AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್ ಕೊಹ್ಲಿ ವಿಕೆಟ್ ಉರುಳಿಸಿದ ಆಸೀಸ್ ನಾಯಕ! ಇಡೀ ಕ್ರೀಡಾಂಗಣವೇ ಸ್ತಬ್ಧ; ವಿಡಿಯೋ ನೋಡಿ

IND vs AUS Final, ICC World Cup 2023: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಬ್ಯಾಟರ್​ಗಳು ಆಸೀಸ್ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅರ್ಧಶತಕ ಸಿಡಿಸಿ ಭಾರತದ ಇನ್ನಿಂಗ್ಸ್​ಗೆ ಜೀವ ತುಂಬಿದ್ದ ಕಿಂಗ್ ಕೊಹ್ಲಿಯ ವಿಕೆಟ್ ಉರುಳಿಸಿದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದರು.

ಕಿಂಗ್ ಕೊಹ್ಲಿ ವಿಕೆಟ್ ಉರುಳಿಸಿದ ಆಸೀಸ್ ನಾಯಕ! ಇಡೀ ಕ್ರೀಡಾಂಗಣವೇ ಸ್ತಬ್ಧ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on:Nov 19, 2023 | 6:09 PM

Share

2023ರ ಏಕದಿನ ವಿಶ್ವಕಪ್ (ICC World Cup 2023) ಫೈನಲ್‌ನಲ್ಲಿ ಕಾಂಗರೂಗಳು ಮತ್ತೊಮ್ಮೆ ಟೀಂ ಇಂಡಿಯಾವನ್ನು (India Vs Australia) ಹಿಮ್ಮೆಟ್ಟಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಬ್ಯಾಟರ್​ಗಳು ಆಸೀಸ್ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅರ್ಧಶತಕ ಸಿಡಿಸಿ ಭಾರತದ ಇನ್ನಿಂಗ್ಸ್​ಗೆ ಜೀವ ತುಂಬಿದ್ದ ಕಿಂಗ್ ಕೊಹ್ಲಿಯ (Virat Kohli) ವಿಕೆಟ್ ಉರುಳಿಸಿದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಟೀಂ ಇಂಡಿಯಾ ಕ್ಷಿಪ್ರವಾಗಿ 3 ವಿಕೆಟ್ ಕಳೆದುಕೊಂಡ ನಂತರ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಜೊತೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಶತಕದ ಜೊತೆಯಾಟದತ್ತ ಪಯಣ ಆರಂಭವಾಗಿತ್ತು. ಆದರೆ ಪ್ಯಾಟ್, ವಿರಾಟ್ ವಿಕೆಟ್ ಉರುಳಿಸಿ ಆಸ್ಟ್ರೇಲಿಯಾಕ್ಕೆ ದೊಡ್ಡ ಬ್ರೇಕ್ ನೀಡಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾಕ್ಕೆ ಶುಭ್​ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಜೋಡಿ ಭರವಸೆಯ ಆರಂಭ ನೀಡಲಿಲ್ಲ. ರೋಹಿತ್ ಎಂದಿನಂತೆ ಅಬ್ಬರದ ಬ್ಯಾಟಿಂಗ್ ಮಾಡಿದರೆ, ಗಿಲ್ ಮಾತ್ರ ಎಡವಿದರು. ಆದರೆ ಟೀಂ ಇಂಡಿಯಾ 30 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.ಶುಭ್​ಮನ್ ಗಿಲ್ 4 ರನ್ ಗಳಿಸಿ ಔಟಾದರು. ನಂತರ ರೋಹಿತ್ ಮತ್ತು ವಿರಾಟ್ ಎರಡನೇ ವಿಕೆಟ್‌ಗೆ 36 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ವೇಳೆ 47 ರನ್ ಗಳಿಸಿದ್ದ ನಾಯಕ ರೋಹಿತ್ ಔಟಾದರು.

ವಿಶ್ವಕಪ್​ ಫೈನಲ್‌ ಪಂದ್ಯದಲ್ಲಿ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ

ಅರ್ಧಶತಕ ಬಾರಿಸಿದ ವಿರಾಟ್

ರೋಹಿತ್ ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಬೇಗ ಇನ್ನಿಂಗ್ಸ್ ಮುಗಿಸಿದರು. ಕಳೆದ ಕೆಲವು ಪಂದ್ಯಗಳಿಂದ ಶ್ರೇಯಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹಾಗಾಗಿ ಈ ಪಂದ್ಯದಲ್ಲೂ ಶ್ರೇಯಸ್ ಅದೇ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಶ್ರೇಯಸ್ ಕೂಡ ಗಿಲ್ ಅವರಂತೆಯೇ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಬಳಿಕ ಕಣಕ್ಕೆ ಇಳಿದ ಕೆ.ಎಲ್. ಕೆಎಲ್ ಮತ್ತು ವಿರಾಟ್ ಇಬ್ಬರೂ ಟೀಮ್ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರೂ ಸಿಂಗಲ್ಸ್ ಮತ್ತು ಡಬಲ್ಸ್ ಗಳಿಸಿ ಸ್ಕೋರ್ ಬೋರ್ಡ್ ಮೇಲೆತ್ತಿದರು. ಇದೇ ವೇಳೆ ವಿರಾಟ್ ವಿಶ್ವಕಪ್‌ನಲ್ಲಿ ಸತತ ಐದನೇ ಅರ್ಧಶತಕ ದಾಖಲಿಸಿದರು.

View this post on Instagram

A post shared by ICC (@icc)

ಕಾಂಗರೂಗಳ ವಿರುದ್ಧ ವಿರಾಟ್ ಹೋರಾಟ

ಈ ವೇಳೆ ವಿರಾಟ್ ಮತ್ತು ಕೆಎಲ್ ನಾಲ್ಕನೇ ವಿಕೆಟ್‌ಗೆ 67 ರನ್​ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಪ್ಯಾಟ್ ಕಮಿನ್ಸ್ 29ನೇ ಓವರ್ ನ ಮೂರನೇ ಎಸೆತದಲ್ಲಿ ವಿರಾಟ್ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ವಿರಾಟ್ 63 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅರ್ಧಶತಕ ಬಾರಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ಶತಕ ಬಾರಿಸುತ್ತಾರೆ ಎಂದು ಕಾಯುತ್ತಿದ್ದ ಇಡೀ ಕ್ರೀಡಾಂಗಣ, ಕೊಹ್ಲಿ ಔಟಾಗುತ್ತಿದ್ದಂತೆ ಪೂರ್ಣ ಸ್ತಬ್ಧವಾಯಿತು. ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 216 ರನ್ ಕಲೆಹಾಕಿದೆ.

Published On - 5:38 pm, Sun, 19 November 23

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ