ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಜೊತೆಗೆ ನಾಯಕ ವಿರಾಟ್ ಕೊಹ್ಲಿ ಈ ವಿಜಯದೊಂದಿಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅದೇನೆಂದರೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಅವಕಾಶ ನೀಡಲಾಗುವುದು ಎಂದು ಪ್ರತಿಯೊಬ್ಬ ಕ್ರಿಕೆಟ್ ತಜ್ಞರು ಊಹಿಸಿದ್ದರು. ಆದರೆ ಇದು ಸಂಭವಿಸದಿದ್ದಾಗ, ನಾಯಕ ಮತ್ತು ಕೋಚ್ ರವಿಶಾಸ್ತ್ರಿ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ಈಗ ಅದು ಪಂದ್ಯದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರದ ಕಾರಣ, ಅಶ್ವಿನ್ ಮುಂದಿನ ಟೆಸ್ಟ್‌ನಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಕೂಡ ಇಲ್ಲದಿರುವ ಸಾಧ್ಯತೆ ಹೆಚ್ಚಾಗಿದೆ. ಮಾಜಿ ಕ್ರಿಕೆಟಿಗ ಮತ್ತು ವ್ಯಾಖ್ಯಾನಕಾರ ಆಕಾಶ್ ಚೋಪ್ರಾ ಕೂಡ ಇದನ್ನೇ ಹೇಳಿಕೊಂಡಿದ್ದಾರೆ.
ಭಾರತ ತಂಡವು ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ 4 ವೇಗದ ಬೌಲರ್‌ಗಳು ಮತ್ತು ಒಬ್ಬ ಸ್ಪಿನ್ನರ್ ಜೊತೆಗೆ ಕಣಕ್ಕಿಳಿದಿದೆ. ಇಲ್ಲಿಯವರೆಗೆ ಈ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸರಣಿಯಲ್ಲಿ ಇದೇ ತಂಡ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಲಾರ್ಡ್ಸ್‌ನಲ್ಲಿನ ನಿಧಾನಗತಿಯ ಪಿಚ್ ಮತ್ತು ಲಂಡನ್‌ನಲ್ಲಿನ ಶುಷ್ಕ ವಾತಾವರಣವನ್ನು ಪರಿಗಣಿಸಿ, ಅಶ್ವಿನ್‌ಗೆ ಅವಕಾಶ ಸಿಗಬಹುದೆಂದು ಊಹಿಸಲಾಗಿತ್ತು. ಆದರೆ ಅದು ಆಗಲಿಲ್ಲ ಮತ್ತು 4 ಪೇಸರ್‌ಗಳು ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಆಡಿದಗಲೂ ತಂಡ ಗೆದ್ದಿತು.
ಲಾರ್ಡ್ಸ್‌ನಲ್ಲಿ ಅವಕಾಶವಿತ್ತು, ಲೀಡ್ಸ್‌ನಲ್ಲಿ ಸಾಧ್ಯವಿಲ್ಲ
ಇಂತಹ ಪರಿಸ್ಥಿತಿಯಲ್ಲಿ, ಆಗಸ್ಟ್ 25 ರಿಂದ ಆರಂಭವಾಗುವ ಲೀಡ್ಸ್ ಟೆಸ್ಟ್ ನಲ್ಲಿ ಅಶ್ವಿನ್ ಗೆ ಅವಕಾಶ ಸಿಗುವುದೇ ಎಂಬುದು ಈಗಿರುವ ಪ್ರಶ್ನೆ? ಇದಕ್ಕೆ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಅಶ್ವಿನ್‌ಗೆ ಅವಕಾಶ ನೀಡುವ ಸಾಧ್ಯತೆಯ ಕುರಿತು ಮಾತನಾಡಿದ ಆಕಾಶ್, “ಹೆಡಿಂಗ್ಲಿಯಲ್ಲಿ (ಲೀಡ್ಸ್)ಅಶ್ವಿನ್‌ಗೆ ಅವಕಾಶ ಸಿಗುವುದು ಅನುಮಾನ ಎಂದಿದ್ದಾರೆ. ಪಿಚ್ ಒಣ ಮತ್ತು ನಿಧಾನವಾಗಿದ್ದರಿಂದ ಲಾರ್ಡ್ಸ್‌ನಲ್ಲಿ ಅಶ್ವಿನ್ರನ್ನು ಆಡಿಸುವ ನಿರೀಕ್ಷೆ ಇತ್ತು. ಆದರೆ ಲೀಡ್ಸ್‌ನಲ್ಲಿ ಸ್ಪಿನ್ನರ್‌ಗಳ ಅಗತ್ಯವಿಲ್ಲ ಎಂದಿದ್ದಾರೆ.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಲಾಗಿದೆ, ಈಗ ಓವಲ್ ಟೆಸ್ಟ್‌ನಲ್ಲಿ ಅವಕಾಶ
ವಿಶ್ವ ನಂಬರ್ ಒನ್ ಟೆಸ್ಟ್ ಸ್ಪಿನ್ನರ್ ಅಶ್ವಿನ್ ಜೂನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರ ಭಾಗವಾಗಿದ್ದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡೂ ವಿಕೆಟ್ಗಳು ಅವರ ಖಾತೆಯಲ್ಲಿ ಬಂದವು. ಇದರ ಹೊರತಾಗಿ, ಟೆಸ್ಟ್ ಸರಣಿ ಆರಂಭವಾಗುವ ಮೊದಲು ಇಂಗ್ಲೆಂಡ್‌ನಲ್ಲಿ ಸರ್ರೆ ಪರ ಕೌಂಟಿ ಪಂದ್ಯವನ್ನು ಆಡಿದ ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ಇದರ ಹೊರತಾಗಿಯೂ, ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲಿಲ್ಲ. ಆದಾಗ್ಯೂ, ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಅವರು ತಂಡಕ್ಕೆ ಬರುವ ನಿರೀಕ್ಷೆಯಿದೆ. ಏಕೆಂದರೆ ಓವಲ್‌ನಲ್ಲಿರುವ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ ಮತ್ತು ಈ ಮೈದಾನದಲ್ಲಿ ಅಶ್ವಿನ್ ಸರ್ರೆ ಪರ ಆರು ವಿಕೆಟ್ ಪಡೆದರು.