UAE ಯಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ಗೆ ಡೇಟ್ ಫಿಕ್ಸ್ ಆಗಿದೆ. ಈ ಟೂರ್ನಿಯ 2ನೇ ಆವೃತ್ತಿ ಜನವರಿಂದ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯ ಫೆಬ್ರವರಿ 18 ರಂದು ನಡೆಯಲಿದೆ. ಈ ಬಾರಿ ಕೂಡ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಅಬುಧಾಬಿ ನೈಟ್ ರೈಡರ್ಸ್, ಡೆಸರ್ಟ್ ವೈಪರ್ಸ್, ದುಬೈ ಕ್ಯಾಪಿಟಲ್ಸ್, ಗಲ್ಫ್ ಜೈಂಟ್ಸ್, ಎಂಐ ಎಮಿರೇಟ್ಸ್ ಮತ್ತು ಶಾರ್ಜಾ ವಾರಿಯರ್ಸ್ ತಂಡಗಳ ನಡುವಣೆ ಪೈಪೋಟಿ ನಡೆಯಲಿದೆ.
ಒಟ್ಟು 34 ಪಂದ್ಯಗಳು:
ಈ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳನ್ನಾಡಲಾಗುತ್ತದೆ. ಇದರಲ್ಲಿ 30 ಲೀಗ್ ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ನಾಲ್ಕು ಪ್ಲೇಆಫ್ ಮ್ಯಾಚ್ಗಳು ಜರುಗಲಿದೆ.
ಹೊಸ ಆಟಗಾರರ ಎಂಟ್ರಿ:
ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ಗಾಗಿ ಸ್ಟಾರ್ ಆಟಗಾರರು ಸಹಿ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್, ಡೇವಿಡ್ ವಿಲ್ಲಿ, ಜೋಶ್ ಲಿಟಲ್, ಡೇವಿಡ್ ವಾರ್ನರ್, ಮಾರ್ಕ್ ವುಡ್ರಂತಹ ಪ್ರಮುಖ ಆಟಗಾರರ ಹೆಸರು ಕಾಣಿಸಿಕೊಂಡಿದೆ.
ಕಣದಲ್ಲಿ ಅಂಬಾಟಿ ರಾಯುಡು:
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡಕ್ಕೆ ಈ ಬಾರಿ ಅಂಬಾಟಿ ರಾಯುಡು ಆಯ್ಕೆಯಾಗಿದ್ದಾರೆ. ಆದರೆ ಮೊದಲ ಸೀಸನ್‌ನಲ್ಲಿ ಆಡಿದ್ದ ಯೂಸುಫ್ ಪಠಾಣ್ ಮತ್ತು ರಾಬಿನ್ ಉತ್ತಪ್ಪ ಅವರನ್ನು ದುಬೈ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದೆ.
ಟೂರ್ನಿಯಲ್ಲಿ ಪಾಕ್ ಆಟಗಾರರು:
ಡೆಸರ್ಟ್ ವೈಪರ್ಸ್ ತಂಡದವು ಈ ಬಾರಿ ಪಾಕಿಸ್ತಾನ್ ತಂಡ ಆಲ್ರೌಂಡರ್ ಶಾದಾಬ್ ಖಾನ್ ಮತ್ತು ಎಡಗೈ ಶಾಹೀನ್ ಶಾ ಆಫ್ರಿದಿ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಪ್ರತಿ ತಂಡಗಳು ಉಳಿಸಿಕೊಂಡಿರುವ ಹಾಗೂ ಹೊಸದಾಗಿ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
ಅಬುಧಾಬಿ ನೈಟ್ ರೈಡರ್ಸ್:
ಹೊಸ ಆಯ್ಕೆ: ಬ್ರಾಂಡನ್ ಮೆಕ್‌ಮುಲ್ಲೆನ್, ಡೇವಿಡ್ ವಿಲ್ಲಿ, ಜೇಕ್ ಲಿಂಟೊಟ್, ಜೋಶ್ ಲಿಟಲ್, ಲಾರಿ ಇವಾನ್ಸ್, ಮೈಕೆಲ್ ಪೆಪ್ಪರ್, ರವಿ ಬೋಪಾರಾ ಮತ್ತು ಸ್ಯಾಮ್ ಹೈನ್.
ರಿಟೈನ್ ಆಟಗಾರರು: ಅಲಿ ಖಾನ್, ಆಂಡ್ರೆ ರಸೆಲ್, ಚರಿತ್ ಅಸಲಂಕಾ, ಜೋ ಕ್ಲಾರ್ಕ್, ಸಬೀರ್ ಅಲಿ, ಸುನಿಲ್ ನರೈನ್, ಮರ್ಚಂಟ್ ಡಿ ಲಾಂಗೆ ಮತ್ತು ಮತಿಯುಲ್ಲಾ ಖಾನ್.
ಡೆಸರ್ಟ್ ವೈಪರ್ಸ್:
ಹೊಸ ಆಯ್ಕೆ: ಆಡಮ್ ಹೋಸ್, ಆಝಂ ಖಾನ್, ಬಾಸ್ ಡಿ ಲೀಡೆ, ಮೈಕೆಲ್ ಜೋನ್ಸ್, ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಆಫ್ರಿದಿ.
ರಿಟೈನ್ ಆಟಗಾರರು: ಅಲೆಕ್ಸ್ ಹೇಲ್ಸ್, ಅಲಿ ನಾಸೀರ್, ಕಾಲಿನ್ ಮುನ್ರೊ, ದಿನೇಶ್ ಚಂಡಿಮಲ್, ಗಸ್ ಅಟ್ಕಿನ್ಸನ್, ಲ್ಯೂಕ್ ವುಡ್, ಮಥೀಶ ಪತಿರಾನ, ರೋಹನ್ ಮುಸ್ತಫಾ, ಶೆಲ್ಡನ್ ಕಾಟ್ರೆಲ್, ಶೆರ್ಫೇನ್ ರುದರ್‌ಫೋರ್ಡ್, ಟಾಮ್ ಕರ್ರಾನ್ ಮತ್ತು ವನಿಂದು ಹಸರಂಗ.
ದುಬೈ ಕ್ಯಾಪಿಟಲ್ಸ್:
ಹೊಸ ಆಯ್ಕೆ: ಆಂಡ್ರ್ಯೂ ಟೈ, ದಸುನ್ ಶಾನಕ, ಡೇವಿಡ್ ವಾರ್ನರ್, ಮಾರ್ಕ್ ವುಡ್, ಮ್ಯಾಕ್ಸ್ ಹೋಲ್ಡನ್, ಮೊಹಮ್ಮದ್ ಮೊಹ್ಸಿನ್, ನುವಾನ್ ತುಸಾರ, ರಹಮಾನುಲ್ಲಾ ಗುರ್ಬಾಜ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸದೀರ ಸಮರವಿಕ್ರಮ ಮತ್ತು ಸ್ಯಾಮ್ ಬಿಲ್ಲಿಂಗ್ಸ್.
ರಿಟೈನ್ ಆಟಗಾರರು: ದುಷ್ಮಂತ ಚಮೀರಾ, ಜೋ ರೂಟ್, ರಾಜಾ ಅಕಿಫ್, ರೋವ್‌ಮನ್ ಪೊವೆಲ್ ಮತ್ತು ಸಿಕಂದರ್ ರಜಾ.
ಗಲ್ಫ್ ಜೈಂಟ್ಸ್:
ಹೊಸ ಆಯ್ಕೆ: ಡೊಮಿನಿಕ್ ಡ್ರೇಕ್ಸ್, ಜೇಮೀ ಸ್ಮಿತ್, ಜೋರ್ಡಾನ್ ಕಾಕ್ಸ್, ಕರೀಮ್ ಜನತ್, ಮುಜೀಬ್-ಉರ್-ರಹಮಾನ್, ಸೌರಭ್ ನೇತ್ರವಲ್ಕರ್.
ರಿಟೈನ್: ಅಯಾನ್ ಅಫ್ಜಲ್ ಖಾನ್, ಕಾರ್ಲೋಸ್ ಬ್ರಾಥ್‌ವೈಟ್, ಕ್ರಿಸ್ ಜೋರ್ಡಾನ್, ಕ್ರಿಸ್ ಲಿನ್, ಗೆರ್ಹಾರ್ಡ್ ಎರಾಸ್ಮಸ್, ಜೇಮ್ಸ್ ವಿನ್ಸ್, ಜೇಮೀ ಓವರ್‌ಟನ್, ರೆಹಾನ್ ಅಹ್ಮದ್, ರಿಚರ್ಡ್ ಗ್ಲೀಸನ್, ಸಂಚಿತ್ ಶರ್ಮಾ ಮತ್ತು ಶಿಮ್ರಾನ್ ಹೆಟ್ಮೆಯರ್.
MI ಎಮಿರೇಟ್ಸ್:
ಹೊಸ ಆಯ್ಕೆ: ಅಕೇಲ್ ಹೊಸೈನ್, ಅಂಬಟಿ ರಾಯುಡು, ಕೋರಿ ಆಂಡರ್ಸನ್, ಕುಸಲ್ ಪೆರೆರಾ, ನೊಸ್ತುಶ್ ಕೆಂಜಿಗೆ, ಒಡಿಯನ್ ಸ್ಮಿತ್, ವಿಜಯಕಾಂತ್ ವ್ಯಾಸ್ಕಂತ್ ಮತ್ತು ವಕಾರ್ ಸಲಾಂಖೈಲ್.
ರಿಟೈನ್: ಆಂಡ್ರೆ ಫ್ಲೆಚರ್, ಡೇನಿಯಲ್ ಮೌಸ್ಲಿ, ಡ್ವೇನ್ ಬ್ರಾವೋ, ಫಜಲ್ಹಕ್ ಫಾರೂಕಿ, ಜೋರ್ಡಾನ್ ಥಾಂಪ್ಸನ್, ಕೀರಾನ್ ಪೊಲಾರ್ಡ್, ಮೆಕೆನ್ನಿ ಕ್ಲಾರ್ಕ್, ಮುಹಮ್ಮದ್ ವಸೀಮ್, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ವಿಲ್ ಸ್ಮೀಡ್ ಮತ್ತು ಜಹೂರ್ ಖಾನ್.
ಇದನ್ನೂ ಓದಿ: Mumbai Indians: ಟಿ20 ಲೀಗ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್
ಶಾರ್ಜಾ ವಾರಿಯರ್ಸ್:
ಹೊಸ ಆಯ್ಕೆ: ಕ್ರಿಸ್ ಸೋಲ್, ಡೇನಿಯಲ್ ಸ್ಯಾಮ್ಸ್, ದಿಲ್ಶನ್ ಮಧುಶಂಕ, ಜೇಮ್ಸ್ ಫುಲ್ಲರ್, ಜಾನ್ಸನ್ ಚಾರ್ಲ್ಸ್, ಕುಸಲ್ ಮೆಂಡಿಸ್, ಲೆವಿಸ್ ಗ್ರೆಗೊರಿ, ಮಹೇಶ್ ತೀಕ್ಷಣ, ಮಾರ್ಕ್ ವ್ಯಾಟ್, ಮಾರ್ಟಿನ್ ಗಪ್ಟಿಲ್, ಸೀನ್ ವಿಲಿಯಮ್ಸ್ ಮತ್ತು ಕೈಸ್ ಅಹ್ಮದ್.
ರಿಟೈನ್: ಕ್ರಿಸ್ ವೋಕ್ಸ್, ಜೋ ಡೆನ್ಲಿ, ಜುನೈದ್ ಸಿದ್ದಿಕ್, ಮಾರ್ಕ್ ದೇಯಲ್, ಮುಹಮ್ಮದ್ ಜವಾದುಲ್ಲಾ ಮತ್ತು ಟಾಮ್ ಕೊಹ್ಲರ್-ಕಾಡ್ಮೋರ್.