IND vs AUS: ಭಾರತ-ಆಸ್ಟ್ರೇಲಿಯಾ ಫೈನಲ್​ ಪಂದ್ಯ: ಲೈವ್ ಬೆಟ್ಟಿಂಗ್ ದರ ಎಷ್ಟು?

| Updated By: ಗಂಗಾಧರ​ ಬ. ಸಾಬೋಜಿ

Updated on: Nov 19, 2023 | 7:05 PM

ICC World Cup 2023: ವಿಶ್ವಕಪ್‌ನ 13ನೇ ಆವೃತ್ತಿಯ ಏಕದಿನ ಆವೃತ್ತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಿಗ್ ಮ್ಯಾಚ್ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯ ಹಿನ್ನೆಲೆ ಉಭಯ ತಂಡಗಳ ಬೆಟ್ಟಿಂಗ್ ಮಾರುಕಟ್ಟೆ ಬೆಲೆಯಲ್ಲಿ ಭಾರಿ ಬದಲಾವಣೆ ಕಂಡುಬಂದಿವೆ ಎನ್ನಲಾಗುತ್ತಿದೆ.

IND vs AUS: ಭಾರತ-ಆಸ್ಟ್ರೇಲಿಯಾ ಫೈನಲ್​ ಪಂದ್ಯ: ಲೈವ್ ಬೆಟ್ಟಿಂಗ್ ದರ ಎಷ್ಟು?
ಪ್ರಾತಿನಿಧಿಕ ಚಿತ್ರ
Follow us on

ದೇಶಾದ್ಯಂತ ವಿಶ್ವಕಪ್ (ICC World Cup 2023) ಕ್ರಿಕೆಟ್ ಫೀವರ್ ಜೋರಾಗಿದೆ. ಅಹಮದಾಬಾದ್ ಸ್ಟೇಡಿಯಂನಲ್ಲಿ ವಿಶ್ವಕಪ್​ಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಕಾಳಗ ನಡೆಯುತ್ತಿದೆ. ಇಡೀ ಕರುನಾಡು ಭಾರತಕ್ಕೆ ವಿಶ್ವಕಪ್ ಕಿರೀಟ  ಸಿಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ನಡೆಯುತ್ತಿರುವ ಪಂದ್ಯದಲ್ಲಿ ಉಭಯ ತಂಡಗಳ ಲೈವ್ ಬೆಟ್ಟಿಂಗ್ ದರದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಭಾರತದ ದರವು 1 ರೂ. ಹೆಚ್ಚಾಗಿದೆ.

ಎರಡು ತಂಡಗಳ ದರ ಕಡಿಮೆ 

ಏಕದಿನ ವಿಶ್ವಕಪ್ 2023ರ ಫೈನಲ್​​ಗೆ ಒಂದು ದಿನ ಮುಂಚೆ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಬೆಲೆ ಪ್ರಸ್ತುತ ಪಂದ್ಯದ ಸಮಯದಲ್ಲಿ ಪ್ರಮುಖ ಬದಲಾವಣೆಗಳಾಗಿದೆ. ಈ ಹಿಂದೆ ಭಾರತದ ಬೆಲೆ 0.50 ಪೈಸೆ ಇದ್ದು ಈಗ 1.63 ರೂ.ಗೆ ತಲುಪಿದೆ. ಆದರೆ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಬೆಲೆ 1.90 ರೂ. ಆಗಿದ್ದು, 2.44 ರೂ. ಹೆಚ್ಚಾಗಿದೆ.

ಲೈವ್ ದರಗಳು ಎಷ್ಟು?

ಭಾರತ ಮತ್ತು ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಬೆಟ್ಟಿಂಗ್‌ಗಳಿಗಾಗಿ ಅನೇಕ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳಿವೆ. ಅಂತಹ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್ ಪ್ರಕಾರ, ದರಗಳಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದ ಸಾಧಾರಣ ಬ್ಯಾಟಿಂಗ್​ ಬೆಟ್ಟಿಂಗ್​ ದರ ಕುಸಿಯಲು ಕಾರಣವೇ?

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಭಾರತೀಯ ಆಟಗಾರರು ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿದೆ.

ಇದನ್ನೂ ಓದಿ: IND vs AUS Final: ಕೊಹ್ಲಿ- ರಾಹುಲ್ ಅರ್ಧಶತಕ; ಆಸೀಸ್​ಗೆ 241 ರನ್ ಟಾರ್ಗೆಟ್

ಇಂತಹ ಪರಿಸ್ಥಿತಿಯಲ್ಲಿ ಬೆಟ್ಟಿಂಗ್ ಸೈಟ್‌ನಲ್ಲಿ ಭಾರತಕ್ಕೆ ಸಂಬಂಧಿಸಿದ್ದ ಬೆಟ್ಟಿಂಗ್ ದರಗಳಲ್ಲಿ ಕಡಿಮೆ ಆಗಿದೆ. ಆದರೆ ಫೀಲ್ಡಿಂಗ್​ ಮತ್ತು ಬೌಲಿಂಗ್​ ವಿಚಾರದಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ ಆಸ್ಟ್ರೇಲಿಯಾದ ದರಗಳು ಭಾರತಕ್ಕಿಂತ ಇನ್ನೂ ಹೆಚ್ಚಿವೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ವಿಕೆಟ್ ಉರುಳಿಸಿದ ಆಸೀಸ್ ನಾಯಕ! ಇಡೀ ಕ್ರೀಡಾಂಗಣವೇ ಸ್ತಬ್ಧ; ವಿಡಿಯೋ ನೋಡಿ

ಭಾರತ, ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ 1 ಟಿಕೆಟ್ ಬೆಲೆ ಬರೋಬ್ಬರಿ 1.87 ಲಕ್ಷ ರೂಪಾಯಿಯ ಗಡಿ ದಾಟಿದೆ. ಟೀರ್ 4 ವಿಭಾಗದ ಒಂದೇ ಒಂದು ಟಿಕೆಟ್ ಬೆಲೆ ಬರೋಬ್ಬರಿ 1 ಲಕ್ಷದ 87 ಸಾವಿರ ರೂಪಾಯಿಗೆ ಮಾರಾಟವಾಗಿದೆ, ಟೀರ್ 4 ವಿಭಾಗಕ್ಕಿಂದ ಕೆಳಹಂತದ ಟಿಕೆಟ್​ಗೆ ಭರ್ತಿ 1 ಲಕ್ಷದ 57 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಹೈ-ವೋಲ್ಟೇಜ್ ಕ್ರಿಕೆಟ್ ಕದನ ಕಣ್ತುಂಬಿಕೊಳ್ಳಲು, ಕನಿಷ್ಠ ಬೆಲೆಯ ಟಿಕೆಟ್ ಅಂದ್ರೂ ಬರೋಬ್ಬರಿ 32 ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.