Breaking: ಎರಡನೇ ಏಕದಿನ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅಲಭ್ಯ..! ಖಚಿತ ಪಡಿಸಿದ ಬಿಸಿಸಿಐ
Jasprit Bumrah: ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಇತ್ತಿಚೆಗೆ ತಂದೆಯಾಗಿರುವ ಬುಮ್ರಾ ತನ್ನ ಕುಟುಂಬವನ್ನು ಬೇಟಿ ಮಾಡುವ ಸಲುವಾಗಿ ತಂಡದಿಂದ ಹೊರನಡೆದಿದ್ದಾರೆ. ಹೀಗಾಗಿ ಅವರು ತಂಡದೊಂದಿಗೆ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಪ್ರಯಾಣ ಬೆಳೆಸಿಲ್ಲ ಎಂದಿದೆ.
ಮೊಹಾಲಿಯಲ್ಲಿ ಬಲಿಷ್ಠ ಆಸೀಸ್ ಪಡೆಯನ್ನು ಸುಲಭವಾಗಿ ಮಣಿಸಿದ ಟಿಂ ಇಂಡಿಯಾ (India vs Australia) ಇದೀಗ ಮತ್ತೊಮ್ಮೆ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಇಂದೋರ್ ಮೈದಾನದಲ್ಲಿ ಈ ಬಾರಿಯ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಟೀಂ ಇಂಡಿಯಾ (Team India) ಪಾಳಯದಿಂದ ಬಿಗ್ ನ್ಯೂಸ್ ಹೊರಬಿದ್ದಿದೆ. ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಎರಡನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬಿಸಿಸಿಐ (BCCI) ತನ್ನ ಟ್ವಿಟರ್ ಖಾತೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಇತ್ತಿಚೆಗೆ ತಂದೆಯಾಗಿರುವ ಬುಮ್ರಾ ತನ್ನ ಕುಟುಂಬವನ್ನು ಬೇಟಿ ಮಾಡುವ ಸಲುವಾಗಿ ತಂಡದಿಂದ ಹೊರನಡೆದಿದ್ದಾರೆ. ಹೀಗಾಗಿ ಅವರು ತಂಡದೊಂದಿಗೆ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಪ್ರಯಾಣ ಬೆಳೆಸಿಲ್ಲ ಎಂದಿದೆ.
ಇನ್ನು ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಯುವ ವೇಗಿ ಮುಖೇಶ್ ಕುಮಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೀಗ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿರುವ ಬುಮ್ರಾ, ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಅಂದರೆ, ಸೆಪ್ಟೆಂಬರ್ 27 ರಂದು ನಡೆಯಲ್ಲಿರುವ ಸರಣಿಯ ಅಂತಿಮ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
🚨 UPDATE 🚨: Mr Jasprit Bumrah did not travel with the team to Indore for the 2nd ODI against Australia.
He has gone to visit his family and given a short break by the team management. Fast bowler Mukesh Kumar has joined the team as Bumrah’s replacement for the 2nd ODI.
Bumrah… pic.twitter.com/4shp3AlXZV
— BCCI (@BCCI) September 24, 2023
ಹಿರಿಯರಿಗೆ ವಿಶ್ರಾಂತಿ
ಏಕದಿನ ವಿಶ್ವಕಪ್‌ಗೂ ಮುನ್ನ ಈ ಸರಣಿ ನಡೆಯುತ್ತಿದ್ದು, ಎಲ್ಲಾ ಹಿರಿಯ ಹಾಗೂ ಪ್ರಮುಖ ಆಟಗಾರರಿಗೆ ಸರದಿ ಆಧಾರದ ಮೇಲೆ ವಿಶ್ರಾಂತಿ ನೀಡಲಾಗುತ್ತಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್ದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯ ಆಡಿದ ಬಳಿಕ ಎರಡನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದು, ಮೂರನೇ ಪಂದ್ಯದ ಮೂಲಕ ತಂಡಕ್ಕೆ ವಾಪಸಾಗಲಿದ್ದಾರೆ.
ಅಪ್ಪನಾದ ಖುಷಿಯಲ್ಲಿರುವ ಬುಮ್ರಾಗೆ ವಿಶೇಷ ಉಡುಗೊರೆ ನೀಡಿದ ಪಾಕ್ ವೇಗಿ ಶಾಹೀನ್ ಅಫ್ರಿದಿ! ವಿಡಿಯೋ ನೋಡಿ
ಆಸೀಸ್ ತಂಡದಲ್ಲೂ ಬದಲಾವಣೆ
ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ ತಂಡವೂ ಬದಲಾವಣೆಗಳನ್ನು ಮಾಡಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಪ್ಯಾಟ್ ಕಮಿನ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಈ ಸರಣಿಯ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆದ್ದರೆ, ಭಾರತ ಸರಣಿ ವಶಪಡಿಸಿಕೊಳ್ಳಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 24 September 23