AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli 100th Test: ಅವತ್ತೇ ಫಸ್ಟ್ ನಾನು ಕೊಹ್ಲಿ ಹೆಸರು ಕೇಳಿದ್ದು! ವಿರಾಟ್ ಯಶಸ್ಸಿನ ದಿನಗಳ ಬಗ್ಗೆ ಸಚಿನ್ ಮಾತು

Virat Kohli 100th Test: 2007 ರ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಪ್ರತಿಯೊಬ್ಬರೂ ಭವಿಷ್ಯದತ್ತ ನೋಡುತ್ತಿರುವ ಆಟಗಾರನ ಬಗ್ಗೆ ಮಾತನಾಡುತ್ತಿದ್ದರು. ಆಗ ನಾನು ವಿರಾಟ್ ಕೊಹ್ಲಿ ಹೆಸರನ್ನು ಮೊದಲು ಕೇಳಿದೆ.

Virat Kohli 100th Test: ಅವತ್ತೇ ಫಸ್ಟ್ ನಾನು ಕೊಹ್ಲಿ ಹೆಸರು ಕೇಳಿದ್ದು! ವಿರಾಟ್ ಯಶಸ್ಸಿನ ದಿನಗಳ ಬಗ್ಗೆ ಸಚಿನ್ ಮಾತು
ಸಚಿನ್, ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Mar 03, 2022 | 3:54 PM

Share

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಟೆಸ್ಟ್‌ಗಳ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಈ ಪಂದ್ಯ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)ಗೆ ಐತಿಹಾಸಿಕ ಮತ್ತು ವಿಶೇಷವಾಗಿದೆ. ಈ ಟೆಸ್ಟ್ ಪಂದ್ಯ ವಿರಾಟ್ ಟೆಸ್ಟ್ ವೃತ್ತಿಜೀವನದ 100ನೇ ಪಂದ್ಯವಾಗಿದೆ. ಇದಕ್ಕಾಗಿ ವಿರಾಟ್ ಜೊತೆಗೆ ಅಭಿಮಾನಿಗಳು ಕೂಡ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿಗೆ ವಿಶೇಷವಾಗುವಂತೆ ಬಿಸಿಸಿಐ ಕೂಡ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅನುಮತಿ ನೀಡಿದೆ. 2008ರಲ್ಲಿ ಕೊಹ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಅಂದಿನಿಂದ ಅವರು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿಯ ಈ ವಿಶೇಷ ಸ್ಥಾನಕ್ಕೆ ಬಿಸಿಸಿಐ ಅನುಭವಿ ಸೌರವ್ ಗಂಗೂಲಿ ಸೇರಿದಂತೆ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.

ಕೊಹ್ಲಿಯ ಪ್ರಯಾಣವನ್ನು ನೆನಪಿಸಿಕೊಂಡ ಸಚಿನ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ವಿಶ್ ಮಾಡಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಚಿನ್ ವಿಡಿಯೋದಲ್ಲಿ, ನಾನು ಕೊಹ್ಲಿ ಬಗ್ಗೆ ಮೊದಲು ಕೇಳಿದಾಗ ನಾವು ಆಸ್ಟ್ರೇಲಿಯಾದಲ್ಲಿದ್ದೆವು ಎಂಬುದು ನನಗೆ ಇನ್ನೂ ನೆನಪಿದೆ. ವಿರಾಟ್ ಕೊಹ್ಲಿ ಪ್ರಯಾಣ ಅದ್ಭುತವಾಗಿದೆ. 2007 ರ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಪ್ರತಿಯೊಬ್ಬರೂ ಭವಿಷ್ಯದತ್ತ ನೋಡುತ್ತಿರುವ ಆಟಗಾರನ ಬಗ್ಗೆ ಮಾತನಾಡುತ್ತಿದ್ದರು. ಆಗ ನಾನು ವಿರಾಟ್ ಕೊಹ್ಲಿ ಹೆಸರನ್ನು ಮೊದಲು ಕೇಳಿದೆ. ಕಳೆದ ಕೆಲವು ವರ್ಷಗಳಿಂದ ಅವರು ಆಡುವುದನ್ನು ನೋಡುವುದು ತುಂಬಾ ಸಂತೋಷವಾಗಿದೆ. ಎಂತಹ ಅದ್ಭುತ ಸಾಧನೆ, ಅವರ 100ನೇ ಟೆಸ್ಟ್ ಪಂದ್ಯಕ್ಕೆ ಅಭಿನಂದನೆಗಳು ಎಂದು ಬಣ್ಣಿಸಿದ್ದಾರೆ.

ಶುಭ ಹಾರೈಸಿದ ದ್ರಾವಿಡ್ ಮತ್ತು ಗಂಗೂಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ವಿರಾಟ್ ಅವರನ್ನು ಹೊಗಳಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ಇದು ಕೊಹ್ಲಿ ಹೆಮ್ಮೆ ಪಡುವಂತಹ ಸಾಧನೆಯಾಗಿದೆ. ಕೊಹ್ಲಿ ನನ್ನ ಜೊತೆಯೂ ಕ್ರಿಕೆಟ್ ಆಡಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಇದು ಸುಲಭವಲ್ಲ. ಅವರು ಇಷ್ಟಕ್ಕೆ ಮಾತ್ರ ತೃಪ್ತರಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಇನ್ನೂ ಸಾಧಿಸುವುದು ಬಹಳಷ್ಟಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಕೊಹ್ಲಿ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಪ್ರಯಾಣ ಅದ್ಭುತವಾಗಿದೆ. 11 ವರ್ಷಗಳ ಹಿಂದೆ ಚೊಚ್ಚಲ ಪಂದ್ಯವನ್ನಾಡಿದ್ದಾಗಿನಿಂದ್ದ ಈವರೆಗೆ ಕೊಹ್ಲಿ ಅದ್ಭುತ ಮೈಲುಗಲ್ಲು ಸಾಧಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:Sachin Tendulkar: ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಿದ ಸಚಿನ್ ತೆಂಡೂಲ್ಕರ್! ಹೃದಯವಂತ ಎಂದ ನೆಟ್ಟಿಗರು; ವಿಡಿಯೋ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು