ಐಸಿಸಿ ಮಹಿಳಾ ಕ್ರಿಕೆಟ್ ಏಕದಿನ ವಿಶ್ವಕಪ್ 2022 (ICC Women’s World Cup 2022) ಶುಕ್ರವಾರ, ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ಶುರುವಾಗಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿದ್ದು, ಚಾಂಪಿಯನ್ ಪಟ್ಟಕ್ಕಾಗಿ 29 ದಿನಗಳ ಕಾಲ ಸೆಣಸಾಡಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ದ ಮಾರ್ಚ್ 6 ರಂದು ಆಡಲಿದೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ವನಿತೆಯರು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದಾರೆ.
ICC ಮಹಿಳಾ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಹೀಗಿದೆ (ICC Women’s World Cup 2022 Full Schedule):
ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಮಾರ್ಚ್ 4, ಟೌರಂಗ
ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 2.30 am ), ಮಾರ್ಚ್ 5, ಡ್ಯುನೆಡಿನ್
ಆಸ್ಟ್ರೇಲಿಯಾ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 5, ಹ್ಯಾಮಿಲ್ಟನ್
ಪಾಕಿಸ್ತಾನ vs ಭಾರತ (ಬೆಳಿಗ್ಗೆ 6.30), ಮಾರ್ಚ್ 6, ಟೌರಂಗ
ನ್ಯೂಜಿಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30 am), ಮಾರ್ಚ್ 7, ಡ್ಯುನೆಡಿನ್
ಆಸ್ಟ್ರೇಲಿಯಾ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 8, ಟೌರಂಗ
ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2.30 am), ಮಾರ್ಚ್ 9, ಡ್ಯುನೆಡಿನ್
ಭಾರತ vs ನ್ಯೂಜಿಲೆಂಡ್ (ಬೆಳಿಗ್ಗೆ 6.30), ಮಾರ್ಚ್ 10, ಹ್ಯಾಮಿಲ್ಟನ್
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 11, ತೌರಂಗ
ಭಾರತ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಮಾರ್ಚ್ 12, ಹ್ಯಾಮಿಲ್ಟನ್
ನ್ಯೂಜಿಲೆಂಡ್ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30), ಮಾರ್ಚ್ 13, ವೆಲ್ಲಿಂಗ್ಟನ್
ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 14, ಟೌರಂಗ
ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ (ಬೆಳಿಗ್ಗೆ 2.30), ಮಾರ್ಚ್ 14, ಹ್ಯಾಮಿಲ್ಟನ್
ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಪಂದ್ಯ 15, ತೌರಂಗ
ಭಾರತ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 16, ವೆಲ್ಲಿಂಗ್ಟನ್
ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 17, ಹ್ಯಾಮಿಲ್ಟನ್
ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30), ಮಾರ್ಚ್ 18, ತೌರಂಗ
ಭಾರತ vs ಆಸ್ಟ್ರೇಲಿಯಾ (ಬೆಳಿಗ್ಗೆ 6.30), ಮಾರ್ಚ್ 19, ಆಕ್ಲೆಂಡ್
ನ್ಯೂಜಿಲೆಂಡ್ vs ಇಂಗ್ಲೆಂಡ್ (ಬೆಳಿಗ್ಗೆ 2.30), ಮಾರ್ಚ್ 20, ಆಕ್ಲೆಂಡ್
ವೆಸ್ಟ್ ಇಂಡೀಸ್ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 21, ಹ್ಯಾಮಿಲ್ಟನ್
ಭಾರತ vs ಬಾಂಗ್ಲಾದೇಶ (ಬೆಳಿಗ್ಗೆ 6.30), ಮಾರ್ಚ್ 22, ಹ್ಯಾಮಿಲ್ಟನ್
ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30), ಮಾರ್ಚ್ 24, ವೆಲ್ಲಿಂಗ್ಟನ್
ಇಂಗ್ಲೆಂಡ್ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 24, ವೆಲ್ಲಿಂಗ್ಟನ್
ಬಾಂಗ್ಲಾದೇಶ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30), ಮಾರ್ಚ್ 25, ಕ್ರೈಸ್ಟ್‌ಚರ್ಚ್
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ (ಬೆಳಿಗ್ಗೆ 2.30), ಮಾರ್ಚ್ 26, ವೆಲ್ಲಿಂಗ್ಟನ್
ಇಂಗ್ಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30), ಮಾರ್ಚ್ 27, ಕ್ರೈಸ್ಟ್‌ಚರ್ಚ್
ಭಾರತ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 27, ವೆಲ್ಲಿಂಗ್ಟನ್
ಸೆಮಿಫೈನಲ್ 1 (ಬೆಳಿಗ್ಗೆ 2.30), ಮಾರ್ಚ್ 30, ಕ್ರೈಸ್ಟ್‌ಚರ್ಚ್
ಸೆಮಿಫೈನಲ್ 2 (ಬೆಳಿಗ್ಗೆ 6.30), ಮಾರ್ಚ್ 31, ವೆಲ್ಲಿಂಗ್ಟನ್
ಫೈನಲ್ (ಬೆಳಿಗ್ಗೆ 6.30), ಏಪ್ರಿಲ್ 3, ಕ್ರೈಸ್ಟ್‌ಚರ್ಚ್
ವಿಶ್ವಕಪ್ ಸ್ವರೂಪ:
ICC ಮಹಿಳಾ ವಿಶ್ವಕಪ್ 2022 ರೌಂಡ್-ರಾಬಿನ್ ಸ್ವರೂಪದಲ್ಲಿ ಆಡಲಾಗುತ್ತದೆ. ಪ್ರತಿ ತಂಡಗಳು ಪರಸ್ಪರ ಒಂದೊಂದು ಪಂದ್ಯ ಆಡಲಿದೆ. ನಂತರ, ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್‌ಗೆ ಎಂಟ್ರಿ ಕೊಡಲಿದೆ. ಸೆಮಿಫೈನಲ್ಸ್ನಲ್ಲಿ ಗೆಲ್ಲುವ 2 ತಂಡಗಳು ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್‌ನಲ್ಲಿ ಫೈನಲ್ ಪಂದ್ಯವಾಡಲಿದ್ದಾರೆ.
ಟೀಮ್ ಇಂಡಿಯಾ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?
ಈ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು. ಅದರಂತೆ ಸ್ಟಾರ್ ಸ್ಪೋರ್ಟ್ಸ್ 2/ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಚಾನೆಲ್ಗಳಲ್ಲಿ ಟೀಮ್ ಇಂಡಿಯಾ ಪಂದ್ಯಗಳ ನೇರ ಪ್ರಸಾರ ಇರಲಿದೆ.
ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲೂ ಪಂದ್ಯಗಳ ಲೈವ್ ಸ್ಟ್ರೀಮ್ ಇರಲಿದೆ. ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್‌ನಲ್ಲಿರುವ ಅಭಿಮಾನಿಗಳು Yupp ಟಿವಿಯಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಬಹುದು.
ಭಾರತ ಮಹಿಳಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ತನಿಯಾ ಭಾಟಿಯಾ, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಯಾಕ್ , ಪೂನಂ ಯಾದವ್
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(ICC Women’s World Cup 2022: Know When Will India Face Pakistan, Full Schedule)
Published On - 4:33 pm, Thu, 3 March 22