ಸದ್ಯ ಸುದೀರ್ಘ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿ ಭಾರತಕ್ಕೆ ಮರಳಿರುವ ಟೀಂ ಇಂಡಿಯಾಕ್ಕೆ 1 ವಾರಗಳ ಕಾಲ ವಿಶ್ರಾಂತಿ ಸಿಗಲಿದೆ. ಆ ಬಳಿಕ ತಂಡ ಅಫ್ಘಾನಿಸ್ತಾನ (India vs Afghanistan) ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ತವರಿನಲ್ಲಿ ಅಫ್ಘಾನ್ ಪಡೆಯನ್ನು ಎದುರಿಸಲು ಯಾವ ತಂಡವನ್ನು ಬಿಸಿಸಿಐ (BCCI) ಕಣಕ್ಕಿಳಿಸಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಇದೇ ಕೊನೆಯ ಟಿ20 ಸರಣಿಯಾಗಿದೆ. ಈ ಸರಣಿಯ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್ (India vs England) ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಎರಡೂ ಸರಣಿಗಳಿಗಾಗಿ ಇನ್ನು ತಂಡವನ್ನು ಪ್ರಕಟಿಸಬೇಕಿದೆ. ಏತನ್ಮಧ್ಯೆ, ಶನಿವಾರ ಮಧ್ಯಾಹ್ನ ಬಿಸಿಸಿಐ, ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಭಾರತ ಎ ತಂಡವನ್ನು ಪ್ರಕಟಿಸಿದೆ.
ಬಿಸಿಸಿಐ ಆಯ್ಕೆ ಮಾಡಿರುವ ಭಾರತ ಎ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ರಜತ್ ಪಾಟಿದಾರ್ಗೆ ಅವಕಾಶ ನೀಡಲಾಗಿದೆ. ಈ ತಂಡದ ನಾಯಕತ್ವವನ್ನು ಅಭಿಮನ್ಯು ಈಶ್ವರನ್ ಅವರಿಗೆ ನೀಡಲಾಗಿದ್ದು, ಇವರಲ್ಲದೆ ಟೀಂ ಇಂಡಿಯಾ ಪರ ಆಡಿರುವ ನವದೀಪ್ ಸೈನಿ ಕೂಡ ಈ ತಂಡದ ಭಾಗವಾಗಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಪ್ರಸ್ತುತ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ರಿಂಕು ಸಿಂಗ್ಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಕೆಎಸ್ ಭರತ್ ಈ ತಂಡದ ಭಾಗವಾಗಿದ್ದರೆ, ಧ್ರುವ್ ಜುರೆಲ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
🚨 News 🚨
India ‘A’ squad for 2-day warm-up fixture & first multi-day game against England Lions announced
Details ⬇️https://t.co/GOjfP0TJve
— BCCI (@BCCI) January 6, 2024
ಟಿ20 ವಿಶ್ವಕಪ್ಗೆ ಹಾರ್ದಿಕ್ ನಾಯಕ! ಖಚಿತ ಪಡಿಸಿದ ಸ್ಟಾರ್ ಸ್ಪೋರ್ಟ್ಸ್ ಪೋಸ್ಟರ್
ಈ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ನೋಡುವುದಾದರೆ ಎರಡು ದಿನ ಮತ್ತು ನಾಲ್ಕು ದಿನಗಳ ರೆಡ್ ಬಾಲ್ ಪಂದ್ಯ ನಡೆಯಲಿದೆ. ಈ ಎರಡೂ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ. ಮೊದಲ ಪಂದ್ಯ ಜನವರಿ 12 ಮತ್ತು 13 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್‌ನಲ್ಲಿ ನಡೆಯಲಿದೆ. ನಂತರ ಜನವರಿ 17 ರಿಂದ ಜನವರಿ 20 ರವರೆಗೆ ಎರಡನೇ ಅಭ್ಯಾಸ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದ ಮುಖ್ಯ ಮೈದಾನದಲ್ಲಿ ನಡೆಯಲಿದೆ. ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಪ್ರಾರಂಭವಾಗಲಿದೆ.
The two-day game will be played on Jan 12 and 13 and the four day game from Jan 17-20 in Ahmedabad.
India A squad vs England Lions 👇 pic.twitter.com/QkuwESl72M
— Cricbuzz (@cricbuzz) January 6, 2024
ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಪ್ರದೋಶ್ ರಂಜನ್ ಪಾಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಮಾನವ್ ಸುತಾರ್, ಪುಲ್ಕಿತ್ ನಾರಂಗ್, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆಕಾಶದೀಪ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sat, 6 January 24