ವಿಶ್ವಕಪ್​ ಫೈನಲ್‌ ಪಂದ್ಯದಲ್ಲಿ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ

IND vs AUS Final, ICC World Cup 2023: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ 2023 ಫೈನಲ್​ ಪಂದ್ಯ ನಡೆಯುವಾಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿದೆ. ಓರ್ವ ಆಸ್ಟ್ರೇಲಿಯನ್​ ವ್ಯಕ್ತಿ ಏಕಾಏಕಿ ಮೈದಾನಕ್ಕೆ ನುಗ್ಗಿದ್ದು, ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ.

ವಿಶ್ವಕಪ್​ ಫೈನಲ್‌ ಪಂದ್ಯದಲ್ಲಿ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ
ಮೈದಾನಕ್ಕೆ ನುಗ್ಗಿದ ಅಭಿಮಾನಿ
Follow us
|

Updated on:Nov 19, 2023 | 5:27 PM

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ 2023 ಫೈನಲ್​ ಪಂದ್ಯ (ICC World Cup 2023) ನಡೆಯುವಾಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಓರ್ವ ಆಸ್ಟ್ರೇಲಿಯನ್​ ವ್ಯಕ್ತಿ ಏಕಾಏಕಿ ಮೈದಾನಕ್ಕೆ ನುಗ್ಗಿದ್ದು, ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ಪ್ಯಾಲೆಸ್ಟೀನ್‌ ಟಿ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬ ಪಂದ್ಯ ನಡೆಯುತ್ತಿರುವಾಗ ಮೈದಾನಕ್ಕೆ ನುಗ್ಗಿದ್ದು, ಬಳಿಕ ಆತ ನನ್ನು ಬಂಧಿಸಲಾಗಿದೆ. ನಂತರ ಪಂದ್ಯವನ್ನು ಪುನರಾರಂಭಿಸಲಾಗಿದೆ.

ವಿಶ್ವಕಪ್​​ ಫೈನಲ್​ನಲ್ಲಿ ಅಹಮದಾಬಾದ್​ ನಗರ ಸೇರಿದಂತೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 6 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವರದಿ ಆಗಿದೆ. ಅದರ ಮಧ್ಯೆಯೂ ಭದ್ರತಾ ಲೋಪ ಉಂಟಾಗಿದೆ.

ಎಎನ್​ಐ ಟ್ವೀಟ್​ 

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳು ಸದ್ಯ ಮೈದಾನದಲ್ಲಿ ಮುಖಾಮುಖಿಯಾಗಿವೆ. ಭಾರತವು ತನ್ನ ಮೂರನೇ ODI ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಆದರೆ ಆಸ್ಟ್ರೇಲಿಯಾ ದಾಖಲೆಯ ಆರನೇ ವಿಜಯಕ್ಕಾಗಿ ಹಾತೊರೆಯುತ್ತಿದೆ.

ಇದನ್ನೂ ಓದಿ: IND vs AUS: ತಂಡವನ್ನು ಮುನ್ನಡೆಸಬೇಕೆಂಬ ನನ್ನ ಕನಸು ನನಸಾಗಿದೆ: ರೋಹಿತ್ ಶರ್ಮಾ

30 ಓವರ್​ಗಳ ಮುಕ್ತಾಯದ ವೇಳೆಗೆ 150 ರನ್ ಪೂರೈಸಿದ ಟೀಮ್ ಇಂಡಿಯಾ. 4 ವಿಕೆಟ್ ಕಬಳಿಸುವಲ್ಲಿ ಆಸ್ಟ್ರೇಲಿಯಾ ಬೌಲರ್​ಗಳು ಯಶಸ್ವಿಯಾಗಿದ್ದಾರೆ.

12 ವರ್ಷಗಳ ಬಳಿಕ ತವರಿನಲ್ಲಿ ವಿಶ್ವಕಪ್ ಗೆಲ್ಲೋದಕ್ಕೆ ಭಾರತ ತಂಡ ಪಣತೊಟ್ಟಿದೆ. ಈ ಸಲ ಕಪ್ ನಮ್ದೇ ಅನ್ನೋ ಕೂಗು ಹಳ್ಳಿಯಿಂದ ದಿಲ್ಲಿವರೆಗೂ ಸದ್ದುಮಾಡ್ತಿದ್ದು, ಭಾರತದ ಗೆಲುವಿಗೆ ಅಭಿಮಾನಿಗಳು ದೇಗುಲಗಳಲ್ಲಿ ಪೂಜೆ, ಹವನಗಳು ಮಾಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:06 pm, Sun, 19 November 23

ತಾಜಾ ಸುದ್ದಿ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ