IND vs BAN: ಹಳೆಯ ಚಾಳಿ ಬಿಡದ ವಿರಾಟ್; ತಪ್ಪು ತಿದ್ದಿಕೊಳ್ಳಲು ಕೊಹ್ಲಿಗೆ ಇನ್ನೆಷ್ಟು ಸಮಯಬೇಕು?

Virat Kohli: ವೇಗಿ ಮಹಮೂದ್ ಫುಲ್ ಲೆಂಗ್ತ್ ಬಾಲ್ ಅನ್ನು ಔಟ್ ಸೈಡ್ ಆಫ್​ನಲ್ಲಿ ಬೌಲ್ ಮಾಡಿದರು. ಈ ವೇಳೆ ಕೊಹ್ಲಿ ಆ ಚೆಂಡನ್ನು ಆಡದೆ ಬಿಟ್ಟಿದ್ದರೆ ಅದು ಸೀದಾ ವಿಕೆಟ್ ಕೀಪರ್ ಕೈಸೇರುತ್ತಿತ್ತು. ಆದರೆ ನಾಲ್ಕನೇ ಸ್ಟಂಪ್​ನಿಂದ ಹೊರಹೋಗುತ್ತಿರುವ ಚೆಂಡನ್ನು ಆಡಲು ಪ್ರಯತ್ನಿಸಿ ವಿಕೆಟ್ ಒಪ್ಪಿಸುವ ತಮ್ಮ ಹಳೆಯ ಚಾಳಿಯನ್ನು ಇಲ್ಲೂ ಮುಂದುವರೆಸಿದರು.

IND vs BAN: ಹಳೆಯ ಚಾಳಿ ಬಿಡದ ವಿರಾಟ್; ತಪ್ಪು ತಿದ್ದಿಕೊಳ್ಳಲು ಕೊಹ್ಲಿಗೆ ಇನ್ನೆಷ್ಟು ಸಮಯಬೇಕು?
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Sep 19, 2024 | 3:35 PM

ಭಾರತ- ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದೆ. ಟಾಪ್ ಆರ್ಡರ್​ನಲ್ಲಿ ದೈತ್ಯರ ದಂಡನೇ ಹೊಂದಿದ್ದರೂ, ಬಾಂಗ್ಲಾದೇಶ ಯುವ ಬೌಲರ್​ ಎದುರು ಅನುಭವಿಗಳೆನಿಸಿಕೊಂಡವರು ಮಕಾಡೆ ಮಲಗಿದರು. ಅದರಲ್ಲೂ ಬರೋಬ್ಬರಿ 9 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿಯ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲವನ್ನು ಹುಸಿ ಮಾಡಿದ ವಿರಾಟ್, ಕೇವಲ 6 ರನ್ ಬಾರಿಸಿ ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಇಲ್ಲಿ ಕೊಹ್ಲಿ ಬೇಗ ಔಟಾದರೂ ಎನ್ನುವ ಆಘಾತಕ್ಕಿಂತ ತಮಗೆ ಬಹಳ ವರ್ಷಗಳಿಂದ ಕಾಡುತ್ತಿರುವ ಅದೊಂದು ನ್ಯೂನತೆಗೆ ಕೊಹ್ಲಿ ಮತ್ತೊಮ್ಮೆ ಬಲಿಯಾದರು ಎಂಬುದು ಅಭಿಮಾನಿಗಳು ನಿರಾಸೆಗೊಳ್ಳುವಂತೆ ಮಾಡಿದೆ.

ವಾಸ್ತವವಾಗಿ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಮುರಿಯದ ದಾಖಲೆಗಳಿಲ್ಲ. ಸೃಷ್ಟಿಸಿದ ರೆಕಾರ್ಡ್​ಗಳೂ ಇಲ್ಲ. ಆದಾಗ್ಯೂ ಕೊಹ್ಲಿಗೆ ಮಾತ್ರ ತನ್ನ ಅದೊಂದು ಲೋಪವನ್ನು ಇದುವರೆಗೆ ಸರಿಪಡಿಸಿಕೊಳ್ಳಲು ಆಗಿಲ್ಲ. ಇಂದಿನ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 6 ರನ್ ಬಾರಿಸಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಆದರೆ ಮತ್ತದೆ ಹಳೆಯ ತಪ್ಪನ್ನು ಪುನರಾವರ್ತಿಸಿ ಸುಲಭವಾಗಿ ವಿಕೆಟ್ ಕೈಚೆಲ್ಲಿದರು.

ವೀಕ್ನೆಸ್​ಗೆ ಬಲಿಯಾದ ವಿರಾಟ್

ಆರಂಭದಿಂದಲೂ ಟೀಂ ಇಂಡಿಯಾ ಬ್ಯಾಟರ್​ಗಳಿಗೆ ತಲೆನೋವಾಗಿದ್ದ ಬಾಂಗ್ಲಾದೇಶದ ಯುವ ವೇಗದ ಬೌಲರ್ ಹಸನ್ ಮಹಮೂದ್ ಎಸೆತದಲ್ಲಿ ಕೊಹ್ಲಿ ವಿಕೆಟ್​ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ವಾಸ್ತವವಾಗಿ ಮಹಮೂದ್ ಫುಲ್ ಲೆಂಗ್ತ್ ಬಾಲ್ ಅನ್ನು ಔಟ್ ಸೈಡ್ ಆಫ್​ನಲ್ಲಿ ಬೌಲ್ ಮಾಡಿದರು. ಈ ವೇಳೆ ಕೊಹ್ಲಿ ಆ ಚೆಂಡನ್ನು ಆಡದೆ ಬಿಟ್ಟಿದ್ದರೆ ಅದು ಸೀದಾ ವಿಕೆಟ್ ಕೀಪರ್ ಕೈಸೇರುತ್ತಿತ್ತು. ಆದರೆ ನಾಲ್ಕನೇ ಸ್ಟಂಪ್​ನಿಂದ ಹೊರಹೋಗುತ್ತಿರುವ ಚೆಂಡನ್ನು ಆಡಲು ಪ್ರಯತ್ನಿಸಿ ವಿಕೆಟ್ ಒಪ್ಪಿಸುವ ತಮ್ಮ ಹಳೆಯ ಚಾಳಿಯನ್ನು ಇಲ್ಲೂ ಮುಂದುವರೆಸಿದ ವಿರಾಟ್, ಅತ್ಯಂತ ಕೆಟ್ಟ ಶಾಟ್ ಆಡಿ ವಿಕೆಟ್ ಕೀಪರ್ ಲಿಟನ್ ದಾಸ್​ಗೆ ಸುಲಭ ಕ್ಯಾಚ್ ನೀಡಿದರು. ಇದರೊಂದಿಗೆ ಮಹಮೂದ್ ಭಾರತ ತಂಡಕ್ಕೆ ಮೂರನೇ ಹೊಡೆತ ನೀಡಿದರು. ಇದಕ್ಕೂ ಮುನ್ನ ಅವರು ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರನ್ನು ಔಟ್ ಮಾಡಿದ್ದರು.

ಟೆಸ್ಟ್​ನಿಂದ ದೀರ್ಘ ರಜೆಯ ಪರಿಣಾಮ

ವಿರಾಟ್ ಅವರ ಕೊನೆಯ 10 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಗಮನಿಸಿದರೆ, ಇದರಲ್ಲಿ ಅವರು ಎರಡು ಅರ್ಧ ಶತಕ ಮತ್ತು ಎರಡು ಶತಕಗಳನ್ನು ಸಹ ಗಳಿಸಿದ್ದಾರೆ. ಆದರೆ ಸುಮಾರು 9 ತಿಂಗಳ ಕಾಲ ಟೆಸ್ಟ್ ಪಂದ್ಯಗಳಿಂದ ದೂರ ಉಳಿದು ಟಿ20 ಕ್ರಿಕೆಟ್ ಆಡುತ್ತಿದ್ದ ಪರಿಣಾಮ ಚೆನ್ನೈನಲ್ಲಿ ಗೋಚರವಾಯಿತು. ಹೊರಗೆ ಹೋಗುವ ಚೆಂಡನ್ನು ಆಡುವ ಪ್ರಯತ್ನದಲ್ಲಿ ಅವರು ತಮ್ಮ ವಿಕೆಟ್ ಕಳೆದುಕೊಂಡರು. ನಾಲ್ಕನೇ ಸ್ಟಂಪ್​ನಲ್ಲಿ ಬಿದ್ದು ಹೊರಗೆ ಹೋಗುತ್ತಿದ್ದ ಚೆಂಡನ್ನು ಆಡಲು ಹೋದ ಕೊಹ್ಲಿ ಭಾರಿ ಬೆಲೆ ತೆರಬೇಕಾಯಿತು. ಅಚ್ಚರಿಯ ಸಂಗತಿ ಎಂದರೆ ನಾಲ್ಕನೇ ಪಂದ್ಯವನ್ನಷ್ಟೇ ಆಡುತ್ತಿರುವ ಹಸನ್ ಮಹಮೂದ್, ಕೊಹ್ಲಿಯ ದೌರ್ಬಲ್ಯದ ಲಾಭ ಪಡೆದು ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Thu, 19 September 24

ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
Video: ಕಾರು ಗುದ್ದಿದ್ದಕ್ಕೆ ನಾಯಿಯ ರಿವೇಂಜ್ ನೋಡಿ
Video: ಕಾರು ಗುದ್ದಿದ್ದಕ್ಕೆ ನಾಯಿಯ ರಿವೇಂಜ್ ನೋಡಿ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ