ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ (India vs England) ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ದಾಳಿ ನಡೆಸಿ ಆಂಗ್ಲ ಪಾಳಯದ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುಮ್ರಾ ಈ ಇನ್ನಿಂಗ್ಸ್‌ನಲ್ಲಿ ಜೋ ರೂಟ್ (5), ಒಲಿ ಪೋಪ್ (23), ಜಾನಿ ಬೈರ್‌ಸ್ಟೋ (25), ಟಾಮ್ ಹಾರ್ಟ್ಲಿ (121), ಜೇಮ್ಸ್ ಆಂಡರ್ಸನ್ (6) ಮತ್ತು ನಾಯಕ ಬೆನ್ ಸ್ಟೋಕ್ಸ್ (47) ರಂತಹ ಸ್ಟಾರ್ ಬ್ಯಾಟರ್ಗಳ ವಿಕೆಟ್ ಪಡೆದು ಮಿಂಚಿದರು ಅದರಲ್ಲೂ 54 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಟೀಂ ಇಂಡಿಯಾಗೆ ಅಪಾಯದ ಮುನ್ಸೂಚನೆ ನೀಡಿ ಅರ್ಧಶತಕದತ್ತ ಸಾಗುತ್ತಿದ್ದ ಸ್ಟೋಕ್ಸ್ (Ben Stokes) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಬುಮ್ರಾ ಅವರ ಇನ್ಸ್ವಿಂಗರನ್ನು ಅರ್ಥ ಮಾಡಿಕೊಳ್ಳದ ಸ್ಟೋಕ್ಸ್ ಮತ್ತೊಮ್ಮೆ ಬೌಲ್ಡ್ ಆಗುವ ಮೂಲಕ ಹತಾಶೆಯಲ್ಲಿ ಪೆವಿಲಿಯನ್ತ್ತ ಹೆಜ್ಜೆಯಾಕಿದರು.
50ನೇ ಓವರ್‌ನ ಎರಡನೇ ಎಸೆತದಲ್ಲಿ ಬುಮ್ರಾ, ಸ್ಟೋಕ್ಸ್‌ರನ್ನು ಬಲೆಗೆ ಬೀಳಿಸಿದರು. ಬುಮ್ರಾ ಬೌಲ್ ಮಾಡಿದ ಬ್ಯಾಕ್ ಆಫ್ ಲೆಂಗ್ತ್ ಬಾಲ್ ಅನ್ನು ಡಿಫೆಂಡ್ ಮಾಡುವಲ್ಲಿ ಎಡವಿದ ಸ್ಟೋಕ್ಸ್ ಕ್ಲೀನ್ ಬೌಲ್ಡ್ ಆದರು. ಅರ್ಧಶತಕದಂಚಿನಲ್ಲಿ ಎಡವಿದ ಸ್ಟೋಕ್ಸ್ ಔಟಾದ ಬಳಿಕ ಹತಾಶೆಯಲ್ಲಿ ತಮ್ಮ ಬ್ಯಾಟನ್ನು ಕೈಬಿಟ್ಟರು. ಅಲ್ಲದೆ ಪಿಚ್ನಲ್ಲಿ ದೋಷವಿದೆ ಎಂಬರ್ಥದಲ್ಲಿ ಸನ್ನೆ ಮಾಡಿ ಪೆವಿಲಿಯನ್ತ್ತ ಹೆಜ್ಜೆಯಾಕಿದರು. ಔಟಾದ ನಂತರ ಸ್ಟೋಕ್ಸ್ ನೀಡಿರುವ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಲವರು ಸ್ಟೋಕ್ಸ್‌ರ ಕಾಲೆಳೆಯಲು ಆರಂಭಿಸಿದ್ದಾರೆ.
Stokes be like : Come on mate 🤷🏻♂️🤷🏻♂️#Bumrah 🔥🔥🔥🔥#INDvENG pic.twitter.com/NrrxWNRwS5
— ಚರಣ್ (@Charan_neogi) February 3, 2024
ಸ್ಟೋಕ್ಸ್‌ರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಬುಮ್ರಾ ತಮ್ಮ ಟೆಸ್ಟ್ ವೃತ್ತಿಬದುಕಿನಲ್ಲಿ 150 ವಿಕೆಟ್‌ಗಳನ್ನು ಪೂರೈಸಿದರು. ಅಲ್ಲದೆ ವೇಗವಾಗಿ 150 ವಿಕೆಟ್‌ಗಳನ್ನು (ಬಾಲ್‌ಗಳ ವಿಷಯದಲ್ಲಿ) ಪಡೆದ ಮೊದಲ ಭಾರತೀಯ ಬೌಲರ್ ಕೂಡ ಎನಿಸಿಕೊಂಡಿದ್ದಾರೆ. ಬುಮ್ರಾ, ಸ್ಟೋಕ್ಸ್ ಅವರನ್ನು ಬೌಲ್ಡ್ ಮಾಡಿದ್ದು ಮಾತ್ರವಲ್ಲದೆ, ಕಳೆದ ಪಂದ್ಯದ ಹೀರೋ ಓಲಿ ಪೋಪ್ ಅವರನ್ನು ಸಹ ತಮ್ಮ ಮಾರಕ ಯಾರ್ಕರ್‌ನಿಂದ ಪೆವಿಲಿಯನ್‌ಗೆ ಕಳುಹಿಸಿದರು. ಇದಲ್ಲದೆ, ಅವರು ಜೋ ರೂಟ್, ಜಾನಿ ಬೈರ್ಸ್ಟೋವ್, ಟಾಮ್ ಹಾರ್ಟ್ಲಿ ಮತ್ತು ಜೇಮ್ಸ್ ಆಂಡರ್ಸನ್ ಅವರ ವಿಕೆಟ್ಗಳನ್ನು ಪಡೆದರು.
IND vs ENG: ಕಪಿಲ್ ದೇವ್ ಸೃಷ್ಟಿಸಿದ್ದ 41 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಬುಮ್ರಾ..!
ಬುಮ್ರಾ ಹೊರತುಪಡಿಸಿ ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು. ಭಾರತೀಯ ಬೌಲರ್ಗಳ ಅಮೋಘ ಪ್ರದರ್ಶನದಿಂದಾಗಿ ಆಂಗ್ಲರ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 253 ರನ್ಗಳಿಗೆ ಆಲೌಟ್ ಆಗಿದ್ದು, ಭಾರತ 165 ರನ್ಗಳ ಮುನ್ನಡೆ ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ