ಸೆಮಿಫೈನಲ್​ನಲ್ಲಿ ಆಫ್ರಿಕಾ- ಆಸೀಸ್ ಮುಖಾಮುಖಿ; ಭಾರತಕ್ಕೆ ಯಾರು ಎದುರಾಳಿ? ಇಲ್ಲಿದೆ ಸೆಮಿಸ್ ಲೆಕ್ಕಾಚಾರ

ICC World Cup 2023: ಪಾಯಿಂಟ್​ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ಯಾರನ್ನು ಎದುರಿಸಲಿದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ.

ಸೆಮಿಫೈನಲ್​ನಲ್ಲಿ ಆಫ್ರಿಕಾ- ಆಸೀಸ್ ಮುಖಾಮುಖಿ; ಭಾರತಕ್ಕೆ ಯಾರು ಎದುರಾಳಿ? ಇಲ್ಲಿದೆ ಸೆಮಿಸ್ ಲೆಕ್ಕಾಚಾರ
ಏಕದಿನ ವಿಶ್ವಕಪ್

Updated on: Nov 08, 2023 | 8:41 AM

ಅಫ್ಘಾನಿಸ್ತಾನ ತಂಡವನ್ನು ಮೂರು ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ (Australia vs Afghanistan) ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಂತರ ಸೆಮಿಫೈನಲ್ ತಲುಪಿದ ಮೂರನೇ ತಂಡ ಎನಿಸಿಕೊಂಡಿದೆ. ಪಾಯಿಂಟ್​ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ಯಾರನ್ನು ಎದುರಿಸಲಿದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ. ಪ್ರಸ್ತುತ ನಾಲ್ಕನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಫೈಟ್ ನಡೆಯುತ್ತಿದೆ. ಈ ಮೂರು ತಂಡಗಳು ತಲಾ 8 ಅಂಕಗಳನ್ನು ಹೊಂದಿವೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳುವುದು ಸವಾಲಾಗಿದೆ. ಹೀಗಾಗಿ ಮೂರೂ ತಂಡಗಳು ಪರಸ್ಪರರನ್ನು ಸೋಲಿಸಲು ತೀವ್ರ ಪ್ರಯತ್ನ ನಡೆಸಲಿವೆ. ಮತ್ತೊಂದೆಡೆ, ಕೊನೆಯ ಪಂದ್ಯದಲ್ಲಿ ಮೂವರೂ ಗೆದ್ದರೆ, ನೆಟ್ ರನ್​ರೇಟ್ ಉತ್ತಮವಾಗಿರುವ ತಂಡ ಸೆಮಿಫೈನಲ್​ಗೇರಲಿದೆ. ಹೀಗಾಗಿ ಒಂದು ಸ್ಥಾನಕ್ಕಾಗಿ ಈಗ ಮೂರು ತಂಡಗಳ ನಡುವೆ ಕದನ ನಡೆಯುತ್ತಿದೆ.

ಲೀಗ್ ಸುತ್ತಿನಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದು 16 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ತಲುಪಿದೆ. ಹಾಗಾಗಿ ಭಾರತ ಅಗ್ರಸ್ಥಾನದಲ್ಲಿ ಉಳಿದಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಉಳಿದಿದೆ. ಹಾಗಾಗಿ ಈ ಪಂದ್ಯದಲ್ಲಿ ಈ ಎರಡೂ ತಂಡಗಳು ಗೆದ್ದರೆ, ಉಭಯ ತಂಡಗಳ ಬಳಿ 14 ಅಂಕ ಇರಲಿದೆ. ಅಥವಾ ಈ ಎರಡೂ ತಂಡಗಳು ಮುಂದಿನ ಪಂದ್ಯದಲ್ಲಿ ಸೋತರೆ ಉಭಯ ತಂಡಗಳ ಬಳಿ 12 ಅಂಕ ಉಳಿಯಲಿದೆ. ಇನ್ನು ನಾಲ್ಕನೇ ಸ್ಥಾನಕ್ಕೇರುವ ತಂಡದಲ್ಲಿ ಹತ್ತು ಅಂಕ ಮಾತ್ರ ಇರಲಿದೆ. ಆದ್ದರಿಂದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾರತಕ್ಕೆ ನ್ಯೂಜಿಲೆಂಡ್, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಸವಾಲು ಎದುರಾಗಲಿದೆ.

ಸೆಮಿಫೈನಲ್ ಲೆಕ್ಕಾಚಾರ ಹೀಗಿದೆ

ಅಫ್ಘಾನಿಸ್ತಾನದ ಕೊನೆಯ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಹೀಗಾಗಿ ಅಫ್ಘಾನಿಸ್ತಾನದ ಮುಂದೆ ಕಠಿಣ ಸವಾಲು ಎದುರಾಗಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ ನೇರವಾಗಿ ಸೆಮಿಫೈನಲ್ ತಲುಪಲಿದೆ. ಆದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತರೆ ಮಾತ್ರ ಅಫ್ಘಾನ್​ಗೆ ಈ ಅವಕಾಶ ಸಿಗಲಿದೆ. ಅದೇ ಸಮಯದಲ್ಲಿ, ನೆಟ್ ರನ್​ರೇಟ್ ಸಹ ಉತ್ತಮವಾಗಿ ಇರಿಸಿಕೊಳ್ಳಬೇಕಾಗಿದೆ.

ನ್ಯೂಜಿಲೆಂಡ್ ಲೆಕ್ಕಾಚಾರ

ಈ ಪಂದ್ಯದ ಆರಂಭದಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಆ ಬಳಿಕ ರೈಲು ಹಳಿ ತಪ್ಪಿ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ನ್ಯೂಜಿಲೆಂಡ್‌ನ ಕೊನೆಯ ಪಂದ್ಯ ಶ್ರೀಲಂಕಾ ವಿರುದ್ಧ ನಡೆಯಲಿದೆ. ಸೆಮಿಫೈನಲ್ ತಲುಪಲು ಈ ಪಂದ್ಯವನ್ನು ಕಿವೀಸ್​ ಗೆಲ್ಲಲೇಬೇಕು. ಇದರೊಂದಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಸೋಲು ಸಹ ಮುಖ್ಯವಾಗಿದೆ. ಮತ್ತೊಂದೆಡೆ, ಕಿವೀಸ್ ಗೆದ್ದರೂ ಅದರ ನೆಟ್ ರನ್ ರೇಟ್ ಕೂಡ ಉತ್ತಮವಾಗಬೇಕಿದೆ.

ಪಾಕ್ ತಂಡದ ಸಾಧ್ಯತೆ ಎಷ್ಟು?

ಪಾಕಿಸ್ತಾನ ಕೂಡ ಸೆಮಿಫೈನಲ್‌ ರೇಸ್‌ನಲ್ಲಿದೆ. ಪಾಕಿಸ್ತಾನದ ಸೆಮಿಸ್ ಲೆಕ್ಕಾಚಾರ ಕೂ ನ್ಯೂಜಿಲೆಂಡ್‌ನಂತೆಯೇ ಇದೆ. ಪಾಕ್ ಬಳಿ 8 ಅಂಕಗಳಿದ್ದು, ಸೆಮಿಫೈನಲ್‌ಗೇರಬೇಕೆಂದರೆ 10 ಅಂಕಗಳು ಬಹಳ ಮುಖ್ಯ. ನವೆಂಬರ್ 11 ರಂದು ಇಂಗ್ಲೆಂಡ್ ವಿರುದ್ಧ ನಡೆಯಲ್ಲಿರುವ ಪಂದ್ಯದಲ್ಲಿ ಪಾಕ್ ಗೆಲ್ಲೇನಬೇಕಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೂ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೋಲುವುದು ಮುಖ್ಯ. ಆಗ ಮಾತ್ರ ನೆಟ್ ರನ್ ರೇಟ್ ಆಧಾರದ ಮೇಲೆ ಪಾಕ್ ತಂಡ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ