
ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಶ್ರೀಲಂಕಾ (India vs Sri Lanka) ಪ್ರವಾಸ ಮಾಡಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ನೆಲದಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದ್ದು, 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ( World Test Championship) ಫೈನಲ್ ರೇಸ್‌ನಲ್ಲಿ ಉಳಿಯಬೇಕೆಂದರೆ ಭಾರತ ಈ ಸರಣಿಯನ್ನು ಗೆಲ್ಲಲೇಬೇಕು. ಒಂದು ವೇಳೆ ಈ ಟೆಸ್ಟ್ ಸರಣಿಯಲ್ಲಿ ಭಾರತ ಸೋತರೆ, ಸರಣಿ ಟೈ ಆದರೆ ಅಥವಾ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದರೆ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದರ ವಿವರ ಇಲ್ಲಿದೆ.
ಪ್ರಸ್ತುತ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27 ರ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಭಾರತ ಇದುವರೆಗೆ ಒಟ್ಟು 9 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳನ್ನು ಸೋತಿದೆ ಮತ್ತು. ಉಳಿದಂತೆ 1 ಪಂದ್ಯ ಡ್ರಾ ಆಗಿದೆ. ಹೀಗಾಗಿ ಭಾರತದ ಗೆಲುವಿನ ಶೇಕಡಾವಾರು 48.15 ಆಗಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ, ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದರೆ, ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 57.58 ಕ್ಕೆ ಏರಿಕೆಯಾಗಲಿದ್ದು, ಪಾಯಿಂಟ್ ಪಟ್ಟಿಯಲ್ಲಿ 5 ರಿಂದ 4 ನೇ ಸ್ಥಾನಕ್ಕೆ ಏರುತ್ತದೆ.
IND vs SL: ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಟೆಸ್ಟ್ ಸರಣಿಗೆ ಸ್ಟಾರ್ ಪ್ಲೇಯರ್ ಎಂಟ್ರಿ
ಇದಲ್ಲದೆ, ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1 ಅಂತರದಲ್ಲಿ ಡ್ರಾದಲ್ಲಿ ಕೊನೆಗೊಂಡರೆ, ಭಾರತದ ಗೆಲುವಿನ ಶೇಕಡಾವಾರು 48.48 ಆದರೆ, ಶ್ರೀಲಂಕಾದ ಗೆಲುವಿನ ಶೇಕಡಾವಾರು 44.44 ಆಗಿರುತ್ತದೆ. ಈ ಪರಿಸ್ಥಿತಿಯಲ್ಲಿ, ಭಾರತ ಐದನೇ ಸ್ಥಾನದಲ್ಲಿ ಉಳಿಯುತ್ತದೆ ಮತ್ತು ಶ್ರೀಲಂಕಾ ಆರನೇ ಸ್ಥಾನದಲ್ಲಿ ಉಳಿಯುತ್ತದೆ. ಆದಾಗ್ಯೂ, ಭಾರತ ಈ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಸೋತರೆ, ಭಾರತದ ಗೆಲುವಿನ ಶೇಕಡಾವಾರು 39.39 ಕ್ಕೆ ಕುಸಿಯಲಿದ್ದು, ಶ್ರೀಲಂಕಾದ ಗೆಲುವಿನ ಶೇಕಡಾವಾರು 61.11 ಕ್ಕೆ ಏರಲಿದೆ. ಇದರಿಂದ ಶ್ರೀಲಂಕಾ ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರುತ್ತದೆ. ಇತ್ತ ಭಾರತ ಡಬ್ಲ್ಯೂಟಿಸಿ ಫೈನಲ್ ರೇಸ್‌ನಿಂದ ಭಾಗಶಃ ಹೊರಬೀಳುತ್ತದೆ. ಇದರರ್ಥ ಭಾರತ ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿ ಉಳಿಯಬೇಕೆಂದರೆ ಯಾವುದೇ ಬೆಲೆ ತೆತ್ತಾದರೂ ಶ್ರೀಲಂಕಾವನ್ನು ಸೋಲಿಸಲೇಬೇಕು.
Published On - 3:50 pm, Thu, 6 August 26