ್ ಹಾಗೂ ಮಾರ್ಷ್ ಪಾಕ್ ಬೌಲರ್ ಗಳಿಗೆ ಯಾವುದೇ ಅವಕಾಶ ನೀಡದೆ ಸತತ ರನ್ ಮಳೆ ಸುರಿಸಿದರು. ವಾರ್ನರ್ 13ನೇ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 50 ರನ್ ಪೂರೈಸಿದರು. ಆ ಬಳಿಕ ಮಾರ್ಷ್ ಕೂಡ ಅರ್ಧಶತಕ ಪೂರೈಸಿದರು. ಮಾರ್ಷ್ 15ನೇ ಓವರ್​ನ ಎರಡನೇ ಎಸೆತದಲ್ಲಿ ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಪಾಕ್​ ಬೌಲರ್​ಗಳನ್ನು ಚೆಂಡಾಡಿದ ಈ ಜೋಡಿ 259 ರನ್​ಗಳ ಜೊತೆಯಾಟ ಹಂಚಿಕೊಂಡಿತು. ಇದರಲ್ಲಿ ಮಿಚೆಲ್ ಮಾರ್ಷ್​ 10 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 121 ರನ್ ಸಿಡಿಸಿ ಔಟಾದರೆ, ವಾರ್ನರ್ ಕೂಡ 14 ಬೌಂಡರಿ, 9 ಸಿಕ್ಸರ್ ಸಹಿತ 163 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಇಬ್ಬರನ್ನು ಹೊರತುಪಡಿಸಿ ಆಸೀಸ್ ಪಾಳಯಾದ ಮತ್ತ್ಯಾವ ಬ್ಯಾಟರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅದ್ಭುತ ಆರಂಭದ ಬಳಿಕವೂ ಆಸೀಸ್ ತಂಡ 367 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ