ICC Rankings: ಟಾಪ್-10 ಗೆ ಎಂಟ್ರಿ ಕೊಟ್ಟ ಯಶಸ್ವಿ ಜೈಸ್ವಾಲ್

| Updated By: ಝಾಹಿರ್ ಯೂಸುಫ್

Updated on: Mar 06, 2024 | 2:15 PM

ICC Test Rankings: 2023ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್ ಪಂದ್ಯಗಳನ್ನು ಮಾತ್ರ. ಈ ವೇಳೆ ಕಣಕ್ಕಿಳಿದ 15 ಇನಿಂಗ್ಸ್​ಗಳಲ್ಲಿ 2 ದ್ವಿಶತಕ, 3 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಇದೀಗ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲೂ ಟಾಪ್-10 ರೊಳಗೆ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ICC Rankings: ಟಾಪ್-10 ಗೆ ಎಂಟ್ರಿ ಕೊಟ್ಟ ಯಶಸ್ವಿ ಜೈಸ್ವಾಲ್
Yashasvi Jaiswal
Follow us on

ICC Test Cricket Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟೆಸ್ಟ್ ಬ್ಯಾಟರ್​ಗಳ​ ಹೊಸ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ನ್ಯೂಝಿಲೆಂಡ್​ನ ಕೇನ್ ವಿಲಿಯಮ್ಸನ್ (Kane Williamson) ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಹಾಗೆಯೇ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಕಳೆದ ಬಾರಿ 12ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi Jaiswal )ಈ ಬಾರಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಂದೇ ಒಂದು ಪಂದ್ಯವಾಡದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 9ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈ ಸಲ ಒಂದು ಸ್ಥಾನ ಜಿಗಿತ ಕಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಾಬುಶೇನ್ ಅವರು ಶ್ರೇಯಾಂಕ ಪಟ್ಟಿಯಲ್ಲಿ 5 ಸ್ಥಾನ ಕುಸಿದಿರುವುದು. ಹೀಗಾಗಿ 9ನೇ ಸ್ಥಾನದಲ್ಲಿದ್ದ ಕಿಂಗ್ ಕೊಹ್ಲಿ ಈ ಬಾರಿ 8ನೇ ಸ್ಥಾನಕ್ಕೇರಿದ್ದಾರೆ.

ಕಿಂಗ್ ಕೊಹ್ಲಿಯೇ ಟಾಪ್:

ಈ ಬಾರಿ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್​-10 ನಲ್ಲಿ ಕಾಣಿಸಿಕೊಂಡಿರುವ ಭಾರತೀಯ ಆಟಗಾರರಲ್ಲಿ ವಿರಾಟ್ ಕೊಹ್ಲಿಯೇ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿ ಕೊಹ್ಲಿ 8ನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಯಶಸ್ವಿಯ ಯಶಸ್ಸು:

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಯಶಸ್ವಿ ಜೈಸ್ವಾಲ್ ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್ ಪಂದ್ಯಗಳನ್ನು ಮಾತ್ರ ಎಂಬುದು. ಈ ವೇಳೆ ಬ್ಯಾಟ್ ಬೀಸಿದ 15 ಇನಿಂಗ್ಸ್​ಗಳಿಂದ ಒಟ್ಟು 971 ರನ್ ಕಲೆಹಾಕಿ, ಒಂದೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸಿದ್ದಾರೆ.

ಟೆಸ್ಟ್ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿ:

  1. ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 870 ಪಾಯಿಂಟ್ಸ್​
  2. ಜೋ ರೂಟ್ (ಇಂಗ್ಲೆಂಡ್)- 799 ಪಾಯಿಂಟ್ಸ್ ​
  3. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 789 ಪಾಯಿಂಟ್ಸ್​
  4. ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 771 ಪಾಯಿಂಟ್ಸ್
  5. ಬಾಬರ್ ಆಝಂ (ಪಾಕಿಸ್ತಾನ್)- 768 ಪಾಯಿಂಟ್ಸ್​
  6. ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 755 ಪಾಯಿಂಟ್ಸ್
  7. ದಿಮುತ್ ಕರುಣರತ್ನೆ (ಶ್ರೀಲಂಕಾ)- 750 ಪಾಯಿಂಟ್ಸ್
  8. ವಿರಾಟ್ ಕೊಹ್ಲಿ (ಭಾರತ)- 744 ಪಾಯಿಂಟ್ಸ್​​
  9. ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 743 ಪಾಯಿಂಟ್ಸ್​
  10. ಯಶಸ್ವಿ ಜೈಸ್ವಾಲ್ (ಭಾರತ)- 727 ಪಾಯಿಂಟ್ಸ್​.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ಟಾಪ್-15 ನಲ್ಲಿರುವ ಭಾರತೀಯರು:

  • ವಿರಾಟ್ ಕೊಹ್ಲಿ – 744 ಪಾಯಿಂಟ್ಸ್
  • ಯಶಸ್ವಿ ಜೈಸ್ವಾಲ್- 727 ಪಾಯಿಂಟ್ಸ್​
  • 11. ರೋಹಿತ್ ಶರ್ಮಾ – 720 ಪಾಯಿಂಟ್ಸ್​
  • 14. ರಿಷಭ್ ಪಂತ್ – 699 ಪಾಯಿಂಟ್ಸ್