IND vs AUS 1st Test: ಕುತೂಹಲದತ್ತ ಇಂಡೋ-ಆಸೀಸ್ ಪ್ರಥಮ ಟೆಸ್ಟ್: ಮೂರನೇ ದಿನದಾಟದತ್ತ ಎಲ್ಲರ ಚಿತ್ತ

India vs Australia 1st Test: ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ. 144 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂದಿನ ಮೂರನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದ್ದು ಪಿಚ್ ಯಾವ ರೀತಿ ವರ್ತಿಸಲಿದೆ ಎಂಬುದು ನೋಡಬೇಕಿದೆ.

IND vs AUS 1st Test: ಕುತೂಹಲದತ್ತ ಇಂಡೋ-ಆಸೀಸ್ ಪ್ರಥಮ ಟೆಸ್ಟ್: ಮೂರನೇ ದಿನದಾಟದತ್ತ ಎಲ್ಲರ ಚಿತ್ತ
IND vs AUS 1st Test
Follow us
Vinay Bhat
|

Updated on:Feb 11, 2023 | 7:13 AM

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಪ್ರಥಮ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಅವರ ಅಮೋಘ ಶತಕದ ಜೊತೆ ರವೀಂದ್ರ ಜಡೇಜಾ (Ravindra Jadeja) ಹಾಗೂ ಅಕ್ಷರ್ ಪಟೇಲ್ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಮೊತ್ತ 300ರ ಗಡಿ ದಾಟಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ. 144 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂದಿನ ಮೂರನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದ್ದು ಪಿಚ್ ಯಾವ ರೀತಿ ವರ್ತಿಸಲಿದೆ ಎಂಬುದು ನೋಡಬೇಕಿದೆ.

ಕಾಂಗರೂ ಪಡೆಯನ್ನು 177 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 24 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 77 ರನ್​ಗಳನ್ನು ಕಲೆಹಾಕಿತ್ತು. ರೋಹಿತ್ ಶರ್ಮಾ 56 ರನ್ ಗಳಿಸಿ ಹಾಗೂ ಅಶ್ವಿನ್ ಖಾತೆ ತೆರೆಯದೆ ಕ್ರೀಸ್​ನಲ್ಲಿದ್ದರು. ಎರಡನೇ ದಿನದಾಟ ಆರಂಭಿಸಿದ ಈ ಜೋಡಿ ದೊಡ್ಡ ಜೊತೆಯಾಟ ಆಡಲಿಲ್ಲ. ಅಶ್ವಿನ್ 62 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (7) ಬ್ಯಾಟ್​ನಿಂದ ಕೂಡ ರನ್ ಬರಲಿಲ್ಲ.

Jasprit Bumrah: ಮೊದಲ ಟೆಸ್ಟ್ ನಡುವೆ ಟೀಮ್ ಇಂಡಿಯಾಕ್ಕೆ ದೊಡ್ಡ ಶಾಕ್: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್​ಪ್ರೀತ್ ಬುಮ್ರಾ ಔಟ್

ಇದನ್ನೂ ಓದಿ
Image
IND vs AUS: ಚೀಟರ್ ಎಂದ ಆಸೀಸ್ ಮೀಡಿಯಾಗಳಿಗೆ ಬ್ಯಾಟ್​ನಿಂದಲೇ ಉತ್ತರಿಸಿ, ವಿಶ್ವ ದಾಖಲೆ ಮುರಿದ ಜಡೇಜಾ!
Image
IND vs AUS: ಚೊಚ್ಚಲ ಪಂದ್ಯವನ್ನಾಡುವ ಬೌಲರೆಂದರೆ ಕೊಹ್ಲಿಗೆ ಭಯ! ಇದು ಅಂಕಿ- ಅಂಶ ಹೇಳಿದ ಸತ್ಯ
Image
IND vs AUS: ಮತ್ತೆ ಸ್ಪಿನ್ನರ್ ಎದುರು ಮಂಕಾದ ಕೊಹ್ಲಿ; ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ
Image
“ನಂಬರ್ ಪ್ಲೇಟ್ ಇಲ್ಲ”: ಧೋನಿ ಟ್ರಾಕ್ಟರ್ ಡ್ರೈವಿಂಗ್ ವಿಡಿಯೋಗೆ ಜಡೇಜಾ ಕಾಮೆಂಟ್; ಫ್ಯಾನ್ಸ್ ಫಿದಾ

ವಿರಾಟ್ ಕೊಹ್ಲಿ 12 ರನ್​ಗೆ ಔಟಾಗುವ ಮೂಲಕ ಟೆಸ್ಟ್​ನಲ್ಲಿ ಶತಕದ ಬರ ಮುಂದುವರೆಸಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಸೂರ್ಯಕುಮಾರ್ ಯಾದವ್ 8 ರನ್​ಗೆ ಸುಸ್ತಾದರು. ಇದರ ನಡುವೆ ರೋಹಿತ್ ಏಕಾಂಗಿ ಆಗಿ ರನ್ ಕಲೆಹಾಕುತ್ತಿದ್ದರು. ನಂತರ 6ನೇ ವಿಕೆಟ್​ಗೆ ವೀಂದ್ರ ಜಡೇಜಾ ಜೊತೆಯಾದ ರೋಹಿತ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಆಧಾರವಾಗಿ ನಿಂತ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಡಿಸಿದರು. ಜೊತೆಗೆ ಹಿಟ್​ಮ್ಯಾನ್ ಬ್ಯಾಟ್​ನಿಂದ ಆಕರ್ಷಕ ಶತಕ ಮೂಡಿಬಂತು. ಇದು ರೋಹಿತ್ ಟೆಸ್ಟ್ ನಾಯಕನಾಗಿ ಗಳಿಸಿದ ಮೊದಲ ಶತಕವಾಗಿದೆ.

ರೋಹಿತ್-ಜಡೇಜಾ ಜೋಡಿ 61 ರನ್​ಗಳ ಕಾಣಿಕೆ ನೀಡಿದರು. 212 ಎಸೆತಗಳನ್ನು ಎದುರಿಸಿದ ಹಿಟ್​ಮ್ಯಾನ್ 15 ಪೋರ್, 2 ಸಿಕ್ಸರ್​ನೊಂದಿಗೆ 120 ರನ್ ಗಳಿಸಿದರು. ನಂತರ ಬಂದ ಶ್ರೀಕರ್ ಭರತ್ (8) ಪದಾರ್ಪಣೆ ಪಂದ್ಯದಲ್ಲಿ ಮೋಡಿ ಮಾಡಲು ವಿಫಲರಾದರು. ಈ ವೇಳೆ ಜಡೇಜಾ ಜೊತೆಯಾದ ಅಕ್ಷರ್ ಪಟೇಲ್ ಭರ್ಜರಿ ಆಟ ಪ್ರದರ್ಶಿಸಿದರು. ಆಸೀಸ್ ಬೌಲರ್​ಗಳನ್ನು ಧೈರ್ಯದಿಂದ ಎದುರಿಸುತ್ತಿರುವ ಈ ಜೋಡಿ ಅರ್ಧಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ 114 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ. 144 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಜಡೇಜಾ 170 ಎಸೆತಗಳಲ್ಲಿ 9 ಫೋರ್​ನೊಂದಿಗೆ 66 ರನ್ ಗಳಿಸಿ ಹಾಗೂ ಅಕ್ಷರ್ ಪಟೇಲ್ 102 ಎಸೆತಗಳಲ್ಲಿ 8 ಫೋರ್​ನೊಂದಿಗೆ 52 ಬಾರಿಸಿ ಕ್ರೀಸ್​ನಲ್ಲಿದ್ದಾರೆ. ಆಸ್ಟ್ರೇಲಿಯಾ ಪರ ಟಾಮ್ ಮರ್ಫಿ 36 ಓವರ್​​ಗಳಲ್ಲಿ 82 ರನ್ ನೀಡಿ 5 ವಿಕೆಟ್ ಕಿತ್ತರೆ, ನೇಥನ್ ಲ್ಯಾನ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 am, Sat, 11 February 23

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್