ಗಬ್ಬರ್ ಜೇಬಿಗೆ 4 ಕೋಟಿ ರೂ. ಕತ್ತರಿ! ಐಪಿಎಲ್​ನಲ್ಲಿ 8.25 ಕೋಟಿ ಸಂಭಾವನೆ ಪಡೆದ ಧವನ್​ಗೆ ಶಾಕ್​ ಕೊಟ್ಟ ಬಿಸಿಸಿಐ!

Shikhar Dhawan: ಹೊಸ ಬಿಸಿಸಿಐ ಒಪ್ಪಂದದಲ್ಲಿ ಧವನ್‌ಗೆ ಭಾರಿ ನಷ್ಟಕ್ಕೆ ಪ್ರಮುಖ ಕಾರಣವೆಂದರೆ ಅವರು ದೀರ್ಘಕಾಲ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರುವುದು. ವಾಸ್ತವವಾಗಿ, ಶಿಖರ್ ಧವನ್ 2018 ರಿಂದ ಟೆಸ್ಟ್ ಪಂದ್ಯವನ್ನು ಆಡಿಲ್ಲ.

ಗಬ್ಬರ್ ಜೇಬಿಗೆ 4 ಕೋಟಿ ರೂ. ಕತ್ತರಿ! ಐಪಿಎಲ್​ನಲ್ಲಿ 8.25 ಕೋಟಿ ಸಂಭಾವನೆ ಪಡೆದ ಧವನ್​ಗೆ ಶಾಕ್​ ಕೊಟ್ಟ ಬಿಸಿಸಿಐ!
ಶಿಖರ್ ಧವನ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 03, 2022 | 3:14 PM

ಐಪಿಎಲ್ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದ ಟೀಂ ಇಂಡಿಯಾ (Team India)ದ ಎಡಗೈ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ವಾರ್ಷಿಕ 4 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನೂತನ ಪಟ್ಟಿ ಸಿದ್ದಪಡಿಸಿದೆ. ಇದರಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಾರಿ 27 ಆಟಗಾರರೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಆಟಗಾರರ ಪಟ್ಟಿಯಲ್ಲಿ ಒಂದು ಹೆಸರು ಶಿಖರ್ ಧವನ್ ಅವರದ್ದು. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅವರು ಪಡೆದ ಮೊತ್ತದಲ್ಲಿ ಭಾರಿ ಕಡಿತವಾಗಿದೆ. ಅವರ ಗ್ರೇಡ್ ಬದಲಾವಣೆಯಿಂದಾಗಿ ಇದು ಸಂಭವಿಸಿದೆ.

ವಾಸ್ತವವಾಗಿ, ಹಿಂದಿನ ಒಪ್ಪಂದದಲ್ಲಿ, ಧವನ್ ಅವರನ್ನು 10 ಆಟಗಾರರೊಂದಿಗೆ ಎ ಗುಂಪಿನಲ್ಲಿ ಇರಿಸಲಾಗಿತ್ತು. ಆದರೆ ಈ ಬಾರಿ ಎ ಗುಂಪಿನಲ್ಲಿ ಕೇವಲ 5 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಶಿಖರ್ ಧವನ್ ಹೆಸರು ಕಾಣೆಯಾಗಿದೆ. ಬಿಸಿಸಿಐ ಧವನ್ ಅವರನ್ನು ಎ ಗುಂಪಿನಿಂದ ನೇರವಾಗಿ ಸಿ ಗುಂಪಿಗೆ ಸೇರಿಸಿದೆ. ಈ ಮೂಲಕ ಅವರಿಗೆ ವಾರ್ಷಿಕವಾಗಿ ಸಿಗುತ್ತಿದ್ದ ಭಾರೀ ಮೊತ್ತದ ಸಂಭಾವನೆಗೂ ಕಡಿವಾಣ ಹಾಕಿದೆ.

ಧವನ್​ಗೆ 4 ಕೋಟಿ ರೂ. ನಷ್ಟ ಬಿಸಿಸಿಐ ಒಪ್ಪಂದದ ಪ್ರಕಾರ, ಎ ಗುಂಪಿನಲ್ಲಿರುವ ಆಟಗಾರರು ವಾರ್ಷಿಕವಾಗಿ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅದೇ ಸಮಯದಲ್ಲಿ, ಸಿ ಗ್ರೇಡ್ ಹೊಂದಿರುವ ಆಟಗಾರರಿಗೆ ವಾರ್ಷಿಕವಾಗಿ 1 ಕೋಟಿ ರೂ. ಸಂಭಾವನೆ ನೀಡಲಾಗುತ್ತದೆ. ಈಗ ಈ ಪರಿಸ್ಥಿತಿಯಲ್ಲಿ, ಶಿಖರ್ ಧವನ್ ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ ಹೊಸ ಒಪ್ಪಂದದ ಪ್ರಕಾರ ಮಂಡಳಿಯಿಂದ ವಾರ್ಷಿಕವಾಗಿ 4 ಕೋಟಿ ರೂ. ಕಡಿತವಾಗಿದೆ.

ಶಿಖರ್ ಧವನ್ ಅಲ್ಲದೆ ಭಾರತದ ಮತ್ತೊಬ್ಬ ಆಟಗಾರ ಕೂಡ ಇದೇ ರೀತಿಯ ಹಿನ್ನಡೆ ಅನುಭವಿಸಿದ್ದು, ಆ ಹೆಸರು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಗಾಯದ ಕಾರಣ ಕ್ರಿಕೆಟ್‌ನಿಂದ ದೂರವಿರುವುದು ಮಂಡಳಿಯಿಂದ ಅವರ ವಾರ್ಷಿಕ ಆದಾಯಕ್ಕೆ ದೊಡ್ಡ ಕತ್ತರಿ ಹಾಕಿದೆ. ಹೊಸ ಒಪ್ಪಂದದಲ್ಲಿ ಬಿಸಿಸಿಐ ಹಾರ್ದಿಕ್ ಅವರನ್ನು ಕೆಳಗಿಳಿಸಿ ಸಿ ಗ್ರೂಪ್​ಗೆ ಹಾಕಿದೆ.ಹಿಂದಿನ ಒಪ್ಪಂದದಲ್ಲಿ ಧವನ್​ರಂತೆ ಹಾರ್ದಿಕ್​ ಕೂಡ ಎ ಗುಂಪಿನಲ್ಲಿದ್ದರು.

ಕೊನೆಯ ಟೆಸ್ಟ್ ಆಡಿದ್ದು 2018ರಲ್ಲಿ ಹೊಸ ಬಿಸಿಸಿಐ ಒಪ್ಪಂದದಲ್ಲಿ ಧವನ್‌ಗೆ ಭಾರಿ ನಷ್ಟಕ್ಕೆ ಪ್ರಮುಖ ಕಾರಣವೆಂದರೆ ಅವರು ದೀರ್ಘಕಾಲ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರುವುದು. ವಾಸ್ತವವಾಗಿ, ಶಿಖರ್ ಧವನ್ 2018 ರಿಂದ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆಗಮನದ ನಂತರ, ಈ ಸ್ವರೂಪದಲ್ಲಿ ಆಡುವುದು ಅವರಿಗೆ ಕಷ್ಟಕರವಾಗಿದೆ. ಆದರೆ, ನೀವು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರ ಅಂಕಿಅಂಶಗಳನ್ನು ನೋಡಿದರೆ, ಅವರು ಉನ್ನತ ದರ್ಜೆಯ ಆಟಗಾರರಾಗಿ ಕಾಣುತ್ತಾರೆ. ಅವರು 34 ಪಂದ್ಯಗಳಲ್ಲಿ 7 ಶತಕಗಳು ಸೇರಿದಂತೆ 41 ರ ಸರಾಸರಿಯಲ್ಲಿ 2300 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ, ಇದರ ಹೊರತಾಗಿಯೂ ಟೀಂ ಇಂಡಿಯಾದ ಬಿಳಿ ಜೆರ್ಸಿ ಅವರಿಂದ ದೂರವಾಗಿದೆ.

ಇದನ್ನೂ ಓದಿ:Shikhar Dhawan: ವಿಚ್ಛೇದನದ ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಧವನ್! ಭಾವನಾತ್ಮಕ ವಿಡಿಯೋ ವೈರಲ್