IND vs AUS: 6 ವರ್ಷಗಳ ನಂತರ ಮೊಹಾಲಿಯಲ್ಲಿ ಆಸೀಸ್ ವಿರುದ್ಧ ಟಿ20 ಪಂದ್ಯ; ಭಾರತದ ದಾಖಲೆ ಹೇಗಿದೆ?

| Updated By: ಪೃಥ್ವಿಶಂಕರ

Updated on: Sep 18, 2022 | 5:48 PM

IND vs AUS: ಭಾರತ ತಂಡ ಈ ಮೈದಾನದಲ್ಲಿ ಇದುವರೆಗೆ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ಮೂರು ಪಂದ್ಯಗಳನ್ನು ಗೆದ್ದಿದೆ.

IND vs AUS: 6 ವರ್ಷಗಳ ನಂತರ ಮೊಹಾಲಿಯಲ್ಲಿ ಆಸೀಸ್ ವಿರುದ್ಧ ಟಿ20 ಪಂದ್ಯ; ಭಾರತದ ದಾಖಲೆ ಹೇಗಿದೆ?
Ind Vs Aus
Follow us on

ಟಿ20 ವಿಶ್ವಕಪ್​ಗೂ (T20 World Cup) ಮುನ್ನ ಟೀಂ ಇಂಡಿಯಾ ಆಸ್ಟೇಲಿಯಾ ಹಾಗೂ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡುತ್ತಿದೆ. ಇದಕ್ಕಾಗಿ ಉಭಯ ತಂಡಗಳು ಕೂಡ ಮೊಹಾಲಿ ತಲುಪಿವೆ. ಅಲ್ಲದೆ ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸುಮಾರು 6 ವರ್ಷಗಳ ನಂತರ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಸರಣಿಗೂ ಮುನ್ನ 2016ರ ಮಾರ್ಚ್ 27ರಂದು ಉಭಯ ತಂಡಗಳ ನಡುವಿನ ಕೊನೆಯ ಟಿ20 ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು.

ಮೊಹಾಲಿಯಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ?

ಮೊಹಾಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡದ ದಾಖಲೆ ಉತ್ತಮವಾಗಿದೆ. ಭಾರತ ತಂಡ ಈ ಮೈದಾನದಲ್ಲಿ ಇದುವರೆಗೆ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ಮೂರು ಪಂದ್ಯಗಳನ್ನು ಗೆದ್ದಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಈ ಕ್ರೀಡಾಂಗಣ ಅತ್ಯಂತ ಅದೃಷ್ಟ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಈ ದಾಖಲೆಯನ್ನು ಬಲಪಡಿಸಲು ಬಯಸಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಉಮೇಶ್ ಯಾದವ್​ಗೆ ಅವಕಾಶ..!

ಕೊರೊನಾ ಸೋಂಕಿಗೆ ತುತ್ತಾದ ಬಳಿಕ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆಮಾಡಲಾಗಿದೆ. ಹೀಗಾಗಿ ಬೆಂಗಳೂರಿನ ಎನ್​ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾದವ್, ಭಾನುವಾರ ಬೆಳಗ್ಗೆ 7 ಗಂಟೆಗೆ ಚಂಡೀಗಢ ತಲುಪಿದ್ದಾರೆ. ಟೀಂ ಇಂಡಿಯಾದ ಉಳಿದ ಆಟಗಾರರು ಈಗಾಗಲೇ ಇಲ್ಲಿಗೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿದ್ದಾರೆ.

ಶಮಿ ಸ್ಥಾನಕ್ಕೆ ಉಮೇಶ್ ಆಯ್ಕೆಯಾಗಿ ಚಂಡೀಗಢ ತಲುಪಿದ ವೇಗ ನೋಡಿದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉಮೇಶ್ ಆಡುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ಉಮೇಶ್ 43 ತಿಂಗಳ ನಂತರ ಟಿ20ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಅವರು ಕೊನೆಯ ಬಾರಿಗೆ 2019 ರ ಫೆಬ್ರವರಿಯಲ್ಲಿ T20I ಆಡಿದ್ದರು. ಈ ಪಂದ್ಯವೂ ಆಸ್ಟ್ರೇಲಿಯಾದೊಂದಿಗೆ ಎಂಬುದು ಗಮನಾರ್ಹವಾಗಿದೆ.

ಆಸೀಸ್ ವಿರುದ್ಧದ ಟಿ20 ಸರಣಿಗೆ ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್–ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್–ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್.

Published On - 5:45 pm, Sun, 18 September 22