ICC: ಭಾರತೀಯರದ್ದೇ ಪಾರುಪತ್ಯ; ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಮೃತಿ ಸೇರಿದಂತೆ ನಾಲ್ವರು ಭಾರತೀಯರಿಗೆ ಸ್ಥಾನ!

ICC: ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ ಭಾರತ ವನಿತಾ ತಂಡದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ICC: ಭಾರತೀಯರದ್ದೇ ಪಾರುಪತ್ಯ; ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಮೃತಿ ಸೇರಿದಂತೆ ನಾಲ್ವರು ಭಾರತೀಯರಿಗೆ ಸ್ಥಾನ!
ಭಾರತ ವನಿತಾ ತಂಡ
Follow us
| Updated By: ಪೃಥ್ವಿಶಂಕರ

Updated on:Jan 23, 2023 | 5:15 PM

ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ (ICC T20 team of the year 2022) ಭಾರತ ವನಿತಾ ತಂಡದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಸೋಮವಾರ, ಐಸಿಸಿ ಪ್ರಕಟಿಸಿರುವ ಅತ್ಯುತ್ತಮ ಮಹಿಳಾ ಟಿ20 ತಂಡವನ್ನು ಪ್ರತಿಯೊಬ್ಬ ಆಟಗಾರ್ತಿಯ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ತಂಡದ ನಾಯಕತ್ವವನ್ನು ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ಗೆ ವಹಿಸಲಾಗಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರ್ತಿಯರಲ್ಲಿ ಮೊದಲಿಗರಾಗಿದ್ದಾರೆ. ಅವರ ನಂತರ ದೀಪ್ತಿ ಶರ್ಮಾ (Deepti Sharma), ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ (Richa Ghosh and Renuka Singh) ಹೆಸರುಗಳಿವೆ. ಐಸಿಸಿ ತಂಡದಲ್ಲಿ ಗರಿಷ್ಠ ಸಂಖ್ಯೆಯ 4 ಆಟಗಾರ್ತಿಯರು ಭಾರತದವರಾಗಿದ್ದು, ಇವರ ನಂತರ ಆಸ್ಟ್ರೇಲಿಯಾ ತಂಡದ 3 ಆಟಗಾರ್ತಿಯರು ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಿಂದ ತಲಾ ಒಬ್ಬೋಬ್ಬ ಆಟಗಾರ್ತಿಯರು ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾದಿಂದ ಆಯ್ಕೆಯಾದ ಆಟಗಾರ್ತಿಯರು

ಸ್ಮೃತಿ ಮಂಧಾನ: 2022 ರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿಯಾಗಿ ಅಬ್ಬರಿಸಿದ ಸ್ಮೃತಿ ಮಂಧಾನ 33 ರ ಸರಾಸರಿ ಹಾಗೂ 133.48 ರ ಸ್ಟ್ರೈಕ್ ರೇಟ್‌ನಲ್ಲಿ 594 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಮಹಿಳಾ ಏಷ್ಯಾಕಪ್‌ನ ಫೈನಲ್ ಸೇರಿದಂತೆ ಒಟ್ಟು 21 ಇನ್ನಿಂಗ್ಸ್‌ಗಳಲ್ಲಿ 5 ಅರ್ಧ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.

ದೀಪ್ತಿ ಶರ್ಮಾ: ಭಾರತದ ಸ್ಟಾರ್ ಬೌಲರ್ ದೀಪ್ತಿ ಕಳೆದ ವರ್ಷ ಟಿ20ಯಲ್ಲಿ 29 ವಿಕೆಟ್ ಪಡೆದಿದ್ದಲ್ಲದೆ ಈ ಸಾಧನೆಯ ಮೂಲಕ ಮಹಿಳೆಯರ ಟಿ20ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಬೌಲಿಂಗ್​ನಲ್ಲಿ 18.55 ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದ ದೀಪ್ತಿ, ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿದ್ದು, 37ರ ಸರಾಸರಿ ಮತ್ತು 136.02 ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಗಳಿಸಿದ್ದರು. ಹಾಗೆಯೇ ದೀಪ್ತಿ ಏಷ್ಯಾಕಪ್‌ನಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯ ಆಟಗಾರ್ತಿ ಪ್ರಶಸ್ತಿಗೂ ಭಾಜನರಾಗಿದ್ದರು.

ICC: ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ ಪ್ರಕಟ; ಭಾರತದ ಮೂವರು ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ..!

ರಿಚಾ ಘೋಷ್‌: ಭಾರತದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್‌ಗೆ 2022 ವರ್ಷ ಅದ್ಭುತವಾಗಿತ್ತು. ಈ ವರ್ಷ ಆಡಿದ 18 ಪಂದ್ಯಗಳಲ್ಲಿ ರಿಚಾ 13 ಸಿಕ್ಸರ್​ಗಳ ಸಹಿತ 259 ರನ್ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಿಚಾ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದ್ದರು.

ರೇಣುಕಾ ಸಿಂಗ್: 2022ರಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ರೇಣುಕಾ, 23.95 ಸರಾಸರಿ ಮತ್ತು 6.50 ರ ಎಕಾನಮಿ ದರದಲ್ಲಿ 22 ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ರೇಣುಕಾ 16 ಡಾಟ್ ಬಾಲ್ ಎಸೆದು 18 ರನ್ ನೀಡಿ 4 ವಿಕೆಟ್ ಪಡೆದಿದ್ದರು.

ಐಸಿಸಿ ವರ್ಷದ ಟಿ20 ಮಹಿಳಾ ತಂಡ:

ಸ್ಮೃತಿ ಮಂಧಾನ (ಭಾರತ), ಬೆತ್ ಮೂನಿ (ಆಸ್ಟ್ರೇಲಿಯಾ), ಸೋಫಿ ಡಿವೈನ್ (ನಾಯಕಿ- ನ್ಯೂಜಿಲೆಂಡ್), ಆಶ್ ಗಾರ್ಡ್ನರ್ (ಆಸ್ಟ್ರೇಲಿಯಾ), ತಹಿಲಾ ಮೆಗ್ರಾತ್ (ಆಸ್ಟ್ರೇಲಿಯಾ), ನಿದಾ ದಾರ್ (ಪಾಕಿಸ್ತಾನ), ದೀಪ್ತಿ ಶರ್ಮಾ (ಭಾರತ), ರಿಚಾ ಘೋಷ್ (ಭಾರತ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಇನೋಕಾ ರಣವೀರಾ (ಶ್ರೀಲಂಕಾ), ರೇಣುಕಾ ಸಿಂಗ್ (ಭಾರತ).

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Mon, 23 January 23

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ