AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂಬೈ-ಪುಣೆಯಲ್ಲಿ 70 ಲೀಗ್ ಪಂದ್ಯಗಳು; ಐಪಿಎಲ್ ಆರಂಭ ಯಾವಾಗ? ಇಲ್ಲಿದೆ ವಿವರ

IPL 2022: ಮೇ 29ರಂದು ಟೂರ್ನಿಯ ಫೈನಲ್‌ ನಡೆಸಲು ಬಹುತೇಕ ಸಖತ್‌ ಸಿದ್ಧತೆ ನಡೆದಿದೆ. ಫೆಬ್ರವರಿ 24 ರಂದು ಐಪಿಎಲ್ ವೇಳಾಪಟ್ಟಿ ಮತ್ತು ಪಂದ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಈ ದಿನ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದೆ.

IPL 2022: ಮುಂಬೈ-ಪುಣೆಯಲ್ಲಿ 70 ಲೀಗ್ ಪಂದ್ಯಗಳು; ಐಪಿಎಲ್ ಆರಂಭ ಯಾವಾಗ? ಇಲ್ಲಿದೆ ವಿವರ
ಬ್ರಿಜೆಷ್ ಪಟೇಲ್, ಗಂಗೂಲಿ
TV9 Web
| Updated By: ಪೃಥ್ವಿಶಂಕರ|

Updated on: Feb 23, 2022 | 7:38 PM

Share

ಐಪಿಎಲ್ 2022 (IPL 2022) ರ ಮೆಗಾ ಹರಾಜು ಮುಗಿದಿದ್ದು ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳನ್ನು ಬಲಪಡಿಸಿಕೊಂಡಿವೆ. ಈಗ ಐಪಿಎಲ್ ಸಿದ್ದತೆ ಮುಗಿದಿದ್ದು, ಆಟದ ಆರಂಭದ ಬಗ್ಗೆ ಒಂದೊಂದೆ ಮಾಹಿತಿಗಳು ಹೊರಬೀಳುತ್ತಿವೆ. ಅದರ ಸರದಿಯಾಗಿ, ಈಗ ಮುಖ್ಯ ವಿಚಾರವೊಂದು ಹೊರಬಿದ್ದಿದೆ. ಅದೆನೆಂದರೆ, ಈ ಆವೃತ್ತಿಯ ಐಪಿಎಲ್​ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ. ಇದರ ಅಡಿಯಲ್ಲಿ ಹೆಚ್ಚಿನ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯುವ ನಿರೀಕ್ಷೆಯಿದೆ. IPL 2022 ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಲೀಗ್ ಹಂತದ 70 ಪಂದ್ಯಗಳಲ್ಲಿ 55 ಪಂದ್ಯಗಳನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ (Wankhede Stadium), ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂ (DY Patil Stadium in Mumbai)ನಲ್ಲಿ ನಡೆಸಬಹುದು ಎಂದು ಈಗ ಹೇಳಲಾಗುತ್ತಿದೆ. ಉಳಿದ 15 ಪಂದ್ಯಗಳನ್ನು ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಬಹುದು. ಕ್ರಿಕ್‌ಬಜ್ ವೆಬ್‌ಸೈಟ್ ಈ ವರದಿಯನ್ನು ನೀಡಿದೆ. ವಾಂಖೆಡೆ, ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎಲ್ಲಾ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ ಎಂದು ಹೇಳಲಾಗಿದೆ.

ಇದೀಗ, ಐಪಿಎಲ್ 2022 ರ ಆರಂಭದ ಬಗ್ಗೆ ಬಿಸಿಸಿಐನಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ. ಈ ಐಪಿಎಲ್ ಸೀಸನ್ ಮಾರ್ಚ್ 26 ಅಥವಾ 27 ರಿಂದ ಪ್ರಾರಂಭವಾಗಬಹುದು ಎಂದು ತಿಳಿದುಬಂದಿದೆ. ಸ್ಟಾರ್ ಇಂಡಿಯಾ ಪಂದ್ಯಾವಳಿಯ ಪ್ರಸಾರಕರು ಮಾರ್ಚ್ 26 ರಿಂದ (ಶನಿವಾರ) ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಅದೇ ಸಮಯದಲ್ಲಿ, ಮಂಡಳಿಯು ಮಾರ್ಚ್ 27 ರಿಂದ (ಭಾನುವಾರ) ಪ್ರಾರಂಭಿಸಲು ನೋಡುತ್ತಿದೆ. ಯಾವ ದಿನಾಂಕವನ್ನು ಬಿಸಿಸಿಐ ಮುದ್ರೆ ಹಾಕಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಮೇ 29ರಂದು ಟೂರ್ನಿಯ ಫೈನಲ್‌ ನಡೆಸಲು ಬಹುತೇಕ ಸಖತ್‌ ಸಿದ್ಧತೆ ನಡೆದಿದೆ. ಫೆಬ್ರವರಿ 24 ರಂದು ಐಪಿಎಲ್ ವೇಳಾಪಟ್ಟಿ ಮತ್ತು ಪಂದ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಈ ದಿನ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದೆ.

ಅಹಮದಾಬಾದ್‌ನಲ್ಲಿ ನಾಕೌಟ್ ಪಂದ್ಯ!

ಐಪಿಎಲ್ 2022ರ ನಾಕೌಟ್ ಪಂದ್ಯಗಳನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ಯೋಜಿಸಲಾಗಿದೆ. ಇಲ್ಲಿ ಪ್ಲೇಆಫ್‌ನ ನಾಲ್ಕು ಪಂದ್ಯಗಳು ಸೇರಿದಂತೆ ಅಂತಿಮ ಪಂದ್ಯವನ್ನು ಆಡಬಹುದು. ಈ ಬಾರಿ ಕೋವಿಡ್-19 ಕಾರಣ ಸೀಮಿತ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಕೊರೊನಾ ಬೆದರಿಕೆ ಮತ್ತು ಬಯೋ ಬಬಲ್‌ನ ಸಮಸ್ಯೆಗಳಿಂದಾಗಿ ಮುಂಬೈನಲ್ಲಿ ಲೀಗ್ ಹಂತದ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ವೇಳೆ ನಾಕೌಟ್ ಪಂದ್ಯವನ್ನು ಅಹಮದಾಬಾದ್​ನಲ್ಲಿ ನಡೆಸುವ ಯೋಜನೆ ಇದೆ.

2 ವರ್ಷಗಳ ನಂತರ ಐಪಿಎಲ್ ಸಂಪೂರ್ಣವಾಗಿ ಭಾರತದಲ್ಲಿ!

ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಐಪಿಎಲ್ ನಡೆಸುವ ಕುರಿತು ಮಾತುಕತೆ ನಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿಯೇ ಟೂರ್ನಿ ನಡೆಯುವುದು ಖಚಿತ. ಈ ಹಿಂದೆ, ಕಳೆದ ಎರಡು ಸೀಸನ್‌ಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಐಪಿಎಲ್ 2020 ಸಂಪೂರ್ಣವಾಗಿ ಯುಎಇಯಲ್ಲಿ ನಡೆಯಿತು. ಅದೇ ಸಮಯದಲ್ಲಿ, ಐಪಿಎಲ್ 2021 ರ ಅರ್ಧದಷ್ಟು ಪಂದ್ಯಗಳು ಯುಎಇಯಲ್ಲಿ ನಡೆದವು.

ಇದನ್ನೂ ಓದಿ:IPL 2022: ಐಪಿಎಲ್‌ ಹರಾಜು ಪ್ರಾಣಿಗಳ ವ್ಯಾಪಾರದಂತೆ.. ವಿಧಾನ ಬದಲಾಯಿಸಿ: ಹರಾಜಿನ ಬಗ್ಗೆ ರಾಬಿನ್ ಉತ್ತಪ್ಪ ಕಿಡಿ!