AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli 100th Test: ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ; ಕೊಹ್ಲಿ

Virat Kohli 100th Test: 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯೋಚಿಸಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ತನಗೆ ಅತ್ಯಂತ ಪ್ರಮುಖವಾದದ್ದು, ಅದನ್ನು ಜೀವಂತವಾಗಿಡಲು ಟೆಸ್ಟ್ ಕ್ರಿಕೆಟ್ ರುಚಿ ನೋಡುವುದು ಅಗತ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli 100th Test: ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ; ಕೊಹ್ಲಿ
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Mar 03, 2022 | 4:27 PM

Share

ಮೊಹಾಲಿಯಲ್ಲಿ (IND VS SL) ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಕಣಕ್ಕಿಳಿದ ಕೂಡಲೇ, ಇದು ವಿರಾಟ್ ಕೊಹ್ಲಿಗೆ (Virat Kohli 100th Test) ಮರೆಯಲಾಗದ ಪಂದ್ಯವಾಗಲಿದೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಅನ್ನು ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ (India vs Sri Lanka, 1st Test) ಆಡಲಿದ್ದಾರೆ. ಈ ವಿಶೇಷ ಸಾಧನೆಗೂ ಮುನ್ನ ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಮನದಾಳ ಮಾತನ್ನು ಹಂಚಿಕೊಂಡರು. ಇದರಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯೋಚಿಸಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ತನಗೆ ಅತ್ಯಂತ ಪ್ರಮುಖವಾದದ್ದು, ಅದನ್ನು ಜೀವಂತವಾಗಿಡಲು ಟೆಸ್ಟ್ ಕ್ರಿಕೆಟ್ ರುಚಿ ನೋಡುವುದು ಅಗತ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿಯ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ಮಹತ್ವವನ್ನು ಹೇಳಿಕೊಂಡಿದ್ದಾರೆ.

ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 100 ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ನನ್ನ ಪಾಲಿನ ದೊಡ್ಡ ಸಾಧನೆಯಾಗಿದೆ. ದೇವರ ಕೃಪೆಯಿಂದ ನಾನು ನನ್ನ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಿದ್ದೇನೆ. ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಕೋಚ್‌ಗೆ ಬಹಳ ವಿಶೇಷವಾದ ಕ್ಷಣವಾಗಿದೆ. ನಾನು 100ನೇ ಟೆಸ್ಟ್ ಆಡುತ್ತಿರುವುದು ಅವರಿಗೆ ತುಂಬಾ ಸಂತೋಷ ತಂದಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಹೇಳಿದ್ದಿದು 100ನೇ ಟೆಸ್ಟ್ ಆಡುತ್ತಿರುವ ಬಗ್ಗೆ ಮಾತನಾಡಿದ ಕೊಹ್ಲಿ. ಸಣ್ಣ ಇನ್ನಿಂಗ್ಸ್‌ಗಳ ಬಗ್ಗೆ ನಾನು ಎಂದಿಗೂ ಯೋಚಿಸಿಲ್ಲ ಎಂದು ವಿರಾಟ್ ಹೇಳಿದ್ದಾರೆ. ಜೂನಿಯರ್ ಕ್ರಿಕೆಟ್‌ನಲ್ಲಿ ನಾನು ಅನೇಕ ದೊಡ್ಡ ದ್ವಿಶತಕಗಳನ್ನು ಗಳಿಸಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್‌ಗೆ ಬರುವ ಮುನ್ನವೇ 7-8 ದ್ವಿಶತಕಗಳನ್ನು ಬಾರಿಸಿದ್ದೆ. ನನ್ನ ಆಲೋಚನೆ ಯಾವಾಗಲೂ ಸಾಧ್ಯವಾದಷ್ಟು ಕಾಲ ಬ್ಯಾಟಿಂಗ್ ಮಾಡುವುದು. ನಾನು ಯಾವಾಗಲೂ ತಂಡವನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ಮೊದಲ ಇನಿಂಗ್ಸ್‌ನಲ್ಲಿ ಯಾವಾಗಲೂ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದ್ದೆ. ಆದ್ದರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.

ವಿರಾಟ್ ಕೊಹ್ಲಿಯ ಅದ್ಭುತ ಅಂಕಿಅಂಶಗಳು 2011ರಲ್ಲಿ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ 7 ದ್ವಿಶತಕ ಬಾರಿಸಿದ್ದಾರೆ. ಇದಲ್ಲದೇ ಅವರ ಬ್ಯಾಟ್‌ನಿಂದ 28 ಅರ್ಧಶತಕಗಳು ಕೂಡ ಬಂದಿವೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಇದನ್ನೂ ಓದಿ:Virat Kohli 100th Test: ವಿರಾಟ್ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್​ ಯಾವುದು? ನಾಯಕ ರೋಹಿತ್ ಉತ್ತರವಿದು