IPL 2022: ಐಪಿಎಲ್ ಆರಂಭಕ್ಕೂ ಮುನ್ನ ಲುಕ್ ಬದಲಿಸಿದ ಧವನ್; ಗಬ್ಬರ್ ಹೊಸ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?

Shikhar Dhawan: ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಬದಲಾವಣೆಯ ಚಿತ್ರವನ್ನು ಧವನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

IPL 2022: ಐಪಿಎಲ್ ಆರಂಭಕ್ಕೂ ಮುನ್ನ ಲುಕ್ ಬದಲಿಸಿದ ಧವನ್; ಗಬ್ಬರ್ ಹೊಸ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?
ಶಿಖರ್ ಧವನ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 23, 2022 | 9:47 PM

ಈ ವರ್ಷದ ಐಪಿಎಲ್ 2022 (IPL 2022)ರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಬದಲಾವಣೆಯ ಚಿತ್ರವನ್ನು ಧವನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಗಬ್ಬರ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ತಮ್ಮ ಹೊಸ ನೋಟದ ಫೋಟೋವನ್ನು ಪೋಸ್ಟ್ ಮಾಡಿ, ಈ ಹೊಸ ಕೇಶವಿನ್ಯಾಸ ನನಗೆ ತುಂಬಾ ಇಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ. ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಟಿ20, ಟೆಸ್ಟ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದು, ಹೀಗಾಗಿ ಐಪಿಎಲ್ 2022ರಲ್ಲಿ ನೇರವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಪಂಜಾಬ್ ಕಿಂಗ್ಸ್ ರೂ. 8.25 ಕೋಟಿಗೆ ಖರೀದಿಸಲಾಗಿದೆ. ಹರಾಜಿನಲ್ಲಿ, ಮೊದಲ ಬಿಡ್ ಮಾಡಿದ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಧವನ್ ಅವರನ್ನು ಸೇರಿಸಲಾಗಿತ್ತು.

ಧವನ್ ಹೊಸ ಲುಕ್

ಪಂಜಾಬ್ ತಂಡದ ನಾಯಕ?

ಈ ಹರಾಜಿನಲ್ಲಿ ಹಲವು ಫ್ರಾಂಚೈಸಿಗಳು ಶಿಖರ್ ಧವನ್‌ ಮೇಲೆ ಆಸಕ್ತಿ ತೋರಿಸಿದ್ದವು. ಆದರೆ, ಅಂತಿಮವಾಗಿ ಪಂಜಾಬ್ ಧವನ್ ಖರೀದಿಸುವಲ್ಲಿ ಯಶಸ್ವಿಯಾಯಿತು. ಪಂಜಾಬ್ ತಂಡ ತನ್ನ ನಾಯಕನ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಇಂತಹ ಸನ್ನಿವೇಶದಲ್ಲಿ ಪಂಜಾಬ್ ಫ್ರಾಂಚೈಸಿ ತಂಡ ಶಿಖರ್ ಧವನ್​ಗೆ ಕಮಾಂಡ್ ಹಸ್ತಾಂತರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಿಖರ್ ಧವನ್ ಪ್ರಸ್ತುತ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಖಾಯಂ ಆಟಗಾರರಾಗಿದ್ದಾರೆ. ಆದರೆ, ಟಿ20 ಹಾಗೂ ಟೆಸ್ಟ್‌ ಪಂದ್ಯಗಳ ತಂಡದಲ್ಲಿ ಶಿಖರ್‌ಗೆ ಸ್ಥಾನ ಸಿಗಲಿಲ್ಲ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಟೆಸ್ಟ್ ಸರಣಿಯಲ್ಲಿ ಶಿಖರ್​ಗೆ ಅವಕಾಶ ಸಿಕ್ಕಿರಲಿಲ್ಲ. ಈ ಎರಡು ದೇಶಗಳ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಭಾರತ ತಂಡದ ಸದಸ್ಯರಾಗಿದ್ದರು.

ಐಪಿಎಲ್ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದ ಧವನ್

ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಸನ್ ರೈಸರ್ಸ್ ಹೈದರಾಬಾದ್ ಸ್ವತಃ 5.2 ಕೋಟಿ ರೂ.ಗೆ ಶಿಖರ್ ಧವನ್ ಅವರನ್ನು ಐಪಿಎಲ್ 2018ರ ಹರಾಜಿಗೆ ಸೇರಿಸಿತ್ತು. ಆದರೆ, ಅವರು 2019 ರ ಹರಾಜಿನಲ್ಲಿ ವ್ಯಾಪಾರದ ಮೂಲಕ ದೆಹಲಿ ಕ್ಯಾಪಿಟಲ್ಸ್‌ ತಂಡ ಸೇರಿದರು. ಅಂದಿನಿಂದ ಅವರು 2021 ರವರೆಗೆ ದೆಹಲಿಗಾಗಿ ಆಡಿದ್ದರು.

ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಧವನ್ ಪ್ರಾಬಲ್ಯ

ಪ್ರದರ್ಶನದ ಪ್ರಕಾರ, ಐಪಿಎಲ್‌ನ ಕಳೆದ ಎರಡು ಸೀಸನ್‌ಗಳು ಶಿಖರ್ ಧವನ್‌ಗೆ ಅದ್ಭುತವಾಗಿದೆ. ಅವರು ಐಪಿಎಲ್ 2020 ಮತ್ತು ಐಪಿಎಲ್ 2021 ಎರಡರಲ್ಲೂ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2020 ರ ಋತುವಿನಲ್ಲಿ, ಅವರು ಐಪಿಎಲ್ ಇತಿಹಾಸದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸಿದ ಮೊದಲ ಆಟಗಾರರಾದರು. ಅದೇ ಸಮಯದಲ್ಲಿ ಅವರು ಲೀಗ್‌ನಲ್ಲಿ ತಮ್ಮ 5000 ರನ್‌ಗಳನ್ನು ಪೂರೈಸಿದರು. ಶಿಖರ್ ಧವನ್ IPL 2020 ರಲ್ಲಿ ಮೂರನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಅದೇ ಸಮಯದಲ್ಲಿ, IPL 2021 ರಲ್ಲಿ 587 ರನ್ ಗಳಿಸಿದರು, ಅವರು ಋತುವಿನ ನಾಲ್ಕನೇ ಟಾಪ್ ಸ್ಕೋರರ್ ಆಗಿ ಉಳಿದರು.

ಇದನ್ನೂ ಓದಿ:Shikhar Dhawan: ವಿಚ್ಛೇದನದ ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಧವನ್! ಭಾವನಾತ್ಮಕ ವಿಡಿಯೋ ವೈರಲ್

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!