VIDEO: ಬೆನ್ ಸ್ಟೋಕ್ಸ್ಗೆ ತಿರುಗೇಟು ನೀಡಿದ ಶ್ರೇಯಸ್ ಅಯ್ಯರ್
India vs England 2nd Test: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 28 ರನ್ಗಳಿಂದ ರೋಚಕ ಜಯ ಸಾಧಿಸಿತ್ತು. ಇದೀಗ ಆಂಗ್ಲರ ವಿರುದ್ಧ ಭಾರತ ತಂಡವು 106 ರನ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ವಿಶಾಖಪಟ್ಟಣನಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 106 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 1-1 ಅಂತರದಿಂದ ಸಮಬ ಸಾಧಿಸಿದೆ. ಇದಕ್ಕೂ ಮುನ್ನ ಹೈದರಾಬಾದ್ ಟೆಸ್ಟ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಜಯ ಸಾಧಿಸಿತ್ತು. ಇದೀಗ ಆಂಗ್ಲರನ್ನು ಬಗ್ಗು ಬಡಿಯುವಲ್ಲಿ ಭಾರತೀಯರು ಯಶಸ್ವಿಯಾಗಿದ್ದಾರೆ.
ಇನ್ನು ಈ ಪಂದ್ಯದ ಟರ್ನಿಂಗ್ ಪಾಯಿಂಟ್ಗಳಲ್ಲಿ ಶ್ರೇಯಸ್ ಅಯ್ಯರ್ ಅವರ ಅದ್ಭುತ ಫೀಲ್ಡಿಂಗ್ ಕೂಡ ಒಂದು. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ನಲ್ಲಿ ಅಯ್ಯರ್ ಅತ್ಯುತ್ತಮ ಕ್ಯಾಚ್ ಹಿಡಿದಿದ್ದರು. 76 ರನ್ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕ್ರಾಲಿ ಆಫ್ ಸೈಡ್ನತ್ತ ಬಾರಿಸಿದ ಚೆಂಡನ್ನು ಶ್ರೇಯಸ್ ಅಯ್ಯರ್ ಹಿಮ್ಮುಖವಾಗಿ ಓಡಿ ಅದ್ಭುತವಾಗಿ ಹಿಡಿದಿದ್ದರು.
ಹಾಗೆಯೇ ದ್ವಿತೀಯ ಇನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಶ್ರೇಯಸ್ ಅಯ್ಯರ್ ರನೌಟ್ ಮಾಡಿದ್ದರು. ಬೆನ್ ಫೋಕ್ಸ್ ಚೆಂಡನ್ನು ಫ್ರಂಟ್ ಫೀಲ್ಡರ್ನತ್ತ ಬಾರಿಸಿ ರನ್ ಓಡಿದ್ದರು. ಅತ್ತ ನಾನ್ ಸ್ಟ್ರೈಕರ್ ಕಡೆಯಿಂದ ಓಡಿದ ಬೆನ್ ಸ್ಟೋಕ್ಸ್ ಕ್ರೀಸ್ ತಲುಪುವ ಮುನ್ನವೇ ಚೆಂಡನ್ನು ವಿಕೆಟ್ನತ್ತ ಎಸೆದು ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಅಮೂಲ್ಯ ಯಶಸ್ಸು ತಂದುಕೊಟ್ಟಿದ್ದರು.
ತಿರುಗೇಟು ನೀಡಿದ ಅಯ್ಯರ್:
ಟೀಮ್ ಇಂಡಿಯಾದ ದ್ವಿತೀಯ ಇನಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ 28ನೇ ಓವರ್ನ ಮೊದಲ ಎಸೆತವನ್ನು ಲಾಂಗ್ ಆನ್ನತ್ತ ಬಾರಿಸಿದ ಅಯ್ಯರ್ ಔಟ್ ಆಗುವಲ್ಲಿ ಬೆನ್ ಸ್ಟೋಕ್ಸ್ ಕಾರಣರಾಗಿದ್ದರು. 30 ಯಾರ್ಡ್ ಸರ್ಕಲ್ನಿಂದ ಓಡಿದ ಸ್ಟೋಕ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದು ಪ್ರೇಕ್ಷಕರತ್ತ ಔಟ್ ಎಂದು ಬೆರಳು ತೋರಿಸಿದ್ದರು.
ಶ್ರೇಯಸ್ ಅಯ್ಯರ್ ಕ್ಯಾಚ್:
Ben Stokes takes a Screamer in the first inning to dismiss Shreyas Iyer.
And Iyer comes with an exceptional throw to take the revenge from Ben Stokes.Lession learnt-Never ever make Iyer angry 😡#INDvENG #INDvsENGTest #Ashwin #Bazball #CricketTwitterpic.twitter.com/kXo97S5znn
— Sujeet Suman (@sujeetsuman1991) February 5, 2024
ಬೆನ್ ಸ್ಟೋಕ್ಸ್ ರನೌಟ್:
This was the magical moment in the game which will impact the result of the game.
Shreyas Iyer hits the bullseye 🎯#INDvENG #INDvsENGTest #Bazball #Ashwin #CricketTwitterpic.twitter.com/Q1F60Vg0Ah
— Sujeet Suman (@sujeetsuman1991) February 5, 2024
ಇತ್ತ ದ್ವಿತೀಯ ಇನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರನೌಟ್ ಮಾಡಿದ ಶ್ರೇಯಸ್ ಅಯ್ಯರ್ ಕೂಡ ಅದೇ ಮಾದರಿಯಲ್ಲಿ ಬೆರಳು ತೋರಿಸಿದ್ದಾರೆ. ಈ ಮೂಲಕ ತನ್ನ ಔಟ್ಗೆ ತೋರಿದ ಬೀಳ್ಕೊಡುಗೆ ಸಂಭ್ರಮವನ್ನೇ ಪುನರಾವರ್ತಿಸಿ ಶ್ರೇಯಸ್ ಅಯ್ಯರ್ ಬೆನ್ ಸ್ಟೋಕ್ಸ್ಗೆ ತಿರುಗೇಟು ನೀಡಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.