ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (India vs Australia) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 99 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ (Team India) 2 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 399 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ 99 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಶ್ರೇಯಸ್ ಅಯ್ಯರ್ (Shreyas Iyer) ಸ್ಫೋಟಕ ಶತಕ ಬಾರಿಸಿದ್ದು, ವಿಶ್ವಕಪ್‌ಗೂ ಮುನ್ನ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ ಶ್ರೇಯಸ್ ಅಯ್ಯರ್ ಅವರ ಈ ಶತಕ ಸುಮಾರು ಒಂದು ವರ್ಷದ ನಂತರ ಬಂದಿದ್ದು, ಇದು ಅವರ ವೃತ್ತಿಜೀವನದ ಮೂರನೇ ಶತಕವಾಗಿದೆ.
ಭಾನುವಾರದಂದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಈ ನಿರ್ಧಾರವು ಅವರಿಗೆ ತಪ್ಪು ಎಂದು ಸಾಬೀತಾಯಿತು. ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಬಹುಬೇಗ ಪತನಗೊಂಡರೂ ಶ್ರೇಯಸ್ ಅಯ್ಯರ್ ಕ್ರೀಸ್ಗೆ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಬಾರಿಸಲಾರಂಭಿಸಿದರು.
IND vs PAK: ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್! ವಿಡಿಯೋ ನೋಡಿ
ಶ್ರೇಯಸ್ ಅಯ್ಯರ್ ತಮ್ಮ ಇನ್ನಿಂಗ್ಸ್ನಲ್ಲಿ 86 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ಶತಕ ಪೂರೈಸಿದರು. ಇದಲ್ಲದೆ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ನಡುವೆ ಸುಮಾರು 200 ರನ್‌ಗಳ ಜೊತೆಯಾಟವೂ ಇತ್ತು. ಅಂತಿಮವಾಗಿ 90 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಶ್ರೇಯಸ್ ಅಯ್ಯರ್ 105 ರನ್ ಸಿಡಿಸಿ ಔಟಾದರು.
ಶ್ರೇಯಸ್ ಅಯ್ಯರ್ ಫಾರ್ಮ್‌ಗೆ ಬರುತ್ತಿರುವುದು ಟೀಂ ಇಂಡಿಯಾಕ್ಕೆ ಒಂದು ರಿಲೀಫ್ ನ್ಯೂಸ್. ಏಕೆಂದರೆ ಅವರು ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಶ್ರೇಯಸ್ ಅಯ್ಯರ್ ಅವರ ಈ ಶತಕ ಬಹಳ ಮುಖ್ಯವಾಗಿದೆ. ಗಾಯದ ನಂತರ ತಂಡಕ್ಕೆ ಮರಳುತ್ತಿದ್ದ ಶ್ರೇಯಸ್ ಅಯ್ಯರ್ ಅವರ ಬ್ಯಾಟ್‌ನಿಂದ ಕೊನೆಯ ಏಕದಿನ ಶತಕ ಅಕ್ಟೋಬರ್ 2022 ರಲ್ಲಿ ಬಂದಿತ್ತು
ಶ್ರೇಯಸ್ ಏಕದಿನ ವಿಶ್ವಕಪ್ ತಂಡದಲ್ಲಿದ್ದು, ಟೀಂ ಇಂಡಿಯಾಕ್ಕೆ 4ನೇ ಕ್ರಮಾಂಕದಲ್ಲಿ ಅತ್ಯಂತ ಸೂಕ್ತವಾದ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಆದರೆ ಶ್ರೇಯಸ್ 4ನೇ ಸ್ಥಾನಕ್ಕೆ ಬಂದರೆ, ಸೂರ್ಯಕುಮಾರ್ ಯಾದವ್ ತಂಡದ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ.
113 ರನ್ vs ದಕ್ಷಿಣ ಆಫ್ರಿಕಾ, 9 ಅಕ್ಟೋಬರ್ 2022
103 ರನ್ vs ನ್ಯೂಜಿಲೆಂಡ್, 5 ಫೆಬ್ರವರಿ 2020
105 ರನ್ vsಆಸ್ಟ್ರೇಲಿಯಾ, 24 ಸೆಪ್ಟೆಂಬರ್ 2023
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ