Shreyas Iyer: ರಣಜಿ ಟೂರ್ನಿಗೆ ಮರಳಿದ ಶ್ರೇಯಸ್ ಅಯ್ಯರ್

Ranji Trophy 2024: ರಣಜಿ ಟ್ರೋಫಿ ನಾಕೌಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಸಜ್ಜಾಗಿದ್ದಾರೆ. ಶನಿವಾರದಿಂದ ಶುರುವಾಗಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅಯ್ಯರ್ ಮುಂಬೈ ಪರ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

Shreyas Iyer: ರಣಜಿ ಟೂರ್ನಿಗೆ ಮರಳಿದ ಶ್ರೇಯಸ್ ಅಯ್ಯರ್
Shreyas Iyer
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 28, 2024 | 9:42 AM

ಭಾರತ ತಂಡದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ರಣಜಿ ಟೂರ್ನಿಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದರು. ಆದರೆ ಸತತ ವೈಫಲ್ಯ ಅನುಭವಿಸಿದ್ದ ಅವರನ್ನು ಉಳಿದ ಮೂರು ಪಂದ್ಯಗಳಿಂದ ಕೈ ಬಿಡಲಾಗಿತ್ತು. ಇತ್ತ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ ಶ್ರೇಯಸ್ ಅಯ್ಯರ್ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದರ ಬೆನ್ನಲ್ಲೇ ಆಟಗಾರರು ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಬಿಸಿಸಿಐ ಫರ್ಮಾನು ಹೊರಡಿಸಿತ್ತು. ಇದಾಗ್ಯೂ ಶ್ರೇಯಸ್ ಅಯ್ಯರ್ ಮುಂಬೈ ತಂಡದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಬಿಸಿಸಿಐ ಸೂಚನೆಯನ್ನು ದಿಕ್ಕರಿಸುವ ಆಟಗಾರರನ್ನು ಮುಂಬರುವ ಕೇಂದ್ರ ಒಪ್ಪಂದದಿಂದ ಕೈ ಬಿಡಲಾಗುತ್ತದೆ ಎಂಬ ಸುದ್ದಿ ಬೆನ್ನಲ್ಲೇ ಇದೀಗ ಶ್ರೇಯಸ್ ಅಯ್ಯರ್ ಹೆಸರು ಮುಂಬೈ ರಣಜಿ ತಂಡದಲ್ಲಿ ಕಾಣಿಸಿಕೊಂಡಿದೆ.

ಮಾರ್ಚ್ 2 ರಿಂದ ರಣಜಿ ಟ್ರೋಫಿ ಸೆಮಿಫೈನಲ್ ಶುರುವಾಗಲಿದ್ದು, ಈ ಪಂದ್ಯಕ್ಕಾಗಿ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೂಡ ಕಾಣಿಸಿಕೊಂಡಿದೆ. ಇದರೊಂದಿಗೆ ಅಯ್ಯರ್ ಮತ್ತೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲಿರುವುದು ಖಚಿತವಾಗಿದೆ.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಭೂಪೇನ್ ಲಾಲ್ವಾನಿ, ಮುಶೀರ್ ಖಾನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಅಮೋಘತ್‌ಕರ್ , ಆದಿತ್ಯ ಧುಮಾಲ್, ರಾಯ್ಸ್ಟನ್ ಡಯಾಸ್, ಧವಲ್ ಕುಲಕರ್ಣಿ.

ರಣಜಿ ಸೆಮಿಫೈನಲ್ ಮುಖಾಮುಖಿ:

ರಣಜಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಮತ್ತು ಮಧ್ಯ ಪ್ರದೇಶ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ನಾಗ್​ಪುರದಲ್ಲಿ ನಡೆಯಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯವು ಮುಂಬೈನ ಶರದ್ ಪವಾರ್ ಅಕಾಡೆಮಿಯಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ತಮಿಳುನಾಡು ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ಸೆಮಿಫೈನಲ್ ವೇಳಾಪಟ್ಟಿ:

  • ಮಾರ್ಚ್ 2 ರಿಂದ 6: ವಿದರ್ಭ vs ಮಧ್ಯ ಪ್ರದೇಶ್ (ಮೊದಲ ಸೆಮಿಫೈನಲ್)
  • ಮಾರ್ಚ್ 2 ರಿಂದ 6: ತಮಿಳುನಾಡು vs ಮುಂಬೈ (ಎರಡನೇ ಸೆಮಿಫೈನಲ್)
  • ಮಾರ್ಚ್ 10 ರಿಂದ 14: ಫೈನಲ್ ಪಂದ್ಯ.