
2026 ರಲ್ಲಿ ನಡೆಯಲ್ಲಿರುವ ಐಸಿಸಿ ಅಂಡರ್-19 ವಿಶ್ವಕಪ್‌ಗೆ (ICC U19 World Cup 2026) 16ನೇ ತಂಡವಾಗಿ ಅಮೆರಿಕ (USA) ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಈ ಐಸಿಸಿ ಟೂರ್ನಿಯಲ್ಲಿ ಆಡುವ ಎಲ್ಲಾ 16 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಜಾರ್ಜಿಯಾದಲ್ಲಿ ನಡೆದ ಅಮೇರಿಕನ್ ಕ್ವಾಲಿಫೈಯರ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಮೆರಿಕ ಈ ಪಂದ್ಯಾವಳಿಗೆ ಅರ್ಹತೆ ಪಡೆದಿದೆ. ಅಮೆರಿಕ ಇನ್ನೂ ಒಂದು ಪಂದ್ಯವನ್ನು ಆಡಬೇಕಾಗಿದೆ, ಆದರೆ ಇದರ ಹೊರತಾಗಿಯೂ ತಂಡವು 2026 ರ ಅಂಡರ್-19 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಕ್ವಾಲಿಫೈಯರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮೆರಿಕ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಅಮೆರಿಕ ವಿಶ್ವಕಪ್‌ಗೆ ಅರ್ಹತೆ ಪಡೆದಿರುವುದನ್ನು ಐಸಿಸಿ ದೃಢಪಡಿಸಿದೆ.
ಅಮೇರಿಕನ್ ಕ್ವಾಲಿಫೈಯರ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಯುಎಸ್ಎ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದಿದೆ. ಕೆನಡಾ ವಿರುದ್ಧದ ತನ್ನ ಮೊದಲ ಪಂದ್ಯವನ್ನು 65 ರನ್‌ಗಳಿಂದ ಗೆದ್ದುಕೊಂಡ ಅಮೆರಿಕ, ಬರ್ಮುಡಾ ಮತ್ತು ಅರ್ಜೆಂಟೀನಾ ತಂಡವನ್ನು ಸೋಲಿಸಿತು. ಇದೀಗ ಅರ್ಜೆಂಟೀನಾ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿರುವ ಅಮೆರಿಕ 10 ಅಂಕಗಳನ್ನು ಗಳಿಸಿದೆ.
USA complete the lineup for the U19 Men’s Cricket World Cup 2026 📋
More ➡️ https://t.co/biHd4Rh10y pic.twitter.com/lVL04yZSSY
— ICC (@ICC) August 16, 2025
2024 ರಿಂದ, 10 ತಂಡಗಳು ಐಸಿಸಿ ಅಂಡರ್ 19 ವಿಶ್ವಕಪ್ 2025 ರಲ್ಲಿ ನೇರ ಪ್ರವೇಶ ಪಡೆದಿವೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಈ ಪಂದ್ಯಾವಳಿಗೆ ನೇರವಾಗಿ ಅರ್ಹತೆ ಪಡೆದಿವೆ. ಅಮೆರಿಕದ ಕ್ವಾಲಿಫೈಯರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಯುಎಸ್ಎ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಆತಿಥ್ಯ ವಹಿಸುತ್ತಿರುವುದರಿಂದ ಜಿಂಬಾಬ್ವೆ ಈ ಪಂದ್ಯಾವಳಿಯಲ್ಲಿ ಆಡುವುದನ್ನು ಕಾಣಬಹುದು. ಟಾಂಜಾನಿಯಾ ಆಫ್ರಿಕಾ ಕ್ವಾಲಿಫೈಯರ್‌ನಿಂದ ಅರ್ಹತೆ ಪಡೆದಿದ್ದರೆ, ಅಫ್ಘಾನಿಸ್ತಾನ ಏಷ್ಯಾ ಕ್ವಾಲಿಫೈಯರ್‌ನಿಂದ ಅರ್ಹತೆ ಪಡೆದಿದೆ. ಯುರೋಪ್ ಕ್ವಾಲಿಫೈಯರ್‌ನಿಂದ ಸ್ಕಾಟ್ಲೆಂಡ್ ಮತ್ತು ಪೂರ್ವ-ಏಷ್ಯಾ ಪೆಸಿಫಿಕ್ ಕ್ವಾಲಿಫೈಯರ್‌ನಿಂದ ಜಪಾನ್ ತಮ್ಮ ಸ್ಥಾನವನ್ನು ಖಚಿತಪಡಿಸಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ