AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ಮಣಿಸಿ ವಿಶ್ವಕಪ್​ಗೆ ಅರ್ಹತೆ ಪಡೆದ ನೈಜೀರಿಯಾ

2027ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ನೈಜೀರಿಯಾ ಮಹಿಳಾ ತಂಡ ಅರ್ಹತೆ ಪಡೆದುಕೊಂಡಿದೆ. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯುವ ಈ ವಿಶ್ವಕಪ್‌ಗಾಗಿ ನಡೆದ ಅರ್ಹತಾ ಸುತ್ತಿನಲ್ಲಿ ನೈಜೀರಿಯಾ, ಜಿಂಬಾಬ್ವೆಯನ್ನು 4 ರನ್‌ಗಳಿಂದ ಸೋಲಿಸಿ ಅಜೇಯವಾಗಿ ಮುನ್ನಡೆದು ಟೂರ್ನಿಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ನೈಜೀರಿಯಾ ದಕ್ಷಿಣ ಆಫ್ರಿಕಾದೊಂದಿಗೆ ತನ್ನ ಖಂಡವನ್ನು ಪ್ರತಿನಿಧಿಸಲಿದೆ.

ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ಮಣಿಸಿ ವಿಶ್ವಕಪ್​ಗೆ ಅರ್ಹತೆ ಪಡೆದ ನೈಜೀರಿಯಾ
ನೈಜೀರಿಯಾ
ಪೃಥ್ವಿಶಂಕರ
|

Updated on: Sep 06, 2026 | 9:41 PM

Share

ಅಂಡರ್-19 ಮಹಿಳಾ ಟಿ20 ವಿಶ್ವಕಪ್​ 2027 ರಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳದ ಆತಿಥ್ಯದಲ್ಲಿ ನಡೆಯಲಿದೆ. ಈ ಪಂದ್ಯಾವಳಿಗಾಗಿ ಅರ್ಹತಾ ಸುತ್ತು ನಡೆಯುತ್ತಿದ್ದು, ಈ ಸುತ್ತಿನಲ್ಲಿ ಜಿಂಬಾಬ್ವೆ ಅಂಡರ್-19 ಮಹಿಳಾ ತಂಡವನ್ನು 4 ರನ್​​ಗಳಿಂದ ಸೋಲಿಸಿದ ನೈಜೀರಿಯಾ ಅಂಡರ್-19 ಮಹಿಳಾ ತಂಡ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಅರ್ಹತಾ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಪಂದ್ಯಾವಳಿಗೆ ಅರ್ಹತೆ ಪಡೆದಿರುವ ನೈಜೀರಿಯಾ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಜೊತೆಗೆ ತನ್ನ ಖಂಡವನ್ನು ಪ್ರತಿನಿಧಿಸಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೈಜೀರಿಯಾ 98 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕಿ ಕ್ರಿಸ್ಟಾಬೆಲ್ ಚುಕ್ವುಯೋನಿ 21, ಬ್ಯೂಟಿ ಒಗುವೈ 19 ಮತ್ತು ಜೆಸ್ಸಿಕಾ ಬೀನಿ 15 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಜಿಂಬಾಬ್ವೆ ಪರ ಬೌಲಿಂಗ್​ನಲ್ಲಿ ಮಿಂಚಿದ ಕ್ರಿಸ್ಟಿನ್ ಮುತಾಸಾ ಎರಡು ಮತ್ತು ತಡಿವಾನಾಶೆ ಗರುಟ್ಸಾ ಒಂದು ವಿಕೆಟ್ ಪಡೆದರು.

4 ರನ್​​ಗಳಿಂದ ಸೋತ ಜಿಂಬಾಬ್ವೆ

99 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡವು ಕೊನೆಯವರೆಗೂ ಪಂದ್ಯದ ಮೇಲೆ ತನ್ನ ಹಿಡಿತವನ್ನು ಕಾಯ್ದುಕೊಂಡಿತು. ಸಲೇಮ್ ಮುಸೇಕಾ ತಂಡದ ಪರ ಅತಿ ಹೆಚ್ಚು 27 ರನ್ ಗಳಿಸಿದರೆ, ಬೆಥೆಲ್ ಗಿನಿಯಾಮಾ 21 ಮತ್ತು ನಿಕೋಲೆಟ್ ನೈಕಾ 18 ರನ್ ಬಾರಿಸಿದರು. ಆದರೆ ನೈಜೀರಿಯಾದ ಬೌಲರ್‌ಗಳು ಸರಿಯಾದ ಸಮಯದಲ್ಲಿ ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಇದರ ಪರಿಣಾಮದಿಂದಾಗಿ ಜಿಂಬಾಬ್ವೆ ಮಹಿಳಾ ತಂಡ ಸೋಲಿಗೆ ಶರಣಾಗಬೇಕಾಯಿತು. ನೈಜೀರಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಉಸೇನ್ ಪೀಸ್ 3 ವಿಕೆಟ್‌ಗಳನ್ನು ಪಡೆದರೆ, ಜೆನ್ನಿಫರ್ ಗಾಡ್ವಿನ್ ಮತ್ತು ಅನ್ನೋಯ್ಡ್ ಅಖಿಗ್ಬೆ ತಲಾ 2 ವಿಕೆಟ್‌ಗಳನ್ನು ಪಡೆದರು.

ಕೀನ್ಯಾ ವಿರುದ್ಧ ಟಾಂಜಾನಿಯಾ ಗೆಲುವು

ಪ್ಲೇಆಫ್ ಪಂದ್ಯಗಳಲ್ಲಿ, ಐದನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಟಾಂಜಾನಿಯಾ ತಂಡ ಕೀನ್ಯಾವನ್ನು 29 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟಾಂಜಾನಿಯಾ 106 ರನ್ ಗಳಿಸಿತು. ಆ ನಂತರ ಕೀನ್ಯಾವನ್ನು 19 ಓವರ್‌ಗಳಲ್ಲಿ ಕೇವಲ 77 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಗೆಲುವು ದಾಖಲಿಸಿತು. ಏತನ್ಮಧ್ಯೆ, ಏಳನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ, ನಮೀಬಿಯಾ, ಮಲಾವಿ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ಮಲಾವಿ ತಂಡವನ್ನು ಕೇವಲ 38 ರನ್‌ಗಳಿಗೆ ಆಲೌಟ್ ಮಾಡಿದ, ನಮೀಬಿಯಾ ಕೇವಲ 5.1 ಓವರ್‌ಗಳಲ್ಲಿ ಸುಲಭವಾಗಿ ಗುರಿ ಬೆನ್ನಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us