ICC Test Rankings: ಕೊಹ್ಲಿಗೆ ಹಿಂಬಡ್ತಿ, ಒಂಬತ್ತನೇ ಸ್ಥಾನಕ್ಕೇರಿದ ಬುಮ್ರಾ! ಟಾಪ್ 10 ರಲ್ಲಿ ಮೂವರು ಭಾರತೀಯರು

| Updated By: ಪೃಥ್ವಿಶಂಕರ

Updated on: Aug 11, 2021 | 3:44 PM

ICC Test Rankings: ಜೋ ರೂಟ್ 846 ಅಂಕಗಳೊಂದಿಗೆ 4 ನೇ ಸ್ಥಾನವನ್ನು ತಲುಪಿದ್ದಾರೆ. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ 791 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.

ICC Test Rankings: ಕೊಹ್ಲಿಗೆ ಹಿಂಬಡ್ತಿ, ಒಂಬತ್ತನೇ ಸ್ಥಾನಕ್ಕೇರಿದ ಬುಮ್ರಾ! ಟಾಪ್ 10 ರಲ್ಲಿ ಮೂವರು ಭಾರತೀಯರು
Team India Test
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಸರಣಿಯ ಎರಡನೇ ಪಂದ್ಯವು ಆಗಸ್ಟ್ 12 ರಿಂದ ಲಾರ್ಡ್ಸ್​ನಲ್ಲಿ ಆರಂಭವಾಗಲಿದೆ. ಈ ಟೆಸ್ಟ್​ನ ಫಲಿತಾಂಶವು 5 ದಿನಗಳ ನಂತರ ಹೊರಬೀಳಲಿದೆ. ಆದರೆ, ಅದಕ್ಕೂ ಮುನ್ನವೇ ಇಂಗ್ಲೆಂಡ್ ನಾಯಕ ಜೋ ರೂಟ್ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಸೋಲಿಸಿದ್ದಾರೆ. ಜೊತೆಗೆ ರೂಟ್ ಟೀಂ ಇಂಡಿಯಾದ ನಾಯಕನ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಾಯಕರ ನಡುವಿನ ಈ ಕುತೂಹಲಕಾರಿ ಯುದ್ಧವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕಂಡುಬಂದಿದೆ. ಅಲ್ಲಿ ಜೋ ರೂಟ್ ನಾಟಿಂಗ್ಹ್ಯಾಮ್ ಟೆಸ್ಟ್‌ನಲ್ಲಿ ಅರ್ಧ ಶತಕ ಮತ್ತು ಶತಕದ ದೊಡ್ಡ ಪ್ರಯೋಜನವನ್ನು ಪಡೆದಿದ್ದಾರೆ.

ಇಂಗ್ಲೆಂಡ್ ನಾಯಕ ಜೋ ರೂಟ್ ಈಗ ಐಸಿಸಿ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿಗಿಂತ ಮುನ್ನಡೆ ಸಾಧಿಸಿದ್ದಾರೆ. ವಿರಾಟ್ ಅನ್ನು ಹಿಂದಕ್ಕೆ ತಳ್ಳುವ ಮೂಲಕ ಅವರು ನಾಲ್ಕನೇ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಜೋ ರೂಟ್ 846 ಅಂಕಗಳೊಂದಿಗೆ 4 ನೇ ಸ್ಥಾನವನ್ನು ತಲುಪಿದ್ದಾರೆ. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ 791 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ 3 ಭಾರತೀಯರು
ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಟಾಪ್ 10 ಶ್ರೇಯಾಂಕದಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶ್ಚೇನ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಹೊರತುಪಡಿಸಿ, ಇನ್ನೂ ಇಬ್ಬರು ಭಾರತೀಯ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಅಗ್ರ 10 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ರೋಹಿತ್ ಶರ್ಮಾ ಆರನೇ ಸ್ಥಾನದಲ್ಲಿದ್ದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಏಳನೇ ಸ್ಥಾನದಲ್ಲಿದ್ದಾರೆ.

ಜಿಗಿತ ಕಂಡ ಬುಮ್ರಾ ಮತ್ತು ಆಂಡರ್ಸನ್
ಜಸ್‌ಪ್ರೀತ್ ಬುಮ್ರಾ ಮತ್ತೊಮ್ಮೆ ಐಸಿಸಿ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರು 10 ರಿಂದ 9 ನೇ ಸ್ಥಾನಕ್ಕೆ ಏರಿದ್ದಾರೆ. ನಾಟಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಬುಮ್ರಾ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 4 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು. ಬೌಲರ್‌ಗಳ ಶ್ರೇಯಾಂಕದಲ್ಲಿ, ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ ಒಂದು ಸ್ಥಾನ ಜಿಗಿದಿದ್ದಾರೆ. ಅವರು ಈಗ 8 ರಿಂದ 7 ನೇ ಸ್ಥಾನಕ್ಕೆ ಬಂದಿದ್ದಾರೆ.

ಟೆಸ್ಟ್ ಬೌಲರ್‌ಗಳ ಅಗ್ರ 10 ಶ್ರೇಯಾಂಕದಲ್ಲಿ ಇಬ್ಬರು ಭಾರತೀಯ ಬೌಲರ್‌ಗಳನ್ನು ಸೇರಿಸಲಾಗಿದೆ. ಜಸ್‌ಪ್ರೀತ್ ಬುಮ್ರಾ ಹೊರತುಪಡಿಸಿ, ಅಶ್ವಿನ್ ಹೆಸರು ಕೂಡ ಇದೆ.

Published On - 3:29 pm, Wed, 11 August 21