AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG Playing XI: ಟಾಸ್ ಗೆದ್ದ ಭಾರತ; ಅಫ್ಘಾನ್ ವಿರುದ್ಧ ತಂಡದಲ್ಲಿ ಅಚ್ಚರಿಯ ಬದಲಾವಣೆ ಮಾಡಿದ ರೋಹಿತ್

ICC T20 World Cup India vs Afghanistan Playing XI: ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ತಲಾ ಒಂದೊಂದು ಬದಲಾವಣೆಗಳನ್ನು ಮಾಡಿವೆ.

IND vs AFG Playing XI: ಟಾಸ್ ಗೆದ್ದ ಭಾರತ; ಅಫ್ಘಾನ್ ವಿರುದ್ಧ ತಂಡದಲ್ಲಿ ಅಚ್ಚರಿಯ ಬದಲಾವಣೆ ಮಾಡಿದ ರೋಹಿತ್
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on:Jun 20, 2024 | 7:51 PM

Share

ಟಿ20 ವಿಶ್ವಕಪ್ 2024 ರ (T20 World Cup 2024) ಸೂಪರ್ 8 ಸುತ್ತಿನಲ್ಲಿ ಇಂದು ಟೀಂ ಇಂಡಿಯಾ, ಅಫ್ಘಾನಿಸ್ತಾನ (India vs Afghanistan) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯಕ್ಕೆ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ತಲಾ ಒಂದೊಂದು ಬದಲಾವಣೆಗಳನ್ನು ಮಾಡಿವೆ. ಇನ್ನು ಲೀಗ್​ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಹೇಳುವುದಾದರೆ,, ರೋಹಿತ್ ಪಡೆ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿಲ್ಲ. ಇದಲ್ಲದೇ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತದ ದಾಖಲೆಯೂ ಅತ್ಯುತ್ತಮವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳನ್ನು ಆಡಿದ್ದು, ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಝದ್ರಾನ್, ಹಜರತುಲ್ಲಾ ಝಜೈ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ನವೀನ್ ಉಲ್ ಹಕ್, ಫಜಲ್ಹಕ್ ಫರೂಕ್.

ಮುಖಾಮುಖಿ ವರದಿ

ಉಭಯ ತಂಡಗಳ ಟಿ20 ಮುಖಾಮುಖಿ ದಾಖಲೆಗಳನ್ನು ನೋಡಿದರೆ, ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾದ ಪ್ರದರ್ಶನ ಅದ್ಭುತವಾಗಿದೆ. ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿವೆ. ಈ 8 ಪಂದ್ಯಗಳಲ್ಲಿ 7ರಲ್ಲಿ ಟೀಂ ಇಂಡಿಯಾ ಗೆದ್ದಿದೆ.  1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಆದ್ದರಿಂದ ಅಂಕಿಅಂಶಗಳ ಪ್ರಕಾರ, ಟೀಂ ಇಂಡಿಯಾ ಅಫ್ಘಾನಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ. ಅಲ್ಲದೆ, ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ವಿಶ್ವಕಪ್‌ನಲ್ಲೂ ಟೀಂ ಇಂಡಿಯಾ ಅಜೇಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Thu, 20 June 24

Follow Us
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ