IND vs ENG: ಸರ್ಫರಾಜ್ ಮಾತು ಕೇಳದೆ ಸುವರ್ಣಾವಕಾಶ ಕೈಚೆಲ್ಲಿದ ರೋಹಿತ್; ನೀವೇ ನೋಡಿ
IND vs ENG: ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನ27ನೇ ಓವರ್ ಬೌಲ್ ಮಾಡುವ ಜವಬ್ದಾರಿ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಕ್ರೌಲಿ ಮೊದಲ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟಿಗೆ ತಾಗಿ ಆ ನಂತರ ಪ್ಯಾಡ್ಗೆ ಬಡಿದು, ಶಾರ್ಟ್ ಲೆಗ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಕೈಸೇರಿತು. ಕೂಡಲೇ ಸರ್ಫರಾಜ್ ಔಟ್ಗಾಗಿ ಮನವಿ ಮಾಡಿದರು.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯ ಧರ್ಮಶಾಲಾದಲ್ಲಿ (Dharamshala) ನಡೆಯುತ್ತಿದೆ. ಈ ಪಂದ್ಯದಲ್ಲಿ ಈಗಾಗಲೇ ಮೊದಲ ಇನ್ನಿಂಗ್ಸ್ ಮುಗಿಸಿರುವ ಇಂಗ್ಲೆಂಡ್ ತಂಡವು ಕುಲ್ದೀಪ್ ಯಾದವ್ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿ ಕೇವಲ 218 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇಂಗ್ಲೆಂಡ್ ಪರ ಆರಂಭಿಕ ಝಾಕ್ ಕ್ರೌಲಿ (Zak Crawley) ಬಾರಿಸಿದ 79 ರನ್ಗಳ ತಂಡದ ಪರ ದಾಖಲಾದ ಅತ್ಯಧಿಕ ಮೊತ್ತವಾಯಿತು. ವಾಸ್ತವವಾಗಿ ಸರ್ಫರಾಜ್ (Sarfaraz Khan) ಮನವಿಯನ್ನು ಪುರಸ್ಕರಿಸಿ ನಾಯಕ ರೋಹಿತ್ ಶರ್ಮಾ (Rohit Sharma) ಡಿಆರ್‌ಎಸ್ ತೆಗೆದುಕೊಂಡಿದ್ದರೆ, ಕ್ರೌಲಿ ಇಷ್ಟು ರನ್ ಕಲೆಹಾಕುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಯುವ ಆಟಗಾರನ ಮನವಿಗೆ ಕಿವಿಗೊಡದ ರೋಹಿತ್ ದೊಡ್ಡ ತಪ್ಪನ್ನು ಮಾಡಿದರು.
ಏನಿದು ಇಡೀ ಪ್ರಸಂಗ?
ವಾಸ್ತವವಾಗಿ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನ27ನೇ ಓವರ್ ಬೌಲ್ ಮಾಡುವ ಜವಬ್ದಾರಿ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಕ್ರೌಲಿ ಮೊದಲ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟಿಗೆ ತಾಗಿ ಆ ನಂತರ ಪ್ಯಾಡ್ಗೆ ಬಡಿದು, ಶಾರ್ಟ್ ಲೆಗ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಕೈಸೇರಿತು. ಕೂಡಲೇ ಸರ್ಫರಾಜ್ ಔಟ್ಗಾಗಿ ಮನವಿ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ನಂತರ ಸರ್ಫರಾಜ್ ರೋಹಿತ್ ಬಳಿ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಾಕಷ್ಟು ಮನವಿ ಮಾಡಿದರು. ಅಲ್ಲದೆ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂಬುದನ್ನು ರೋಹಿತ್ಗೆ ಅರ್ಥ ಮಾಡಿಸಲು ಪ್ರಯತ್ನಿಸಿದರು. ಆದರೆ ಕ್ಯಾಪ್ಟನ್ ರೋಹಿತ್, ಸರ್ಫರಾಜ್ ಮಾತನ್ನು ಕೇಳಲಿಲ್ಲ.
IND vs ENG: ಕಿಂಗ್ ಕೊಹ್ಲಿಯ ಅತಿ ದೊಡ್ಡ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್..!
ಆ ನಂತರ ಅಲ್ಟ್ರಾ ಎಡ್ಜ್ ತೋರಿಸಿದಾಗ ಕ್ರೌಲಿ ಬ್ಯಾಟ್‌ಗೆ ಚೆಂಡು ತಾಗಿದೆ ಎಂಬುದು ಸ್ಪಷ್ಟವಾಯಿತು. ಇದಾದ ನಂತರ ರೋಹಿತ್ ಶರ್ಮಾ ನಿರಾಸೆ ವ್ಯಕ್ತಪಡಿಸಿದ್ದು ಕಂಡುಬಂತು. ರೋಹಿತ್ ಇಲ್ಲಿ ಡಿಆರ್‌ಎಸ್ ತೆಗೆದುಕೊಂಡಿದ್ದರೆ ಅದು ಭಾರತದ ಪರವಾಗಿ ಹೋಗುತ್ತಿತ್ತು. ಇಲ್ಲಿಂದ ಭಾರತಕ್ಕೆ ಮೂರನೇ ಯಶಸ್ಸು ಸಿಗಬಹುದಿತ್ತು. ಆದರೆ ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳದೆ ದೊಡ್ಡ ತಪ್ಪು ಮಾಡಿದರು. ಇತ್ತ ರೋಹಿತ್ ಮನವೊಲಿಸಲು ಪ್ರಯತ್ನಿಸಿ ವಿಫಲರಾಗಿದ್ದ ಸರ್ಫರಾಜ್ ಖಾನ್ ಕೂಡ ನಿರಾಶೆಗೊಂಡರು.
“Sarfaraz was begging Rohit Sharma to take the review”
Crawley edged the ball but Egoistic captain Rohit Sharma didnt review#INDvsENG pic.twitter.com/ZRP3MwKBGy
— 𝕏 (@vk_stan_18) March 7, 2024
ಮಿಂಚಿದ ಸ್ಪಿನ್ನರ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಿಬ್ಬರು ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟ ಹಂಚಿಕೊಂಡರು. ಆ ನಂತರ ತಂಡದ ಮೊತ್ತ 100 ರನ್ಗಳಿರುವಾಗ ಎರಡನೇ ವಿಕೆಟ್ ಪತನವಾಯಿತು. 175 ರನ್ಗಳಿಗೆ 4ನೇ ವಿಕೆಟ್ ಪತನವಾದ ಬಳಿಕ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆಂಗ್ಲ ತಂಡ ಕೇವಲ 43 ರನ್ಗಳ ಅಂತರದಲ್ಲಿ ಉಳಿದ 6 ವಿಕೆಟ್ಳನ್ನು ಕಳೆದುಕೊಂಡಿತು. ಭಾರತದ ಪರ ಮಿಂಚಿದ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಪ್ರಮುಖ 5 ವಿಕೆಟ್ ಪಡೆದರೆ, 100 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆರ್ ಅಶ್ವಿನ್ 4 ವಿಕೆಟ್ ಉರುಳಿಸಿದರು. ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
