ಟೀಂ ಇಂಡಿಯಾ ವಿರುದ್ಧದ ಕೊನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರವಾಸಿ ಇಂಗ್ಲೆಂಡ್ ತಂಡ (India vs England) ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಒಲಿ ರಾಬಿನ್ಸನ್ (Ollie Robinson) ಬದಲಿಗೆ ಮಾರ್ಕ್ವುಡ್ (Mark Wood) ಕಣಕ್ಕಿಳಿಯುತ್ತಿದ್ದಾರೆ. ಉಳಿದಂತೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಕೊನೆಯ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದೆ. ಉಭಯ ತಂಡಗಳ ನಡುವಿನ ಈ ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕೆ ಧರ್ಮಶಾಲಾ ಮೈದಾನ ಆತಿಥ್ಯವಹಿಸುತ್ತಿದೆ. ಈಗಾಗಲೇ ಈ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಟೀಂ ಇಂಡಿಯಾಗೆ (Team India) ಇದು ಔಪಾಚಾರಿಕ ಪಂದ್ಯವಾಗಿದ್ದರೆ, ಇತ್ತ ಸರಣಿ ಸೋತಿರುವ ಆಂಗ್ಲರಿಗೆ ಈ ಪಂದ್ಯ ಮುಜುಗರದ ಸರಣಿ ಸೋಲಿನ ಅವಮಾನದಿಂದ ಪಾರಾಗುವ ಕೊನೆಯ ಅವಕಾಶವಾಗಿದೆ. ಹೀಗಾಗಿ ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಬೆನ್ ಸ್ಟೋಕ್ಸ್ ಪಡೆ ಕಣಕ್ಕಿಳಿಯಲ್ಲಿದೆ.
ಮೇಲೆ ಹೇಳಿದಂತೆ ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಅವರನ್ನು ಧರ್ಮಶಾಲಾ ಟೆಸ್ಟ್‌ಗೆ ಆಡುವ 11 ರಲ್ಲಿ ಸೇರಿಸಲಾಗಿದೆ. ವಾಸ್ತವವಾಗಿ, ಧರ್ಮಶಾಲಾದ ಪಿಚ್ ಮತ್ತು ಹವಾಮಾನವು ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಇಂಗ್ಲೆಂಡ್ ಒಲಿ ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಈ ಸರಣಿಯಲ್ಲಿ ಇದುವರೆಗೆ ಭಾರತದ ವಿರುದ್ಧ ವುಡ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಅಲ್ಲದೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಾಬಿನ್ಸನ್ ಬೌಲಿಂಗ್ನಲ್ಲಿ ವಿಫಲವಾಗಿದ್ದು ಕೂಡ ತಂಡದಲ್ಲಿ ಬದಲಾವಣೆ ಮಾಡಲು ಪ್ರಮುಖ ಕಾರಣವಾಗಿದೆ.
IND vs ENG: ರಾಂಚಿ ಟೆಸ್ಟ್ ನಡುವೆ ಇಂಗ್ಲೆಂಡ್ಗೆ ಬಿಗ್ ಶಾಕ್; ಸ್ಟಾರ್ ಪ್ಲೇಯರ್ ಸರಣಿಯಿಂದ ಔಟ್..!
ವಾಸ್ತವವಾಗಿ ರಾಂಚಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 13 ಓವರ್‌ಗಳನ್ನು ಬೌಲ್ ಮಾಡಿದ ರಾಬಿನ್ಸನ್ ಇದರಲ್ಲಿ 4.15 ರ ಎಕಾನಮಿಯಲ್ಲಿ 54 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಇದರ ಫಲವಾಗಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ರಾಬಿನ್ಸನ್‌ಗೆ ಒಂದೇ ಒಂದು ಓವರ್ ಬೌಲ್ ಮಾಡಲು ಅವಕಾಶ ನೀಡಲಿಲ್ಲ. ಆದಾಗ್ಯೂ, ರಾಂಚಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿದ್ದ ರಾಬಿನ್ಸನ್, 96 ಎಸೆತಗಳಲ್ಲಿ 58 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.
England ring in one change for the fifth and final Test against India in Dharamsala 🗒#WTC25 | #INDvENG | More 👇https://t.co/mtR3vzJ6lL
— ICC (@ICC) March 6, 2024
ಕೊನೆಯ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್.
Published On - 2:21 pm, Wed, 6 March 24