Salman Butt: ಕೊಹ್ಲಿ ಓಕೆ, ರೋಹಿತ್, ಪಂತ್ ಯಾವ ಅರ್ಥದಲ್ಲಿ ಫಿಟ್​ ಆಗಿದ್ದಾರೆ?- ಸಲ್ಮಾನ್ ಬಟ್

Team India: ಜನರು ಈ ಬಗ್ಗೆ ಯೋಚಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನ್ನ ಪ್ರಕಾರ ಭಾರತೀಯ ಆಟಗಾರರ ಫಿಟ್‌ನೆಸ್ ಸೂಕ್ತವಾಗಿಲ್ಲ.

Salman Butt: ಕೊಹ್ಲಿ ಓಕೆ, ರೋಹಿತ್, ಪಂತ್ ಯಾವ ಅರ್ಥದಲ್ಲಿ ಫಿಟ್​ ಆಗಿದ್ದಾರೆ?- ಸಲ್ಮಾನ್ ಬಟ್
Virat Kohli-Pant-Rohit sharna
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 22, 2022 | 1:25 PM

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಇದೀಗ ಭಾರತೀಯ ಆಟಗಾರರ ಫಿಟ್​ನೆಸ್ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಲು ಆಟಗಾರರ ಫಿಟ್​ನೆಸ್​ ಸಮಸ್ಯೆಯೇ ಕಾರಣ ಎಂದು ಪಾಕ್ ಆಟಗಾರ ಅಭಿಪ್ರಾಯಪಟ್ಟಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬೌಲರ್‌ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು. ಇದರ ಜೊತೆ ಟೀಮ್ ಇಂಡಿಯಾ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದಕ್ಕೆ ಮುಖ್ಯ ಕಾರಣ ಭಾರತ ತಂಡದಲ್ಲಿನ ಫಿಟ್​ನೆಸ್​ ಕೊರತೆ ಎಂದು ಸಲ್ಮಾನ್ ಬಟ್ ಹೇಳಿದರು.

ಜನರು ಈ ಬಗ್ಗೆ ಯೋಚಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನ್ನ ಪ್ರಕಾರ ಭಾರತೀಯ ಆಟಗಾರರ ಫಿಟ್‌ನೆಸ್ ಸೂಕ್ತವಾಗಿಲ್ಲ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಯ್ದ ಕೆಲವು ಆಟಗಾರರನ್ನು ಹೊರತುಪಡಿಸಿ, ಉಳಿದ ಆಟಗಾರರ ಫಿಟ್​ನೆಸ್ ಹೊಂದಿಲ್ಲ. ಇದಲ್ಲದೆ ಟೀಮ್ ಇಂಡಿಯಾ ವೇಗದ ಬೌಲರ್‌ಗಳಿಗೆ ವೇಗದ ಕೊರತೆಯಿದೆ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.

ಟಿ20 ವಿಶ್ವಕಪ್‌ಗೂ ಮುನ್ನ ವೇಗದ ಬೌಲಿಂಗ್ ಮತ್ತು ಫಿಟ್‌ನೆಸ್ ಭಾರತ ತಂಡದ ಆತಂಕದ ವಿಷಯವಾಗಿದೆ. ಕೊಹ್ಲಿ, ಪಾಂಡ್ಯ ಅವರನ್ನು ಬಿಟ್ಟು ಬಿಡಿ, ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರು ತಮ್ಮ ಫಿಟ್​ನೆಸ್ ಅನ್ನು ಸುಧಾರಿಸಬೇಕಾಗಿದೆ ಎಂದು ಪಾಕ್ ಆಟಗಾರ ಅಭಿಪ್ರಾಯಪಟ್ಟರು.

ಇದನ್ನೂ ಓದಿ
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಭಾರತೀಯ ಆಟಗಾರರು ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು. ಅವರು ಹೆಚ್ಚಿನ ಪಂದ್ಯಗಳನ್ನು ಸಹ ಆಡುತ್ತಾರೆ. ಇದಾಗ್ಯೂ ಅವರ ಫಿಟ್​ನೆಸ್ ಸರಿಯಾಗಿಲ್ಲ ಎಂದರೆ ಏನರ್ಥ?. ಟೀಮ್ ಇಂಡಿಯಾ ಆಟಗಾರರನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಆಟಗಾರರೊಂದಿಗೆ ಹೋಲಿಸಿದರೆ, ಭಾರತೀಯ ಕ್ರಿಕೆಟಿಗರು ಅವರಿಗಿಂತ ಬಹಳ ಹಿಂದೆ ಇದ್ದಾರೆ ಎಂದರು. ಅಷ್ಟೇ ಅಲ್ಲದೆ ಫಿಟ್​ನೆಸ್ ವಿಷಯದಲ್ಲಿ ಇತರೆ ಏಷ್ಯಾ ತಂಡಗಳು ಕೂಡ ಭಾರತಗಿಂತ ಮುಂದಿವೆ.

ಪ್ರಸ್ತುತ ಭಾರತ ತಂಡದಲ್ಲಿರುವ ಆಟಗಾರರನ್ನೇ ನೋಡಿ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ಅಂತಹ ಫಿಟ್​ನೆಸ್ ಹೊಂದಿಲ್ಲ. ರೋಹಿತ್ ಶರ್ಮಾ, ರಿಷಭ್ ಪಂತ್​ ಅವರಂತಹ ಆಟಗಾರರು ಫಿಟ್​ನೆಸ್ ಹೊಂದಿಲ್ಲ. ಅದರಲ್ಲೂ ಕೆಲ ಆಟಗಾರರು ತುಂಬಾ ದಪ್ಪಗಿದ್ದಾರೆ. ಅವರು ತಮ್ಮ ಫಿಟ್​ನೆಸ್​ ಮೇಲೂ ಕೂಡ ಗಮನ ಕೇಂದ್ರೀಕರಿಸಬೇಕಿದೆ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್