AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?

VVS Laxman: ಪುಟ್ಟ ಬಾಲಕನೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಲಕ್ಷಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವುದು ಕಾಣಬಹುದು. ಅಂದು ಲಕ್ಷ್ಮಣ್ ಮುಂದೆ ಆಟೋಗ್ರಾಫ್​ಗೆ ಕಾದಿದ್ದ ಹುಡುಗ ಇಂದು ಅದೇ ಕ್ರಿಕೆಟಿಗನಿಂದ ಭಲೇ ಬೇಷ್ ಎನಿಸಿಕೊಂಡಿರುವುದು ವಿಶೇಷ.

TV9 Web
| Edited By: |

Updated on: Aug 19, 2021 | 5:40 PM

Share
 ಲಾರ್ಡ್ಸ್​ ಮೈದಾನದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಐತಿಹಾಸಿಕ ಟೆಸ್ಟ್ ಗೆದ್ದಿರುವ ಟೀಮ್ ಇಂಡಿಯಾ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಬೌಲರುಗಳ ತೋರಿದ ಸಾಂಘಿಕ ಪ್ರದರ್ಶನಕ್ಕೆ ಮಾಜಿ ಕ್ರಿಕೆಟರುಗಳು ಕೂಡ ಭೇಷ್ ಎನ್ನುತ್ತಿದ್ದಾರೆ. ಇತ್ತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಕೆಟಿಗನ ಬಾಲ್ಯದ ಫೋಟೋವೊಂದನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 / 7
ಈ ಫೋಟೋದಲ್ಲಿ ಪುಟ್ಟ ಬಾಲಕನೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಲಕ್ಷಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವುದು ಕಾಣಬಹುದು. ಅಂದು ಲಕ್ಷ್ಮಣ್ ಮುಂದೆ ಆಟೋಗ್ರಾಫ್​ಗೆ ಕಾದಿದ್ದ ಹುಡುಗ ಇಂದು ಅದೇ ಕ್ರಿಕೆಟಿಗನಿಂದ ಭಲೇ ಬೇಷ್ ಎನಿಸಿಕೊಂಡಿರುವುದು ವಿಶೇಷ.

2 / 7
ನಾನು ಮೊದಲ ಬಾರಿಗೆ ಹೈದರಾಬಾದ್‌ನ ಮಹಾನ್ ಅಬ್ದುಲ್ ಅಜೀಮ್ ಅವರ ನಿವಾಸದಲ್ಲಿ ಈ ಹುಡುಗನನ್ನು ಮೊದಲ ಬಾರಿ ಭೇಟಿಯಾಗಿದ್ದೆ. ಇಂದು ಅದೇ ಹುಡುಗ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವುದು ನೋಡಿ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕಠಿಣ ಪರಿಶ್ರಮ ಮತ್ತು ಗುರಿಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಲಕ್ಷಣ್ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.

3 / 7
ಅಂದಹಾಗೆ ದಶಕಗಳ ಹಿಂದೆ ಹೀಗೆ ಟೀಮ್ ಇಂಡಿಯಾದ ಸ್ಟಾರ್ ಟೆಸ್ಟ್ ಬ್ಯಾಟ್ಸ್​ಮನ್ ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆದ ಹುಡುಗ ಮತ್ಯಾರೂ ಅಲ್ಲ. ಲಾರ್ಡ್ಸ್​​ ಟೆಸ್ಟ್​ ಹೀರೋ ಮೊಹಮ್ಮದ್ ಸಿರಾಜ್. ಹೌದು, ಇದೇ ಮೊದಲ ಬಾರಿಗೆ ಲಾರ್ಡ್ಸ್​ ಮೈದಾನದಲ್ಲಿ ಕಣಕ್ಕಿಳಿದಿದ್ದ ಸಿರಾಜ್ ಅನುಭವಿ ವೇಗಿಗಳನ್ನೂ ನಾಚಿಸುವಂತೆ 8 ವಿಕೆಟ್ ಉರುಳಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

4 / 7
ಈ ಗೆಲುವಿನ ಬೆನ್ನಲ್ಲೇ ತನ್ನ ಮುಂದೆ ಆಟೋಗ್ರಾಫ್​ಗಾಗಿ ಕಾದಿದ್ದ ಸಿರಾಜ್ ಅವರ ಬಾಲ್ಯದ ಫೋಟೋವನ್ನು ಹಂಚಿಕೊಂಡು ವಿವಿಎಸ್ ಲಕ್ಷ್ಮಣ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

5 / 7
ಅಲ್ಲದೆ ಸಿರಾಜ್ ಹಾಗೂ ಲಕ್ಷ್ಮಣ್ ಹೈದರಾಬಾದ್ ಮೂಲದ ಕ್ರಿಕೆಟಿಗರು ಎಂಬುದು ಇಲ್ಲಿ ಮತ್ತೊಂದು ವಿಶೇಷ. ಹೀಗಾಗಿ ತನ್ನೂರಿನ ಕ್ರಿಕೆಟಿಗನ ಸಾಧನೆಯನ್ನು ಲಕ್ಷ್ಮಣ್ ಕೊಂಡಾಡಿದ್ದಾರೆ.

6 / 7
ಇನ್ನು ಲಾರ್ಡ್ಸ್ ಮೈದಾನದಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಸಿರಾಜ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲೂ ಮೇಲೇರಿದ್ದಾರೆ. ಕಳೆದ ಬಾರಿ 56ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಲಾರ್ಡ್ಸ್​ ಟೆಸ್ಟ್​ನಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಅಂಕ ಪಟ್ಟಿಯಲ್ಲಿ ಬರೋಬ್ಬರಿ 18 ಸ್ಥಾನ ಜಿಗಿತ ಕಂಡಿದ್ದಾರೆ. ಅದರಂತೆ ಕೇವಲ 7 ಟೆಸ್ಟ್​ಗಳಲ್ಲಿ 27 ವಿಕೆಟ್ ಉರುಳಿಸಿ​ 38ನೇ ಸ್ಥಾನ ಅಲಂಕರಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದಾರೆ.

7 / 7