Ranji Trophy 2024: ವಿದರ್ಭಗೆ ಭರ್ಜರಿ ಜಯ: ರಣಜಿ ಟ್ರೋಫಿ ಫೈನಲ್ಗೆ ಎಂಟ್ರಿ
Vidarbha vs Madhya Pradesh: ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ್ ತಂಡ ಸೋಲನುಭವಿಸಿದೆ. ಅತ್ತ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿರುವ ವಿದರ್ಭ ತಂಡವು ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಈ ಬಾರಿ ರಣಜಿ ಟ್ರೋಫಿಯ ಅಂತಿಮ ಹಣಾಹಣಿಯಲ್ಲಿ ಮುಂಬೈ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ.

ನಾಗ್ಪುರದಲ್ಲಿ ನಡೆದ ರಣಜಿ ಟೂರ್ನಿಯ (Ranji Trophy 2024) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ್ ವಿರುದ್ಧ ವಿದರ್ಭ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿದರ್ಭ ತಂಡವು ಫೈನಲ್ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಥರ್ವ ತೈಡೆ 39 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (63) ಅರ್ಧಶತಕ ಸಿಡಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ತಂಡವು 170 ರನ್ಗಳಿಗೆ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ್ ಪರ ಆರಂಭಿಕ ಆಟಗಾರ ಹಿಮಾಂಶು ಮಂತ್ರಿ (126) ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 252 ರನ್ ಕಲೆಹಾಕಿ ಮಧ್ಯ ಪ್ರದೇಶ್ ತಂಡವು 82 ರನ್ಗಳ ಮುನ್ನಡೆ ಪಡೆಯಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ವಿದರ್ಭ ಪರ ಯಶ್ ರಾಥೋಡ್ 200 ಎಸೆತಗಳಲ್ಲಿ 18 ಫೋರ್ ಹಾಗೂ 2 ಸಿಕ್ಸ್ಗಳೊಂದಿಗೆ 141 ರನ್ ಬಾರಿಸಿದರು. ಮತ್ತೊಂದೆಡೆ ಅಕ್ಷಯ್ ವಾಡ್ಕರ್ 77 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 402 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ನ 82 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 321 ರನ್ಗಳ ಗುರಿ ಪಡೆದಿರುವ ಮಧ್ಯ ಪ್ರದೇಶ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಮೊದಲ 20 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದ್ದರು.
ಆದರೆ ಯಶ್ ದುಬೆ (94) ಹಾಗೂ ಹರ್ಷ್ ಗೌಳಿ (67) ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ವಿದರ್ಭ ಬೌಲರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಮಧ್ಯ ಪ್ರದೇಶ್ ತಂಡವು 227 ರನ್ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ವಿದರ್ಭ ತಂಡವು ಅತ್ಯುತ್ತಮ ಸಾಂಘಿಕ ಪ್ರದರ್ಶನ ನೀಡಿದರು. ಪರಿಣಾಮ 258 ರನ್ಗಳಿಗೆ ಮಧ್ಯ ಪ್ರದೇಶ್ ತಂಡ ಆಲೌಟ್ ಆಯಿತು. ಈ ಮೂಲಕ ವಿದರ್ಭ ತಂಡವು 62 ರನ್ಗಳ ಭರ್ಜರಿ ಜಯ ಸಾಧಿಸಿದೆ.
𝐕𝐢𝐝𝐚𝐫𝐛𝐡𝐚 𝐚𝐫𝐞 𝐢𝐧𝐭𝐨 𝐭𝐡𝐞 𝐟𝐢𝐧𝐚𝐥! 🙌🙌
They beat Madhya Pradesh by 62 runs in a tightly fought contest.
A terrific comeback from the Akshay Wadkar-led side 👌@IDFCFIRSTBank | #VIDvMP | #RanjiTrophy | #SF1
Scorecard ▶️ https://t.co/KsLiJPuqXr pic.twitter.com/YFY1kaO1x7
— BCCI Domestic (@BCCIdomestic) March 6, 2024
ಈ ಗೆಲುವಿನೊಂದಿಗೆ ವಿದರ್ಭ ತಂಡವು ರಣಜಿ ಟ್ರೋಫಿ ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಭಾನುವಾರದಿಂದ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.
ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಯಶ್ ರಾಥೋಡ್ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಯಶ್ ಠಾಕೂರ್ , ಉಮೇಶ್ ಯಾದವ್ , ಆದಿತ್ಯ ಠಾಕರೆ , ಅಕ್ಷಯ್ ವಾಖರೆ , ಅಮನ್ ಮೊಖಾಡೆ.
ಇದನ್ನೂ ಓದಿ: IPL 2024: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಐಪಿಎಲ್ನಿಂದ ಔಟ್..!
ಮಧ್ಯ ಪ್ರದೇಶ್ ಪ್ಲೇಯಿಂಗ್ 11: ಯಶ್ ದುಬೆ , ಹಿಮಾಂಶು ಮಂತ್ರಿ, ಹರ್ಷ್ ಗಾವ್ಲಿ , ಶುಭಂ ಎಸ್ ಶರ್ಮಾ (ನಾಯಕ) , ವೆಂಕಟೇಶ್ ಅಯ್ಯರ್ , ಸರನ್ಶ್ ಜೈನ್ , ಅನುಭವ್ ಅಗರ್ವಾಲ್ , ಕುಮಾರ್ ಕಾರ್ತಿಕೇಯ , ಅವೇಶ್ ಖಾನ್ , ಕುಲ್ವಂತ್ ಖೇಜ್ರೋಲಿಯಾ , ಸಾಗರ್ ಸೋಲಂಕಿ.