T20 World CUP 2022: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿದೆ. ಇದರಲ್ಲಿ 8 ತಂಡಗಳು ನೇರವಾಗಿ ಸೂಪರ್-12 ಗೆ ಅರ್ಹತೆ ಪಡೆದರೆ, 8 ತಂಡಗಳಲ್ಲಿ ನಾಲ್ಕು ತಂಡಗಳು ಅರ್ಹತಾ ಸುತ್ತಿನ ಮೂಲಕ ಸೂಪರ್-12 ಹಂತಕ್ಕೇರಲಿದೆ. ಅಂದರೆ 12 ತಂಡಗಳ ನಡುವೆ ವಿಶ್ವಕಪ್ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಈ ಹಣಾಹಣಿಯಲ್ಲಿ ಈ ಬಾರಿ ಪ್ರಶಸ್ತಿ ಗೆಲ್ಲುವ ತಂಡ ಯಾವುದೆಂದು ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar).
ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಎಲ್ಲಾ ತಂಡಗಳು ಬಲಿಷ್ಠವಾಗಿರುವ ಕಾರಣ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಾಗ್ಯೂ ಪ್ರಸ್ತುತ ಭಾರತ ತಂಡ ಕೂಡ ಬಲಿಷ್ಠವಾಗಿದೆ. ಹೀಗಾಗಿ ಈ ಬಾರಿ ಭಾರತ ತಂಡವೇ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇದೇ ವೇಳೆ ಭಾರತ ತಂಡದ ಆಯ್ಕೆ ಬಗ್ಗೆ ಮಾತನಾಡಲು ನಿರಾಕರಿಸಿದ ಗವಾಸ್ಕರ್, ಒಂದು ಬಾರಿ ತಂಡವನ್ನು ಆಯ್ಕೆ ಮಾಡಿದ ಮೇಲೆ ನಾವು ಆ ತಂಡವನ್ನು ಬೆಂಬಲಿಸಬೇಕು. ಅಲ್ಲದೆ ಆಯ್ಕೆಯಾಗದಿರುವವರ ಬಗ್ಗೆ ಚರ್ಚೆಗಳನ್ನು ನಿಲ್ಲಿಸಬೇಕು ಎಂದರು.
ಏಕೆಂದರೆ ನಾವು ಆಯ್ಕೆಗಳು ಮತ್ತು ಲೋಪಗಳನ್ನು ಪ್ರಶ್ನಿಸಬಾರದು. ಇದು ಕೆಲವು ಆಟಗಾರರ ಮನೋಸ್ಥೈರ್ಯವನ್ನು ಕುಗ್ಗಿಸಬಹುದು. ಹಾಗಾಗಿ ಯಾರು ಆಯ್ಕೆಯಾಗಿದ್ದಾರೋ ಅವರನ್ನು ಬೆಂಬಲಿಸಬೇಕು. ಆ ತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸಬೇಕೆಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
ಅಕ್ಟೋಬರ್ 16 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ನಲ್ಲಿ ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಹಾಗೆಯೇ ಟೀಮ್ ಇಂಡಿಯಾ ಸೂಪರ್-12 ಹಂತದ ಪಂದ್ಯದ ಮೂಲಕ ಕಣಕ್ಕಿಳಿಯಲಿದೆ. ಅಂದರೆ ಅಕ್ಟೋಬರ್ 23 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಭಾರತ ತಂಡವು ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಂದರೆ ಸೂಪರ್-12 ನ ಪಂದ್ಯಗಳು ಎರಡು ಗ್ರೂಪ್ಗಳಾಗಿ ನಡೆಯಲಿದೆ. ಇಲ್ಲಿ ಗ್ರೂಪ್-1 ಹಾಗೂ ಗ್ರೂಪ್-2 ವಿಭಾಗಗಳಾಗಿ 12 ತಂಡಗಳನ್ನು ವಿಂಗಡಿಸಲಾಗಿದೆ.
ಗ್ರೂಪ್- 1 ತಂಡಗಳು:
ಗ್ರೂಪ್- 2 ತಂಡಗಳು:
ಇಲ್ಲಿ ಟೀಮ್ ಇಂಡಿಯಾ ಗ್ರೂಪ್-2 ನಲ್ಲಿನ ಇತರೆ ಐದು ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಲಿದೆ. ಇಲ್ಲೂ ಕೂಡ ಪಾಯಿಂಟ್ ಟೇಬಲ್ ಇರಲಿದ್ದು, ಇದರಲ್ಲಿ ಅತ್ಯಧಿಕ ಪಾಯಿಂಟ್ಸ್ ಕಲೆಹಾಕುವ ಎರಡು ತಂಡಗಳು ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ. ಹಾಗೆಯೇ ಗ್ರೂಪ್- 1 ನಿಂದ ಕೂಡ 2 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಇದಾದ ಬಳಿಕ ಸೆಮಿಫೈನಲ್ನಲ್ಲಿ ಎರಡು ಗ್ರೂಪ್ನ 4 ತಂಡಗಳು ಪರಸ್ಪರ ಸೆಣಲಿಸಲಿದೆ.
ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
Published On - 2:00 pm, Thu, 22 September 22