AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರನೌಟ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹೀಗೆ ಔಟ್ ಇಲ್ಲ!

ಆಧುನಿಕ ಕ್ರಿಕೆಟ್ ಈಗಾಗಲೇ ಬ್ಯಾಟರ್‌ಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಒಂದೆಡೆ ಮೈದಾನದ ಬೌಂಡರಿಗಳು ಚಿಕ್ಕದಾಗುತ್ತಿದ್ದರೆ, ಮತ್ತೊಂದೆಡೆ ಬ್ಯಾಟ್‌ಗಳ ಗಾತ್ರ ದಪ್ಪಗಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿರುವ ಹೊಚ್ಚ ಹೊಸ ರನೌಟ್ ನಿಯಮವು ಬೌಲರ್‌ಗಳ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರನೌಟ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹೀಗೆ ಔಟ್ ಇಲ್ಲ!
Run OutImage Credit source: GettyImages
ಝಾಹಿರ್ ಯೂಸುಫ್
|

Updated on: Oct 03, 2026 | 9:55 AM

Share

ಕ್ರಿಕೆಟ್ ಜಗತ್ತಿನಲ್ಲಿ ಅಂಪೈರಿಂಗ್ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ನಿರ್ಧಾರಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಕ್ಟೋಬರ್ 1, 2026 ರಿಂದ ಅನ್ವಯವಾಗುವಂತೆ ಕ್ರಿಕೆಟ್‌ನ ನಿಯಮಾವಳಿಗಳಿಗೆಭಾರಿ ಬದಲಾವಣೆ ತಂದಿದೆ. ಈ ಹೊಸ ನಿಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಮತ್ತು ನಾನ್-ಸ್ಟ್ರೈಕರ್ ಬ್ಯಾಟರ್‌ಗಳ ಪಾಲಿಗೆ ವರದಾನವಾಗಿರುವುದು “ರನ್-ಔಟ್ ಮತ್ತು ಸ್ಟಂಪಿಂಗ್” ನಿಯಮದ ತಿದ್ದುಪಡಿ. ಹಾಗಾದರೆ ಏನಿದು ಹೊಸ ನಿಯಮ? ಇದರಿಂದ ಪಂದ್ಯದ ಮೇಲಾಗುವ ಪರಿಣಾಮಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇವಲ ‘ಕೈ ತಾಗಿದರೆ’ ರನೌಟ್ ಇಲ್ಲ!

ಹಳೆಯ ನಿಯಮದ ಪ್ರಕಾರ, ಸ್ಟ್ರೈಕರ್ ಬ್ಯಾಟರ್ ಹೊಡೆದ ನೇರ ಶಾಟ್ ಬೌಲರ್‌ನ ಕೈ ಅಥವಾ ಯಾವುದೇ ಬೆರಳಿಗೆ ಸವರಿಕೊಂಡು ಹೋಗಿ ನಾನ್-ಸ್ಟ್ರೈಕರ್ ತುದಿಯ ವಿಕೆಟ್‌ಗೆ ತಾಗಿದರೆ, ಆ ವೇಳೆ ಬ್ಯಾಟರ್ ಕ್ರೀಸ್‌ನಿಂದ ಹೊರಗಿದ್ದರೆ ರನೌಟ್ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಇಂತಹ ಆಕಸ್ಮಿಕ ಸ್ಪರ್ಶಗಳಿಗೆ ರನೌಟ್ ಸಿಗುವುದಿಲ್ಲ.

ಹೊಸ ನಿಯಮದ ಪ್ರಕಾರ, ರನೌಟ್ ಅಥವಾ ಸ್ಟಂಪಿಂಗ್ ಮಾನ್ಯವಾಗಬೇಕಾದರೆ ಫೀಲ್ಡರ್ ಅಥವಾ ಬೌಲರ್ “ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ” ಹೊಂದಿರಬೇಕು. ಅಂದರೆ ಚೆಂಡನ್ನು ತನ್ನ ಅಂಗೈಯಲ್ಲಿ ಸ್ಪಷ್ಟವಾಗಿ ತಡೆದು ಹಿಡಿತಕ್ಕೆ ಪಡೆದಾಗ ಮಾತ್ರ ಅದು ರನೌಟ್ ಎಂದು ಪರಿಗಣಿಸಲ್ಪಡುತ್ತದೆ.

ಸ್ಟಂಪಿಂಗ್‌ಗೂ ಇದೇ ನಿಯಮ ಅನ್ವಯ:

ವಿಕೆಟ್ ಕೀಪರ್ ಮಾಡುವ ಸ್ಟಂಪಿಂಗ್‌ಗಳಿಗೂ ಈ ನಿಯಮ ಅನ್ವಯಿಸುತ್ತದೆ. ವಿಕೆಟ್ ಕೀಪರ್ ಕೈಗೆ ಚೆಂಡು ಸರಿಯಾಗಿ ಸಿಗದೆ, ಕೇವಲ ಗ್ಲೌಸ್‌ಗೆ ತಾಗಿ ವಿಕೆಟ್ ಮುರಿದರೆ ಬ್ಯಾಟರ್ ಔಟ್ ಆಗುವುದಿಲ್ಲ. ವಿಕೆಟ್ ಬೇರ್ಪಡಿಸುವ ಆ ನಿರ್ದಿಷ್ಟ ಕ್ಷಣದಲ್ಲಿ ಚೆಂಡು ಕೀಪರ್‌ನ ಸಂಪೂರ್ಣ ನಿಯಂತ್ರಣದಲ್ಲಿ ಇರಬೇಕಾದುದು ಕಡ್ಡಾಯ.

ಅಂಪೈರ್‌ಗಳ ಗೊಂದಲಕ್ಕೆ ಮುಕ್ತಿ:

ಆಧುನಿಕ ಕ್ರಿಕೆಟ್‌ನಲ್ಲಿ ಹೈ-ಟೆಕ್ ಕ್ಯಾಮೆರಾಗಳು ಮತ್ತು ಅಲ್ಟ್ರಾ-ಎಡ್ಜ್ ತಂತ್ರಜ್ಞಾನಗಳು ಬಂದಿರುವುದರಿಂದ, ಬೌಲರ್‌ನ ಬೆರಳಿಗೆ ಚೆಂಡು ತಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದು ಥರ್ಡ್ ಅಂಪೈರ್‌ಗಳಿಗೆ ದೊಡ್ಡ ತಲೆನೋವಾಗಿತ್ತು. ಕೇವಲ ಒಂದು ಮಿಲಿಮೀಟರ್‌ನಷ್ಟು ಸ್ಪರ್ಶವಾಗಿದ್ದರೂ ಬ್ಯಾಟರ್‌ಗಳು ಔಟ್ ಆಗುತ್ತಿದ್ದರು. ಈಗ ಐಸಿಸಿ ತಂದಿರುವ ಈ ಹೊಸ ಸ್ಪಷ್ಟನೆಯು ಥರ್ಡ್ ಅಂಪೈರ್‌ಗಳು ನಿಖರ ಹಾಗೂ ಸುಲಭ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ.

ಇದರಿಂದಾಗುವ ಪರಿಣಾಮಗಳೇನು?

ಬ್ಯಾಟರ್‌ಗಳಿಗೆ ಬಿಗ್ ರಿಲೀಫ್:  ಹಳೆಯ ನಿಯಮದಲ್ಲಿದ್ದಾಗ, ಬ್ಯಾಟರ್‌ಗಳು ಸ್ಟ್ರೈಟ್ ಡ್ರೈವ್ ಹೊಡೆದ ತಕ್ಷಣ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟರ್ ಕ್ರೀಸ್ ಒಳಗಿದ್ದರೂ ಭಯದಲ್ಲೇ ಇರಬೇಕಾಗುತ್ತಿತ್ತು. ಬೌಲರ್ ಫಾಲೋ-ಥ್ರೂನಲ್ಲಿ ಚೆಂಡು ಆಕಸ್ಮಿಕವಾಗಿ ಅವರ ಕೈಗೆ ತಾಗಿ ವಿಕೆಟ್‌ಗೆ ಬಿದ್ದರೆ ಬ್ಯಾಟರ್‌ಗಳು ದುರದೃಷ್ಟವಶಾತ್ ಔಟ್ ಆಗುತ್ತಿದ್ದರು. ಇನ್ಮುಂದೆ ಬ್ಯಾಟರ್‌ಗಳು ಈ ರೀತಿಯ ದುರದೃಷ್ಟದ ಔಟ್ ನಿಂದ ಪಾರಾಗಲಿದ್ದಾರೆ.

ಅದೃಷ್ಟದ ವಿಕೆಟ್’ ಕಳೆದುಕೊಂಡ ಬೌಲರ್‌ಗಳು: ಬೌಲರ್‌ಗಳು ಯಾವುದೇ ಶ್ರಮವಿಲ್ಲದೆ, ಕೇವಲ ಚೆಂಡು ಕೈಗೆ ಸವರಿಕೊಂಡು ಹೋಗಿ ಬೀಳುತ್ತಿದ್ದ ರನೌಟ್ ವಿಕೆಟ್‌ಗಳನ್ನು ಇನ್ಮುಂದೆ ಪಡೆಯಲು ಸಾಧ್ಯವಿಲ್ಲ. ಬೌಲರ್ ವಿಕೆಟ್ ಬೇಕೆಂದರೆ ಚೆಂಡನ್ನು ಸ್ಪಷ್ಟವಾಗಿ ತಡೆದು, ನಿಯಂತ್ರಣಕ್ಕೆ ಪಡೆದೇ ವಿಕೆಟ್‌ಗೆ ಹೊಡೆಯಬೇಕಾಗುತ್ತದೆ ಅಥವಾ ತಾಗಿಸಬೇಕಾಗುತ್ತದೆ. ಇದರಿಂದ ಬೌಲರ್‌ಗಳ ‘ಲಕ್ಕಿ ವಿಕೆಟ್’ ಅವಕಾಶ ಕಳೆದುಕೊಂಡಂತಾಗಿದೆ.

ಭಯವಿಲ್ಲದೇ ರನ್ ಓಡಬಹುದು: ಈ ಹಿಂದೆ ಚೆಂಡು ಬೌಲರ್ ಕೈ ತಾಗಬಹುದು ಎಂಬ ಹೆದರಿಕೆಯಿಂದ ನಾನ್-ಸ್ಟ್ರೈಕರ್ ಬ್ಯಾಟರ್‌ಗಳು ಕ್ರೀಸ್ ಬಿಡಲು ಹಿಂಜರಿಯುತ್ತಿದ್ದರು. ಈಗ ನಿಯಮ ಬದಲಾಗಿರುವುದರಿಂದ, ಸ್ಟ್ರೈಕರ್ ಬ್ಯಾಟರ್ ಶಾಟ್ ಹೊಡೆಯುತ್ತಿದ್ದಂತೆ ನಾನ್-ಸ್ಟ್ರೈಕರ್ ಬ್ಯಾಟರ್‌ಗಳು ಯಾವುದೇ ಭಯವಿಲ್ಲದೆ ವೇಗವಾಗಿ ರನ್ ಓಡಲು ಆರಂಭಿಸಬಹುದು. ಇದು ಸಿಂಗಲ್ಸ್ ಮತ್ತು ಡಬಲ್ಸ್ ರನ್‌ಗಳನ್ನು ಹೆಚ್ಚಿಸಲಿದೆ.

ಇದನ್ನೂ ಓದಿ: ಲುಹಾನ್ ವಿಸ್ಫೋಟಕ ಸೆಂಚುರಿ: ಕ್ರಿಸ್ ಗೇಲ್ 175 ರನ್​ಗಳ ವಿಶ್ವ ದಾಖಲೆ ಧೂಳೀಪಟ!

ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿಯ ಈ ಹೊಸ ತಿದ್ದುಪಡಿಯು ಬೌಲರ್‌ಗಳ ಪಾಲಿಗೆ ಅತ್ಯಂತ ಕಠಿಣ ಮತ್ತು ಸವಾಲಿನ ನಿಯಮವಾಗಿದೆ. ಕಠಿಣ ಪರಿಶ್ರಮದಿಂದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಬೌಲರ್‌ಗಳಿಗೆ, ಫಾಲೋ-ಥ್ರೂನಲ್ಲಿ ಸಿಗುತ್ತಿದ್ದ ಕನಿಷ್ಠ ‘ಅದೃಷ್ಟದ ವಿಕೆಟ್’ ಅವಕಾಶವನ್ನೂ ಈ ನಿಯಮ ಕಿತ್ತುಕೊಂಡಿದೆ. ಆಟದಲ್ಲಿ ತಂತ್ರಜ್ಞಾನದ ನಿಖರತೆ ತರಲು ಇದನ್ನು ಜಾರಿಗೆ ತರಲಾಗಿದ್ದರೂ, ಇದು ಕ್ರಿಕೆಟ್ ಅನ್ನು ಮತ್ತಷ್ಟು ಬ್ಯಾಟರ್‌ಗಳ ಪರವಾಗಿಸಿ, ಬೌಲರ್‌ಗಳನ್ನು ಮತ್ತಷ್ಟು ಅಸಹಾಯಕರನ್ನಾಗಿ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್