ಅಪ್ಪನಾದ ಖುಷಿಯಲ್ಲಿರುವ ಬುಮ್ರಾಗೆ ವಿಶೇಷ ಉಡುಗೊರೆ ನೀಡಿದ ಪಾಕ್ ವೇಗಿ ಶಾಹೀನ್ ಅಫ್ರಿದಿ! ವಿಡಿಯೋ ನೋಡಿ
India vs Pakistan: ಮಳೆಯಿಂದಾಗಿ ಭಾನುವಾರದ ಪಂದ್ಯವನ್ನು ಮುಂದೂಡಿದ ನಂತರ, ಎರಡೂ ತಂಡಗಳು ಹೋಟೆಲ್‌ಗೆ ವಾಪಸ್ಸಾಗುತ್ತಿದ್ದವು. ಈ ವೇಳೆ ವಿಶೇಷ ಉಡುಗೊರೆಯನ್ನು ಹೊಂದಿರುವ ಬಾಕ್ಸ್‌ನೊಂದಿಗೆ ಬುಮ್ರಾ ಬಳಿಗೆ ಬಂದ ಶಾಹೀನ್, ಬುಮ್ರಾಗೆ ಆ ಉಡುಗೊರೆಯನ್ನು ನೀಡಿ ತಂದೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಸತತ ಎರಡನೇ ಬಾರಿಗೆ ಏಷ್ಯಾಕಪ್‌ನಲ್ಲಿ (Asia Cup 2023) ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ (India vs Pakistan) ಕ್ರಿಕೆಟಿಗರು ನಿರಾಸೆ ಎದುರಿಸಬೇಕಾಯಿತು. ಈ ಮೊದಲು ಕ್ಯಾಂಡಿಯಲ್ಲಿ ನಡೆದ ಈ ಇಬ್ಬರ ನಡುವಿನ ಗುಂಪು-ಹಂತದ ಪಂದ್ಯವನ್ನೂ ಮಳೆಯಿಂದಾಗಿ ಪೂರ್ಣಗೊಳಿಸಲಾಗಲಿಲ್ಲ. ಇದೀಗ ಸೆಪ್ಟೆಂಬರ್ 10 ರ ಭಾನುವಾರದಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಸೂಪರ್-4 ಸುತ್ತಿನ ಪಂದ್ಯದಲ್ಲೂ ಮಳೆ ಸುರಿದು ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಹೀಗಾಗಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಎದುರಾಯಿತು. ಆದರೆ ಪಂದ್ಯವನ್ನು ಮುಂದೂಡಿದ ನಂತರ ಕಂಡು ಬಂದ ದೃಶ್ಯ ಉಭಯ ದೇಶಗಳ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕಳೆದ ವಾರವಷ್ಟೇ ತಂದೆಯಾದ ಬುಮ್ರಾ
ವಾಸ್ತವವಾಗಿ ಕಳೆದ ವಾರವಷ್ಟೇ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. ಹೀಗಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬುಮ್ರಾ, ನೇಪಾಳ ವಿರುದ್ಧದ ಪಂದ್ಯಕ್ಕೆ ಗೈರಾಗಿ ಭಾರತಕ್ಕೆ ವಾಪಸ್ಸಾಗಿದ್ದರು. ಆ ಬಳಿಕ ಮಗು ಹಾಗೂ ಮಡದಿಯೊಂದಿಗೆ ಸಮಯ ಕಳೆದಿದ್ದ ಯಾರ್ಕರ್ ಕಿಂಗ್, ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದರು. ಪ್ರಸ್ತುತ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದೂ, ಮಳೆಯಿಂದಾಗಿ ಪಂದ್ಯ ನಿಂತ ಬಳಿಕ ತಂದೆಯಾದ ಖುಷಿಯಲ್ಲಿರುವ ಬುಮ್ರಾ ಅವರ ಬಳಿಗೆ ಆಗಮಿಸಿದ ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರು ಬುಮ್ರಾಗೆ ವಿಶೇಷ ಉಡುಗೊರೆ ನೀಡಿ ತಾಯಿ ಮತ್ತು ಮಗುವಿನ ಕುಶಲೋಪರಿ ವಿಚಾರಿಸಿದರು.
ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸಂಕಷ್ಟಕ್ಕೆ ಸಿಲುಕಲಿದೆ ಟೀಂ ಇಂಡಿಯಾ! ಇಲ್ಲಿದೆ ಫೈನಲ್ ಫೈಟ್ ಲೆಕ್ಕಾಚಾರ
ಬುಮ್ರಾಗೆ ಶಾಹೀನ್ ಉಡುಗೊರೆ
ಮಳೆಯಿಂದಾಗಿ ಭಾನುವಾರದ ಪಂದ್ಯವನ್ನು ಮುಂದೂಡಿದ ನಂತರ, ಎರಡೂ ತಂಡಗಳು ಹೋಟೆಲ್‌ಗೆ ವಾಪಸ್ಸಾಗುತ್ತಿದ್ದವು. ಈ ವೇಳೆ ವಿಶೇಷ ಉಡುಗೊರೆಯನ್ನು ಹೊಂದಿರುವ ಬಾಕ್ಸ್‌ನೊಂದಿಗೆ ಬುಮ್ರಾ ಬಳಿಗೆ ಬಂದ ಶಾಹೀನ್, ಬುಮ್ರಾಗೆ ಆ ಉಡುಗೊರೆಯನ್ನು ನೀಡಿ ತಂದೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಅಲ್ಲಾಹನು ನಿಮ್ಮ ಮಗನನ್ನು ಆಶೀರ್ವದಿಸುತ್ತಾನೆ. ಆತ ಹೊಸ ಬುಮ್ರಾ (ಅಂದರೆ ಅವನ ತಂದೆಯಂತೆ ಬೌಲರ್) ಆಗಲಿ ಎಂದು ಶಾಹೀನ್ ಹಾರೈಸಿದರು. ವಿಶೇಷ ಉಡುಗೊರೆಗಾಗಿ ಶಾಹೀನ್‌ಗೆ ಧನ್ಯವಾದ ಅರ್ಪಿಸಿದ ಬುಮ್ರಾ, ಈ ಪ್ರೀತಿಯ ಗೆಸ್ಚರ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
Spreading joy 🙌
Shaheen Afridi delivers smiles to new dad Jasprit Bumrah 👶🏼🎁#PAKvIND | #AsiaCup2023 pic.twitter.com/Nx04tdegjX
— Pakistan Cricket (@TheRealPCB) September 10, 2023
ಪಂದ್ಯ ಹೀಗಿತ್ತು
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯದ ಬಗ್ಗೆ ಹೇಳುವುದಾದರೆ, ಈ ಹೈವೋಲ್ಟೆಜ್ ಕದನ ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಸೆಪ್ಟೆಂಬರ್ 10 ರ ಭಾನುವಾರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಗ ಅದು ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರ ಸೋಮವಾರದಂದು ಪೂರ್ಣಗೊಳ್ಳಲಿದೆ. ಈ ಪಂದ್ಯದಲ್ಲಿ, ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಇನಿಂಗ್ಸ್‌ನ 25 ನೇ ಓವರ್‌ನಲ್ಲಿ, ಭಾರೀ ಮಳೆಯ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಇದೀಗ ಸೋಮವಾರ 25ನೇ ಓವರ್‌ನಿಂದ ಭಾರತದ ಇನ್ನಿಂಗ್ಸ್ ಮತ್ತೆ ಆರಂಭವಾಗಲಿದೆ. ಸದ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Mon, 11 September 23