IND vs AFG 2nd T20I Highlights: ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಜಯ

|

Updated on: Jan 14, 2024 | 10:15 PM

India vs AFG 2nd T20I Highlights in Kannada:ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ತಾನ ನೀಡಿದ್ದ 173 ರನ್ ಗುರಿಯನ್ನು ಟೀಂ ಇಂಡಿಯಾ 14.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಾಧಿಸಿತು.

IND vs AFG 2nd T20I Highlights: ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಜಯ
ಭಾರತ- ಅಫ್ಘಾನಿಸ್ತಾನ

ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ, ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಇದೀಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಈ ಗೆಲುವಿನೊಂದಿಗೆ ಸರಣಿಯನ್ನೂ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಯುವ ಆಟಗಾರರಾದ ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದ ಗೆಲುವಿನ ಹೀರೋ ಎನಿಸಿಕೊಂಡರು. ಇಬ್ಬರೂ ಆಟಗಾರರು ಅಫ್ಘಾನಿಸ್ತಾನ ಬೌಲರ್‌ಗಳನ್ನು ದಂಡಿಸಿ ಕೇವಲ 14.3 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದರು.

LIVE NEWS & UPDATES

The liveblog has ended.
  • 14 Jan 2024 10:12 PM (IST)

    ಭಾರತಕ್ಕೆ ಗೆಲುವು

    ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ತಾನ ನೀಡಿದ್ದ 173 ರನ್ ಗುರಿಯನ್ನು ಟೀಂ ಇಂಡಿಯಾ 14.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಾಧಿಸಿತು.

  • 14 Jan 2024 09:55 PM (IST)

    ಜಿತೇಶ್ ಶರ್ಮಾ ಔಟ್

    13ನೇ ಓವರ್‌ನ ಕೊನೆಯ ಎಸೆತದಲ್ಲಿ ಜಿತೇಶ್ ಶರ್ಮಾ ಔಟಾದರು. ಕರೀಮ್ ಎಸೆತವನ್ನು ಮಿಡ್ ಆಫ್ ಮೇಲೆ ಹೊಡೆಯಲು ಪ್ರಯತ್ನಿಸಿ ಮೊಹಮ್ಮದ್ ನಬಿಗೆ ಕ್ಯಾಚಿತ್ತು ಜಿತೇಶ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 14 Jan 2024 09:54 PM (IST)

    ಜೈಸ್ವಾಲ್ ಔಟ್

    ಯಶಸ್ವಿ ಜೈಸ್ವಾಲ್ ಔಟ್ ಆಗಿದ್ದಾರೆ. 13ನೇ ಓವರ್‌ನ ಎರಡನೇ ಎಸೆತದಲ್ಲಿ ಕರೀಂ ಜನತ್ ಅವರ ಬೌಲಿಂಗ್​ನಲ್ಲಿ ಜೈಸ್ವಾಲ್ ಕೀಪರ್​ ಕೈಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತದ ಮೂರನೇ ವಿಕೆಟ್ ಪತನವಾಯಿತು.

  • 14 Jan 2024 09:50 PM (IST)

    ದುಬೆ ಅರ್ಧಶತಕ

    ದುಬೆ ಕೇವಲ 22 ಎಸೆತಗಳಲ್ಲಿ 50 ರನ್ ಪೂರೈಸಿದರು. ನವೀನ್ ಎಸೆದ 12ನೇ ಓವರ್​ನ ಕೊನೆಯ ಎಸೆತದಲ್ಲಿ ದುಬೆ ಒಂದು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು.

  • 14 Jan 2024 09:33 PM (IST)

    ಭಾರತದ ಶತಕ ಪೂರ್ಣ

    ಟೀಂ ಇಂಡಿಯಾ ಕೇವಲ 10 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದೆ. ಇದರಲ್ಲಿ ಜೈಸ್ವಾಲ್ ಅರ್ಧಶತಕ ಸಿಡಿಸಿ ಆಡುತ್ತಿದ್ದರೆ, ದುಬೆ 32 ರನ್ ಸಿಡಿಸಿ ಬ್ಯಾಟಿಂಗ್​ನಲ್ಲಿದ್ದಾರೆ.

  • 14 Jan 2024 09:28 PM (IST)

    ಅರ್ಧಶತಕ ಸಿಡಿಸಿದ ಜೈಸ್ವಾಲ್

    ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಫ್ಘಾನಿಸ್ತಾನದ ವಿರುದ್ಧ ಕೇವಲ 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.

  • 14 Jan 2024 09:23 PM (IST)

    ಕೊಹ್ಲಿ ಔಟ್

    ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಇದರೊಂದಿಗೆ ಭಾರತಕ್ಕೆ ಎರಡನೇ ಹೊಡೆತ ಬಿದ್ದಿದೆ. ಆರನೇ ಓವರ್‌ನ ಮೂರನೇ ಎಸೆತದಲ್ಲಿ ನವೀನ್ ಅವರನ್ನು ಔಟ್ ಮಾಡಿದರು. ನವೀನ್ ಅವರ ಚೆಂಡನ್ನು ಮಿಡ್ ಆಫ್ ಮೇಲೆ ಹೊಡೆಯಲು ಕೊಹ್ಲಿ ಪ್ರಯತ್ನಿಸಿ, ಇಬ್ರಾಹಿಂ ಜದ್ರಾನ್​ಗೆ ಕ್ಯಾಚ್ ನೀಡಿದರು.

  • 14 Jan 2024 08:54 PM (IST)

    ರೋಹಿತ್ ಶೂನ್ಯಕ್ಕೆ ಔಟ್

    ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ರನೌಟ್ ಆಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

  • 14 Jan 2024 08:52 PM (IST)

    ಭಾರತದ ಇನ್ನಿಂಗ್ಸ್ ಆರಂಭ

    ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಯಶಸ್ವಿ ಜೈಸ್ವಾಲ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.

  • 14 Jan 2024 08:35 PM (IST)

    ಭಾರತಕ್ಕೆ 173 ರನ್ ಟಾರ್ಗೆಟ್

    ಅಫ್ಘಾನಿಸ್ತಾನ ತಂಡ ಭಾರತಕ್ಕೆ 173 ರನ್ ಟಾರ್ಗೆಟ್ ನೀಡಿದೆ.

  • 14 Jan 2024 08:35 PM (IST)

    ನೂರ್ ಅಹಮದ್ ಔಟ್

    20ನೇ ಓವರ್‌ನ ಐದನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ನೂರ್ ಅಹ್ಮದ್ ಅವರನ್ನು ಔಟ್ ಮಾಡಿದರು. ವಿರಾಟ್ ಕೊಹ್ಲಿ ಅವರಿಗೆ ಡೀಪ್ ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ನೀಡಿದರು.

  • 14 Jan 2024 08:34 PM (IST)

    ಜನತ್ ಔಟ್

    ಅಫ್ಘಾನಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. 20ನೇ ಓವರ್‌ನ ಮೊದಲ ಎಸೆತದಲ್ಲಿ ಕರಿನ್ ಜನತ್ ಅವರನ್ನು ಅರ್ಷದೀಪ್ ಔಟ್ ಮಾಡಿದರು.

  • 14 Jan 2024 08:22 PM (IST)

    6ನೇ ವಿಕೆಟ್ ಪತನ

    ಅಫ್ಘಾನಿಸ್ತಾನಕ್ಕೆ ಆರನೇ ಹೊಡೆತ ಬಿದ್ದಿದೆ. ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ನಜಿಬುಲ್ಲಾ ಜರ್ದಾನ್ ಅವರನ್ನು ಬೌಲ್ಡ್ ಮಾಡಿದ್ದಾರೆ. ಜರ್ದಾನ್ 21 ಎಸೆತಗಳಲ್ಲಿ 23 ರನ್‌ಗಳ ಇನ್ನಿಂಗ್ಸ್‌ ಆಡಿದ್ದಾರೆ.

  • 14 Jan 2024 08:14 PM (IST)

    ನಬಿ ಔಟ್

    ಮೊಹಮ್ಮದ್ ನಬಿ ಔಟಾಗಿದ್ದಾರೆ. 15ನೇ ಓವರ್‌ನ ಎರಡನೇ ಎಸೆತದಲ್ಲಿ ರವಿ ಬಿಷ್ಣೋಯ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ನಬಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ರಿಂಕು ಸಿಂಗ್ ಲಾಂಗ್ ಆಫ್‌ನಲ್ಲಿ ಬೌಂಡರಿ ಬಳಿ ಉತ್ತಮ ಕ್ಯಾಚ್ ಪಡೆದರು.

  • 14 Jan 2024 07:53 PM (IST)

    ಗುಲ್ಬದಿನ್ ಔಟ್

    ಅಫ್ಘಾನಿಸ್ತಾನ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ ಬಾಲ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಗುಲ್ಬ್​ದಿನ್ ಕ್ಯಾಚಿತ್ತು ಔಟಾಗಿದ್ದಾರೆ.

  • 14 Jan 2024 07:49 PM (IST)

    ಗುಲ್ಬದಿನ್ ನೈಬ್ ಅರ್ಧಶತಕ

    ಅಫ್ಘಾನಿಸ್ತಾನದ ಆಟಗಾರ ಗುಲ್ಬದಿನ್ ನೈಬ್ ಅರ್ಧಶತಕ ಗಳಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.

  • 14 Jan 2024 07:38 PM (IST)

    ದುಬೆಗೆ ಮೊದಲ ವಿಕೆಟ್

    ಭಾರತದ ಆಲ್ ರೌಂಡರ್ ಆಟಗಾರ ಶಿವಂ ದುಬೆ ಅಫ್ಘಾನಿಸ್ತಾನಕ್ಕೆ ಮೂರನೇ ಹೊಡೆತ ನೀಡಿದ್ದಾರೆ. ದುಬೆ ಬೌಲಿಂಗ್​ನಲ್ಲಿ ಒಮರ್ಜಾಯ್ ಬೌಲ್ಡ್ ಆಗಿದ್ದಾರೆ.

    7 ಓವರ್‌ಗಳ ನಂತರ ಅಫ್ಘಾನಿಸ್ತಾನದ ಸ್ಕೋರ್ 60/3

  • 14 Jan 2024 07:33 PM (IST)

    2ನೇ ವಿಕೆಟ್ ಪತನ

    ಅಫ್ಘಾನಿಸ್ತಾನಕ್ಕೆ ಎರಡನೇ ಹೊಡೆತ ಬಿದ್ದಿದೆ. 53 ರನ್ ಗಳಿಸಿದ್ದಾಗ ಅಫ್ಘಾನಿಸ್ತಾನದ ಎರಡನೇ ವಿಕೆಟ್ ಪತನವಾಗಿದೆ. ಈ ಪಂದ್ಯದಲ್ಲಿ ಸ್ಪಿನ್ ಬೌಲರ್​ಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ರವಿ ವಿಷ್ಣೋಯ್ ಮೊದಲ ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಎರಡನೇ ವಿಕೆಟ್ ಪಡೆದರು.

  • 14 Jan 2024 07:32 PM (IST)

    50 ರನ್ ಪೂರ್ಣ

    ಅಫ್ಘಾನಿಸ್ತಾನ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.

  • 14 Jan 2024 07:15 PM (IST)

    ಗುರ್ಬಾಝ್ ಔಟ್

    ಅಫ್ಘಾನಿಸ್ತಾನ ತಂಡದ ಮೊದಲ ವಿಕೆಟ್ ಪತನವಾಗಿದೆ. ನಾಯಕ ಗುರ್ಬಾಝ್ ಮೂರನೇ ಓವರ್​ನ ಮೊದಲ ಎಸೆತದಲ್ಲಿ ದುಬೆಗೆ ಕ್ಯಾಚಿತ್ತು ಔಟಾದರು.

    ಅಫ್ಘಾನ್- 20/1

  • 14 Jan 2024 07:09 PM (IST)

    ಅಫ್ಘಾನಿಸ್ತಾನದ ಬ್ಯಾಟಿಂಗ್ ಆರಂಭ

    ಅಫ್ಘಾನಿಸ್ತಾನದ ಬ್ಯಾಟಿಂಗ್ ಶುರುವಾಗಿದೆ. ಆರಂಭಿಕ ಜೋಡಿ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್ ಪ್ರವೇಶಿಸಿದ್ದಾರೆ. ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡಿ 9 ರನ್ ನೀಡಿದರು.

  • 14 Jan 2024 07:00 PM (IST)

    ತಂಡದಲ್ಲಿ 2 ಬದಲಾವಣೆ

    ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 2 ಬದಲಾವಣೆ ಮಾಡಿದೆ. ಭಾರತದ ಸ್ಫೋಟಕ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

  • 14 Jan 2024 06:38 PM (IST)

    ಅಫ್ಘಾನಿಸ್ತಾನ ತಂಡ

    ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕೀಬ್.

  • 14 Jan 2024 06:38 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

  • 14 Jan 2024 06:35 PM (IST)

    ಟಾಸ್ ಗೆದ್ದ ಭಾರತ

    ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದೆ. ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

  • 14 Jan 2024 06:23 PM (IST)

    ಟಾಸ್ ಯಾವಾಗ?

    ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದ ಟಾಸ್ ಸಂಜೆ 6:30ಕ್ಕೆ ನಿಗದಿಯಾಗಿದೆ.

Published On - 6:22 pm, Sun, 14 January 24

Follow us on