ಟಿ20 ವಿಶ್ವಕಪ್ ಬಳಿಕ ಈ 3 ಬಲಿಷ್ಠ ತಂಡಗಳನ್ನು ಎದುರಿಸಲಿದೆ ಭಾರತ; ವೇಳಾಪಟ್ಟಿ ಪ್ರಕಟ

Team India: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಯಾವ ತಂಡಗಳನ್ನು ಎದುರಿಸಲಿದೆ? ಈ ವರ್ಷ ಎಷ್ಟು ಪಂದ್ಯಗಳು ನಡೆಯಲ್ಲಿವೆ ಎಂಬುದರ ಬಗ್ಗೆ ಬಿಸಿಸಿಐ ಖಚಿತ ಮಾಹಿತಿ ನೀಡಿದೆ. ಅಂದರೆ ಮುಂದಿನ ಫೆಬ್ರವರಿ 2025 ರವರೆಗಿನ ಭಾರತ ತಂಡದ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಹಿರಂಗಪಡಿಸಿದೆ.

ಟಿ20 ವಿಶ್ವಕಪ್ ಬಳಿಕ ಈ 3 ಬಲಿಷ್ಠ ತಂಡಗಳನ್ನು ಎದುರಿಸಲಿದೆ ಭಾರತ; ವೇಳಾಪಟ್ಟಿ ಪ್ರಕಟ
ಟೀಂ ಇಂಡಿಯಾ
Follow us
|

Updated on:Jun 20, 2024 | 5:42 PM

ಪ್ರಸ್ತುತ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್‌ (T20 World Cup 2024) ನಡೆಯುತ್ತಿದೆ. ಈ ಮಿನಿ ವಿಶ್ವಸಮರದಲ್ಲಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ (Team India) ಇಂದು ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಬಳಿಕ ಇದೇ ಸುತ್ತಿನಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಸುತ್ತಿನಲ್ಲಿ ಭಾರತ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಮುಂದಿನ ಸುತ್ತಿಗೆ ಲಗ್ಗೆ ಇಡಲಿದೆ. ಅದು ಸಾಧ್ಯವಾಗದಿದ್ದರೆ, ರೋಹಿತ್ ಪಡೆ ಈ ಬಾರಿಯೂ ಖಾಲಿ ಕೈಯಲ್ಲಿ ಟೂರ್ನಿಯಿಂದ ವಾಪಸ್ಸಾಗಬೇಕಾಗುತ್ತದೆ. ಹೀಗಾಗಿ ಸೂಪರ್ 8 ಸುತ್ತನ್ನು ಗಂಭೀರವಾಗಿ ಪರಿಗಣಿಸಿರುವ ರೋಹಿತ್ ಪಡೆ ಪ್ರತಿ ಪಂದ್ಯವನ್ನು ಗೆಲ್ಲಲು ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಈ ನಡುವೆ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಯಾವ ತಂಡಗಳನ್ನು ಎದುರಿಸಲಿದೆ? ಎಷ್ಟು ಪಂದ್ಯಗಳು ನಡೆಯಲ್ಲಿವೆ ಎಂಬುದರ ಬಗ್ಗೆ ಬಿಸಿಸಿಐ (BCCI) ಖಚಿತ ಮಾಹಿತಿ ನೀಡಿದೆ. ಅಂದರೆ ಮುಂದಿನ ಫೆಬ್ರವರಿ 2025 ರವರೆಗಿನ ಭಾರತ ತಂಡದ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಹಿರಂಗಪಡಿಸಿದೆ.

ಸೆಪ್ಟೆಂಬರ್​ನಲ್ಲಿ ಬಾಂಗ್ಲಾ ತಂಡದ ಭಾರತ ಪ್ರವಾಸ

ಬಾಂಗ್ಲಾದೇಶ ತಂಡ ಈ ವರ್ಷ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಭಾರತದ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳನ್ನು ಭಾರತದ ವಿರುದ್ಧ ಆಡಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 1 ರಿಂದ ಕಾನ್ಪುರದಲ್ಲಿ ನಡೆಯಲಿದೆ. ಇನ್ನು ಮೂರು ಟಿ20 ಪಂದ್ಯಗಳ ಸರಣಿ ಅಕ್ಟೋಬರ್ 6, 9 ಮತ್ತು 12 ರಂದು ನಡೆಯಲಿದೆ. ಈ ಪಂದ್ಯಗಳ ಆತಿಥ್ಯವನ್ನು ಧರ್ಮಶಾಲಾ, ದೆಹಲಿ ಮತ್ತು ಹೈದರಾಬಾದ್‌ ವಹಿಸುತ್ತಿವೆ.

ಭಾರತ- ಬಾಂಗ್ಲಾದೇಶ ವೇಳಾಪಟ್ಟಿ

ಟೆಸ್ಟ್ ಸರಣಿ

  • ಮೊದಲ ಟೆಸ್ಟ್-  ಸೆಪ್ಟೆಂಬರ್ 19 ರಿಂದ 23ರವರೆಗೆ, ಚೆನ್ನೈ
  • ಎರಡನೇ ಟೆಸ್ಟ್- ಸೆಪ್ಟೆಂಬರ್ 27  ರಿಂದ ಅಕ್ಟೋಬರ್ 1 ರವರೆಗೆ, ಕಾನ್ಪುರ

ಟಿ20 ಸರಣಿ

  • ಮೊದಲ ಟಿ20- 6 ಅಕ್ಟೋಬರ್ 2024, ಧರ್ಮಶಾಲಾ
  • ಎರಡನೇ ಟಿ20- 9 ಅಕ್ಟೋಬರ್ 2024, ದೆಹಲಿ
  • ಮೂರನೇ ಟಿ20- 12 ಅಕ್ಟೋಬರ್ 2024, ಹೈದರಾಬಾದ್.

ಭಾರತಕ್ಕೆ ಬರಲಿದೆ ನ್ಯೂಜಿಲೆಂಡ್ ತಂಡ

ಬಾಂಗ್ಲಾದೇಶ ವಿರುದ್ಧದ ಸರಣಿ ಮುಗಿದ ಬಳಿಕ ಭಾರತ, ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ಮುಖಾಮುಖಿಯಾಗಲಿದೆ. ಇದಕ್ಕಾಗಿ ಕಿವೀಸ್ ಪಡೆ ಅಕ್ಟೋಬರ್​ನಿಂದ ನವೆಂಬರ್​ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ ಪುಣೆಯಲ್ಲಿ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 1 ರಿಂದ ಮುಂಬೈನಲ್ಲಿ ನಡೆಯಲಿದೆ. ಇದರೊಂದಿಗೆ ಈ ಸರಣಿ ಕೊನೆಗೊಳ್ಳಲಿದೆ.

ಭಾರತ- ನ್ಯೂಜಿಲೆಂಡ್ ವೇಳಾಪಟ್ಟಿ

ಟೆಸ್ಟ್ ಸರಣಿ

  • ಮೊದಲ ಟೆಸ್ಟ್- 16-20 ಅಕ್ಟೋಬರ್ 2024, ಬೆಂಗಳೂರು
  • ಎರಡನೇ ಟೆಸ್ಟ್- 24-28 ಅಕ್ಟೋಬರ್ 2024, ಪುಣೆ
  • ಮೂರನೇ ಟೆಸ್ಟ್- 1-5 ನವೆಂಬರ್ 2024, ಮುಂಬೈ

ಇಂಗ್ಲೆಂಡ್ ತಂಡದ ಭಾರತ ಪ್ರವಾಸ

ಮುಂದಿನ ವರ್ಷ ಅಂದರೆ 2025ರ ಜನವರಿಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಭೇಟಿ ನೀಡಲಿದೆ. ಈ ಸರಣಿಯಲ್ಲಿ 5 ಟಿ20 ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಜನವರಿ 22 ರಂದು ಚೆನ್ನೈನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಜನವರಿ 25 ರಂದು ಕೋಲ್ಕತ್ತಾದಲ್ಲಿ ಮತ್ತು ಮೂರನೇ ಪಂದ್ಯ ಜನವರಿ 28 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಸರಣಿಯ ನಾಲ್ಕನೇ ಪಂದ್ಯ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಕೊನೆಯ ಮತ್ತು ಐದನೇ ಟಿ20 ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ. ಸರಣಿಯ ಮೊದಲ ಏಕದಿನ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ, ಎರಡನೇ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ ಮತ್ತು ಕೊನೆಯ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರೊಂದಿಗೆ ಸರಣಿ ಕೊನೆಗೊಳ್ಳಲಿದೆ.

ಭಾರತ- ಇಂಗ್ಲೆಂಡ್ ವೇಳಾಪಟ್ಟಿ

ಟಿ20 ಸರಣಿ

  • ಮೊದಲನೇ ಟಿ20 ಪಂದ್ಯ- 22 ಜನವರಿ 2025, ಚೆನ್ನೈ
  • ಎರಡನೇ ಟಿ20 ಪಂದ್ಯ- 25 ಜನವರಿ 2025, ಕೋಲ್ಕತ್ತಾ
  • ಮೂರನೇ ಟಿ20 ಪಂದ್ಯ- 28 ಜನವರಿ 2025, ರಾಜ್‌ಕೋಟ್
  • ನಾಲ್ಕನೇ ಟಿ20 ಪಂದ್ಯ- 31 ಜನವರಿ 2025, ಪುಣೆ
  • ಐದನೇ ಟಿ20- 2 ಫೆಬ್ರವರಿ 2025, ಮುಂಬೈ

ಏಕದಿನ ಸರಣಿ

  • ಮೊದಲನೇ ಏಕದಿನ ಪಂದ್ಯ – 6 ಫೆಬ್ರವರಿ 2025, ನಾಗ್ಪುರ
  • ಎರಡನೇ ಏಕದಿನ ಪಂದ್ಯ – 9 ಫೆಬ್ರವರಿ 2025, ಕಟಕ್
  • ಮೂರನೇ ಏಕದಿನ ಪಂದ್ಯ- 12 ಫೆಬ್ರವರಿ 2025, ಅಹಮದಾಬಾದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Thu, 20 June 24

ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ