ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದೆಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಅವರಂತಹ ಬ್ಯಾಟ್ಸ್‌ಮನ್‌ಗಳು 10 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರೆ, ಮತ್ತೊಂದೆಡೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆರ್.ಅಶ್ವಿನ್, ಬಾಂಗ್ಲಾ ಬೌಲರ್ಗಳ ಬೆವರಿಳಿಸಿ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ 8ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅಶ್ವಿನ್, ಜಡೇಜಾ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಹಾಗೆಯೇ ತಂಡದ ಇನ್ನಿಂಗ್ಸ್ಗೆ ವೇಗ ನೀಡಿದ ಅಶ್ವಿನ್ ಅಮೋಘವಾಗಿ ಬ್ಯಾಟ್ ಬೀಸುವ ಮೂಲಕ ಶತಕ ಸಿಡಿಸಿ ಮಿಂಚಿದರು. ಕೇವಲ 108 ಎಸೆತಗಳಲ್ಲಿ ತಮ್ಮ 6ನೇ ಟೆಸ್ಟ್ ಶತಕವನ್ನು ಪೂರೈಸಿದ ಅಶ್ವಿನ್ಗೆ ತವರು ನೆಲದಲ್ಲಿ ಇದು ಎರಡನೇ ಶತಕವಾಗಿದೆ.
15 ಫೆಬ್ರವರಿ 2021 ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದ ಅಶ್ವಿನ್ ಇದೀಗ ಬರೋಬ್ಬರಿ 1312 ದಿನಗಳ ನಂತರ ಮತ್ತೊಮ್ಮೆ ಚೆನ್ನೈನಲ್ಲಿ ಶತಕದ ಇನ್ನಿಂಗ್ಸ್ ಕಟ್ಟಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ ಇದುವರೆಗೆ 112 ಎಸೆತಗಳನ್ನು ಎದುರಿಸಿರುವ ಅಶ್ವಿನ್, 10 ಬೌಂಡರಿ ಹಾಗೂ 2 ಬೌಂಡರಿ ಸಹಿತ ಅಜೇಯ 102 ರನ್ ಕಲೆಹಾಕಿದ್ದಾರೆ. ಇನ್ನು ಎರಡನೇ ದಿನದಾಟದಲ್ಲಿ ಅಶ್ವಿನ್ ತಮ್ಮ ಇನ್ನಿಂಗ್ಸ್ ಅನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
A stellar TON when the going got tough!
A round of applause for Chennai’s very own – @ashwinravi99 👏👏
LIVE – https://t.co/jV4wK7BgV2 #INDvBAN @IDFCFIRSTBank pic.twitter.com/j2HcyA6HAu
— BCCI (@BCCI) September 19, 2024
ಆರ್. ಅಶ್ವಿನ್ ಕ್ರೀಸ್ಗೆ ಕಾಲಿಟ್ಟಾಗ ತಂಡದ 6 ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು. ರೋಹಿತ್, ವಿರಾಟ್, ಶುಭ್ಮನ್, ಪಂತ್, ಜೈಸ್ವಾಲ್, ರಾಹುಲ್ ಅವರ ವಿಕೆಟ್ ಪತನಗೊಂಡಿತ್ತು. ಹೀಗಾಗಿ ಟೀಂ ಇಂಡಿಯಾ 200ರ ಗಡಿ ದಾಟಲು ಸಾಧ್ಯವೇ ಇಲ್ಲ ಅನ್ನಿಸಿತು. ಆದರೆ 8ನೇ ಕ್ರಮಾಂಕದಲ್ಲಿ ಬಂದ ಅಶ್ವಿನ್ ಕ್ರೀಸ್ಗೆ ಬಂದ ಕೂಡಲೇ ಎರಡೆರಡು ಬೌಂಡರಿ ಬಾರಿಸಿ, ಬಾಂಗ್ಲಾ ಬೌಲರ್ಗಳಿಗೆ ಈ ದಿನ ನನ್ನದು ಎಂಬ ಸುಳಿವು ನೀಡಿದರು. ಆ ನಂತರ ಕೇವಲ 58 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಅಶ್ವಿನ್ ಇಲ್ಲಿಗೆ ನಿಲ್ಲದೆ ಮುಂದಿನ 50 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ವೇಳೆ ಅಶ್ವಿನ್ ಜಡೇಜಾ ಜೊತೆಗೆ ದಾಖಲೆಯ ಜೊತೆಯಾಟವನ್ನು ಮಾಡಿದರು.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಶತಕ ಬಾರಿಸಿದ್ದ ಅಶ್ವಿನ್, ಇದಾದ ಬಳಿಕ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಮ್ಮೆ ಶತಕ ಸಿಡಿಸಿದ್ದರು. ನಂತರ 2016ರಲ್ಲಿ ಮತ್ತೊಮ್ಮೆ ವೆಸ್ಟ್ ಇಂಡೀಸ್ ವಿರುದ್ಧವೇ ಶತಕದ ಇನ್ನಿಂಗ್ಸ್ ಆಡಿದ್ದ ಅಶ್ವಿನ್ಗೆ ಅದು ಮೂರನೇ ಟೆಸ್ಟ್ ಶತಕವಾಗಿದ್ದರೆ, ವಿದೇಶಿ ನೆಲದಲ್ಲಿ ಮೊದಲ ಶತಕವಾಗಿತ್ತು. ಅದೇ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ತಮ್ಮ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದ್ದರು. ನಂತರ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದ ಅಶ್ವಿನ್ ಇದೀಗ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Thu, 19 September 24