AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: ರಣಜಿ ಕ್ರಿಕೆಟ್​ನಲ್ಲಿ 5000ನೇ ಪಂದ್ಯ: ಐತಿಹಾಸಿಕ ಪಂದ್ಯವಾಡಿದ ತಂಡಗಳಾವುವು ಗೊತ್ತಾ?

Ranji Trophy 2022: ಮುಂಬೈ ರಣಜಿ ಟ್ರೋಫಿಯ 88 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, 41 ಬಾರಿ ಪ್ರಶಸ್ತಿ ಗೆದ್ದಿದೆ.2ನೇ ಯಶಸ್ವಿ ತಂಡವೆಂದರೆ ಕರ್ನಾಟಕ.

Ranji Trophy: ರಣಜಿ ಕ್ರಿಕೆಟ್​ನಲ್ಲಿ 5000ನೇ ಪಂದ್ಯ: ಐತಿಹಾಸಿಕ ಪಂದ್ಯವಾಡಿದ ತಂಡಗಳಾವುವು ಗೊತ್ತಾ?
Ranji Trophy
TV9 Web
| Updated By: ಝಾಹಿರ್ ಯೂಸುಫ್|

Updated on: Mar 03, 2022 | 3:40 PM

Share

ದೇಶೀಯ ಅಂಗಳದ ಮಹತ್ವದ ಟೂರ್ನಿ ರಣಜಿ ಕ್ರಿಕೆಟ್​ನಲ್ಲಿ ( Ranji Trophy 2022)  5000ನೇ ಪಂದ್ಯವಾಡಲಾಯಿತು. ಪ್ರಸ್ತುತ ರಣಜಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಈ ವೇಳೆ ಟೂರ್ನಿಯ ಇತಿಹಾಸದ 5000ನೇ ಪಂದ್ಯ ಚೆನ್ನೈನಲ್ಲಿ ಆಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ರೈಲ್ವೇಸ್ ತಂಡಗಳು 5 ಸಾವಿರನೇ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಈ ಇತಿಹಾಸ ನಿರ್ಮಾಣವಾಗಿದೆ. 88 ವರ್ಷಗಳ ಇತಿಹಾಸ ಹೊಂದಿರುವ ಈ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

ರಣಜಿ ಟ್ರೋಫಿಯನ್ನು 1934 ರಲ್ಲಿ ಪ್ರಾರಂಭಿಸಲಾಯಿತು. ಪಂದ್ಯಾವಳಿಯ ಮೊದಲ ಮತ್ತು 5000 ನೇ ಪಂದ್ಯದ ನಡುವೆ ಒಂದು ಕುತೂಹಲಕಾರಿ ವಿಷಯವಿದೆ. ಅದೇನೆಂದರೆ ಈ ಎರಡು ಪಂದ್ಯಗಳು ಚೆನ್ನೈನಲ್ಲೇ ಆಡಲಾಗಿದೆ. ಇದಾಗ್ಯೂ ಸ್ಟೇಡಿಯಂ ಮಾತ್ರ ಬದಲು. ಏಕೆಂದರೆ ಮೊದಲ ಪಂದ್ಯ ಚೆಪಾಕ್‌ನಲ್ಲಿ ನಡೆದಿತ್ತು. ಇದೀಗ ಐಐಟಿ ಮೈದಾನದಲ್ಲಿ 5000ನೇ ಪಂದ್ಯ ನಡೆಯುತ್ತಿದೆ.

ರಣಜಿ ಟ್ರೋಫಿಯ 5000ನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸೂರ್ಯಾಂಶ್ ರೈನಾ ಮತ್ತು ಕಮ್ರಾನ್ ಇಕ್ಬಾಲ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವಿತ್ತು. ಸೂರ್ಯಾಂಶ್ ರೈನಾ 28 ರನ್ ಗಳಿಸಿ ಔಟಾದರೆ, ಆ ಬಳಿಕ ಬಂದ ಫಾಜಿಲ್ ರಶೀದ್ ಕೂಡ ಬೇಗನೆ ನಿರ್ಗಮಿಸಿದರು. ಈ ಎರಡೂ ವಿಕೆಟ್‌ಗಳನ್ನು ಕರ್ಣ್ ಶರ್ಮಾ ಪಡೆದರು. ಈ ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಜಮ್ಮು ಮತ್ತು ಕಾಶ್ಮೀರ 100 ರನ್‌ಗಳ ಗಡಿ ದಾಟಿದೆ.

ರಣಜಿ ಇತಿಹಾಸದಲ್ಲಿ ಮುಂಬೈ ಅತ್ಯಂತ ಯಶಸ್ವಿ ತಂಡ: ಮುಂಬೈ ರಣಜಿ ಟ್ರೋಫಿಯ 88 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, 41 ಬಾರಿ ಪ್ರಶಸ್ತಿ ಗೆದ್ದಿದೆ.2ನೇ ಯಶಸ್ವಿ ತಂಡವೆಂದರೆ ಕರ್ನಾಟಕ. ಕರ್ನಾಟಕ ತಂಡ 8 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಟೂರ್ನಿಯ 2ನೇ ಸ್ಥಾನದಲ್ಲಿದೆ. ಸೌರಾಷ್ಟ್ರ ತಂಡವು ಪ್ರಸ್ತುತ ರಣಜಿ ಟ್ರೋಫಿಯ ಹಾಲಿ ಚಾಂಪಿಯನ್ ಆಗಿದ್ದು, 2020 ರಲ್ಲಿ ಮೊದಲ ಬಾರಿಗೆ ಈ ಟ್ರೋಫಿಯನ್ನು ಗೆದ್ದಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು