IND vs ENG: ಭಾರತ-ಇಂಗ್ಲೆಂಡ್ ಸರಣಿಗೆ ಇಂಜುರಿ ಸಮಸ್ಯೆ! ಬ್ರಾಡ್ ಬಳಿಕ ಆಂಡರ್ಸನ್​ಗೂ ಗಾಯ.. 2ನೇ ಟೆಸ್ಟ್​ಗೆ ಅನುಮಾನ

| Updated By: ಪೃಥ್ವಿಶಂಕರ

Updated on: Aug 11, 2021 | 5:53 PM

IND vs ENG: ಆಂಗ್ಲ ಮಾಧ್ಯಮದ ವರದಿಯ ಪ್ರಕಾರ, ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಮಂಗಳವಾರ ಲಾರ್ಡ್ಸ್ ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಇಂಜುರಿಗೆ ಒಳಗಾಗಿದ್ದಾರೆ.

IND vs ENG: ಭಾರತ-ಇಂಗ್ಲೆಂಡ್ ಸರಣಿಗೆ ಇಂಜುರಿ ಸಮಸ್ಯೆ! ಬ್ರಾಡ್ ಬಳಿಕ ಆಂಡರ್ಸನ್​ಗೂ ಗಾಯ.. 2ನೇ ಟೆಸ್ಟ್​ಗೆ ಅನುಮಾನ
ಜೇಮ್ಸ್ ಆಂಡರ್ಸನ್
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಪಂದ್ಯ ನಡೆದಿದ್ದು ಆಟಗಾರರ ಗಾಯದ ಸಮಸ್ಯೆ ಎರಡೂ ತಂಡಗಳನ್ನು ಬೆವರುವಂತೆ ಮಾಡಿದೆ. ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಭಾರತ ತಂಡದ ಮಯಾಂಕ್ ಅಗರ್ವಾಲ್ ಗಾಯದ ಸಮಸ್ಯೆಗೆ ತುತ್ತಾದರು. ಆದರೆ ಈಗ ಎರಡನೇ ಟೆಸ್ಟ್​ಗೂ ಮೊದಲು, ಶಾರ್ದೂಲ್ ಠಾಕೂರ್ ಇಂಜುರಿಯಿಂದ ಬಳಲುತ್ತಿದ್ದಾರೆ. ಆದರೆ ಈಗ ಭಾರತ ಮಾತ್ರವಲ್ಲ, ಆತಿಥೇಯ ಇಂಗ್ಲೆಂಡಿನಲ್ಲೂ (ಇಂಗ್ಲೆಂಡ್ ಕ್ರಿಕೆಟ್ ತಂಡ) ಗಾಯದ ಸಮಸ್ಯೆ ತಲೆದೂರಿದೆ. ವರದಿಗಳ ಪ್ರಕಾರ, ಇಂಗ್ಲೆಂಡಿನ ಅತ್ಯಂತ ಯಶಸ್ವಿ ಮತ್ತು ಅತ್ಯಂತ ಅನುಭವಿ ವೇಗದ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಗಾಯಗೊಂಡಿದ್ದಾರೆ ಮತ್ತು ಆಗಸ್ಟ್ 12 ರ ಗುರುವಾರದಿಂದ ಆರಂಭವಾಗುವ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನಗಳು ಮೂಡುತ್ತಿವೆ. ಈ ಕಾರಣದಿಂದಾಗಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವೇಗದ ಬೌಲರ್ ಸಕೀಬ್ ಮಹಮೂದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಆಂಗ್ಲ ಮಾಧ್ಯಮದ ವರದಿಯ ಪ್ರಕಾರ, ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಮಂಗಳವಾರ ಲಾರ್ಡ್ಸ್ ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಇಂಜುರಿಗೆ ಒಳಗಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ ಜಾರಿಬಿದ್ದ ಕಾರಣದಿಂದಾಗಿ ಅವರು ಇಂಜುರಿಗೆ ಒಳಗಾಗಿದ್ದಾರೆ. ಪ್ರಸ್ತುತ, ಇಂಗ್ಲೆಂಡ್ ತಂಡವು ಬ್ರಾಡ್‌ ಅವರ ಸ್ಕ್ಯಾನ್ ಫಲಿತಾಂಶಗಳಿಗಾಗಿ ಕಾಯುತ್ತಿದೆ, ಇದು ಅವರ ಗಾಯದ ಗಂಭೀರತೆಯ ಕಲ್ಪನೆಯನ್ನು ನೀಡುತ್ತದೆ. ಆದರೆ ಅವರು ಎರಡನೇ ಟೆಸ್ಟ್‌ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಬ್ರಾಡ್ ಮೊದಲ ಟೆಸ್ಟ್‌ನಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ ಮತ್ತು ಕೇವಲ 1 ವಿಕೆಟ್ ತೆಗೆದುಕೊಂಡರು.

ಆಂಡರ್ಸನ್ ಫಿಟ್ನೆಸ್ ಮೇಲೆ ಅನುಮಾನ
ಮತ್ತೊಂದೆಡೆ, ಟೆಸ್ಟ್ ಕ್ರಿಕೆಟ್​ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್​ಗೆ ಸಂಬಂಧಿಸಿದಂತೆ, ಆಂಡರ್ಸನ್ ಬುಧವಾರ, 11 ಆಗಸ್ಟ್ ಬೆಳಿಗ್ಗೆ ತಂಡದ ಅಭ್ಯಾಸದಲ್ಲಿ ಭಾಗವಹಿಸಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, 39 ವರ್ಷದ ಹಿರಿಯ ವೇಗಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ, ಈ ಕಾರಣದಿಂದಾಗಿ ಅವರು ವ್ಯಾಯಾಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇಂತಹ ಸನ್ನಿವೇಶದಲ್ಲಿ, ಅವರ ಆಟದ ಬಗ್ಗೆ ಅನುಮಾನಗಳು ಹಾಗೆಯೇ ಉಳಿದಿವೆ. ಕಳೆದ ಒಂದೂವರೆ ದಶಕಗಳಿಂದ ಇಂಗ್ಲೆಂಡ್​ನ ಬೆನ್ನೆಲುಬಾಗಿರುವ ನಂಬಿಕಸ್ಥ ಬೌಲರ್​ಗಳು ನಾಳಿನ ಟೆಸ್ಟ್ ತಂಡದಲ್ಲಿ ಇಲ್ಲದಿರುವುದು ಇಂಗ್ಲೆಂಡ್​ನ ಸಮಸ್ಯೆಗಳನ್ನು ಹೆಚ್ಚಿಸಬಹುದು. ಆಂಡರ್ಸನ್ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದರು.

ಸಾಕಿಬ್ ಮಹಮೂದ್‌ಗೆ ಅವಕಾಶ?
ಈ ಇಬ್ಬರು ಬೌಲರ್​ಗಳ ಅನುಪಸ್ಥಿತಿಯಲ್ಲಿ, 24 ವರ್ಷದ ಶಕೀಬ್ ಮಹಮೂದ್ ಅವಕಾಶ ಪಡೆಯಬಹುದು. ಸ್ಟುವರ್ಟ್ ಬ್ರಾಡ್‌ ಬದಲಿಯಾಗಿ ಸಕೀಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ, ಆದರೆ ಆಂಡರ್ಸನ್ ಅವರ ಗಾಯದ ಸಮಸ್ಯೆಯಿಂದಾಗಿ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಲ್ಯಾಂಕಶೈರ್ ವೇಗಿ ಇಂಗ್ಲೆಂಡ್ ಪರ 16 ಸೀಮಿತ ಓವರ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಏಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಒಂಬತ್ತು ಟಿ 20 ಅಂತರಾಷ್ಟ್ರೀಯ ಪಂದ್ಯಗಳು ಸೇರಿವೆ. ಅವರು ಒಟ್ಟು 21 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಸಕಿಬ್ 65 ವಿಕೆಟ್ ಪಡೆದಿದ್ದಾರೆ. ಶಕೀಬ್ ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು ಮತ್ತು ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಸರಣಿಯ ಶ್ರೇಷ್ಠರಾದರು.

ಇದನ್ನೂ ಓದಿ:IND vs ENG 2nd Test: ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

Published On - 5:46 pm, Wed, 11 August 21