6,6,6,6,6: ಬ್ಯಾಟಿಂಗ್​ನಲ್ಲಿ ತೂಫಾನ್, ಬೌಲಿಂಗ್​ನಲ್ಲಿ ಹ್ಯಾಟ್ರಿಕ್..!

CPL 2022: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಡಿಯನ್ ಸ್ಮಿತ್ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ವಿಶೇಷ. ಅಂದರೆ ಡೆತ್​ ಓವರ್​ಗಳ ವೇಳೆ ಬ್ಯಾಟ್ ಬೀಸಿದ ಸ್ಮಿತ್ ಅಕ್ಷರಶಃ ಅಬ್ಬರಿಸಿದರು.

6,6,6,6,6: ಬ್ಯಾಟಿಂಗ್​ನಲ್ಲಿ ತೂಫಾನ್, ಬೌಲಿಂಗ್​ನಲ್ಲಿ ಹ್ಯಾಟ್ರಿಕ್..!
Odean Smith
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 22, 2022 | 12:55 PM

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯರ್ ಪ್ರೀಮಿಯರ್ ಲೀಗ್​ನಲ್ಲಿ (CPL 2022) ಒಡಿಯನ್ ಸ್ಮಿತ್ (Odean Smith) ಅಕ್ಷರಶಃ ಅಬ್ಬರಿಸಿದ್ದಾರೆ. ಸಿಪಿಎಲ್​ನ 25ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮೈಕಾ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಜಮೈಕಾ ಬೌಲರ್​ಗಳು 15 ಓವರ್​ನಲ್ಲಿ ನೀಡಿದ್ದು ಕೇವಲ 97 ರನ್​ಗಳು ಮಾತ್ರ. ಅಷ್ಟೇ ಅಲ್ಲದೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ 6 ಪ್ರಮುಖ ವಿಕೆಟ್​ಗಳನ್ನು ಕೂಡ ಉರುಳಿಸಿದ್ದರು.

ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಡಿಯನ್ ಸ್ಮಿತ್ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ವಿಶೇಷ. ಅಂದರೆ ಡೆತ್​ ಓವರ್​ಗಳ ವೇಳೆ ಬ್ಯಾಟ್ ಬೀಸಿದ ಸ್ಮಿತ್ ಅಕ್ಷರಶಃ ಅಬ್ಬರಿಸಿದರು. ಅದರಲ್ಲೂ ಪ್ರಿಟೋರಿಯಸ್ ಎಸೆದ 18ನೇ ಓವರ್‌ನಲ್ಲಿ ಸಿಕ್ಸ್​ಗಳ ಸುರಿಮಳೆಗೈದರು.

ಇದನ್ನೂ ಓದಿ
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಪ್ರಿಟೋರಿಯಸ್‌ನ ಮೊದಲ ಎಸೆತದಲ್ಲಿ ಸ್ಮಿತ್ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ಯಾವುದೇ ರನ್​ ಮೂಡಿಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಡೀಪ್​ ಕವರ್​ನತ್ತ ಸಿಕ್ಸ್ ಸಿಡಿಸಿದರು. ನಾಲ್ಕನೇ ಎಸೆತ ವೈಡ್. ಆ ಬಳಿಕ ಎಸೆದ ಮತ್ತೊಂದು ಎಸೆತದಲ್ಲಿ ಮಿಡ್ ವಿಕೆಟ್​ನತ್ತ ಸಿಕ್ಸರ್ ಬಾರಿಸಿದರು. ಐದನೇ ಮತ್ತು ಆರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಬಾರಿಸುವ ಮೂಲಕ ಒಡಿಯನ್ ಸ್ಮಿತ್ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದರು. ಇನ್ನು 20ನೇ ಓವರ್​ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸುವ ಮೂಲಕ ಕೇವಲ 16 ಎಸೆತಗಳಲ್ಲಿ 42 ರನ್​ ಚಚ್ಚಿದರು.

ಒಡಿಯನ್ ಸ್ಮಿತ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಜಮೈಕಾ ಅಮೆಜಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್​ ಕಲೆಹಾಕಿತು. 179 ರನ್​ಗಳ ಟಾರ್ಗೆಟ್ ಪಡೆದ ಜಮೈಕಾ ತಂಡವು ಭರ್ಜರಿ ಆರಂಭ ಪಡೆದಿತ್ತು. ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಕೇವಲ 66 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 104 ರನ್ ಬಾರಿಸಿ ಅಬ್ಬರಿಸಿದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

ಇದಾಗ್ಯೂ ಪಂದ್ಯವು ಕೊನೆಯ ಓವರ್​ನತ್ತ ಸಾಗಿತ್ತು. ಆದರೆ 20ನೇ ಓವರ್ ಎಸೆಯಲು ಬಂದ ಒಡಿಯನ್ ಸ್ಮಿತ್ ಮತ್ತೆ ಪಂದ್ಯದ ಚಿತ್ರಣ ಬದಲಿಸಿದ್ದರು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಬಾಂಡನ್ ಕಿಂಗ್ ಸಿಕ್ಸರ್ ಬಾರಿಸಿದರು. ಆದರೆ ಎರಡನೇ ಎಸೆತದಲ್ಲಿ ಕಿಂಗ್​ಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ. ಮೂರನೇ ಎಸೆತದಲ್ಲಿ ಕಿಂಗ್ ಅವರನ್ನು  ರನ್ ಔಟ್ ಮಾಡುವ ಮೂಲಕ ಒಡಿಯನ್ ಸ್ಮಿತ್ ಗೆಲುವನ್ನು ಖಚಿತಪಡಿಸಿದರು.

ನಾಲ್ಕನೇ ಎಸೆತದಲ್ಲಿ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದರು. ಐದನೇ ಎಸೆತದಲ್ಲಿ ಅಮೀರ್ ಅವರನ್ನೂ ಸಹ ಸ್ಮಿತ್ ರನೌಟ್ ಮಾಡಿದರು. ಈ ಮೂಲಕ ಒಡಿಯನ್ ಸ್ಮಿತ್ ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪತನಕ್ಕೆ ಕಾರಣರಾದರು. ಸ್ಮಿತ್ ಅವರ ಈ ಆಲ್​ರೌಂಡರ್ ಪ್ರದರ್ಶನದ ನೆರವಿನಿಂದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು 12 ರನ್​ಗಳಿಂದ ರೋಚಕ ಜಯ ಸಾಧಿಸಿತು.