
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಪಡೆ ಮೋಸದಿಂದ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದ್ರಾ? ಭಾರತದ ಲೆಜೆಂಡ್ ಸುನಿಲ್ ಗವಾಸ್ಕರ್ ಎತ್ತಿರುವ ಪ್ರಶ್ನೆಗಳಿಂದ ಇಂತಹದೊಂದು ಅನುಮಾನ ಹುಟ್ಟಿಕೊಂಡಿದೆ. ಏಕೆಂದರೆ ಇಂಗ್ಲೆಂಡ್ ತಂಡವು ರಿಷಭ್ ಪಂತ್ ವಿಕೆಟ್ ಪಡೆಯಲು ಲೆಗ್ ಸೈಡ್‌ನಲ್ಲಿ ಹೆಚ್ಚುವರಿ ಫೀಲ್ಡರ್‌ಗಳನ್ನು ಬಳಸಿಕೊಂಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಲೆಗ್ ಸೈಡ್‌ನಲ್ಲಿ ಗರಿಷ್ಠ ಐವರು ಫೀಲ್ಡರ್‌ಗಳನ್ನು ಮಾತ್ರ ನಿಲ್ಲಿಸಲು ಅನುಮತಿಸಲಾಗಿದೆ. ಆದರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ರಿಷಭ್ ಪಂತ್ ವಿಕೆಟ್ಗಾಗಿ ಡೀಪ್ ಫೈನ್ ಲೆಗ್‌ನಿಂದ ಲಾಂಗ್ ಆನ್‌ವರೆಗೆ ವಿವಿಧ ಸ್ಥಾನಗಳಲ್ಲಿ ಸುಮಾರು 7-8 ಫೀಲ್ಡರ್‌ಗಳನ್ನು ನಿಯೋಜಿಸಿದ್ದರು. ಇದು ಕ್ರಿಕೆಟ್ ನಿಯಮದ ಉಲ್ಲಂಘನೆ ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ.
ರಿಷಭ್ ಪಂತ್ ಅವರ ವಿಕೆಟ್ ಪಡೆಯಲು ಬೆನ್ ಸ್ಟೋಕ್ಸ್ ಡೀಪ್ ಫೈನ್ ಲೆಗ್‌ನಿಂದ ಲಾಂಗ್ ಆನ್‌ವರೆಗೆ ವಿವಿಧ ಭಾಗಗಳಲ್ಲಿ ಸುಮಾರು 7-8 ಫೀಲ್ಡರ್‌ಗಳನ್ನು ನಿಯೋಜಿಸಿದ್ದರು. ಅಲ್ಲದೆ ವೇಗದ ಬೌಲರ್ಗಳಿಗೆ ಬೌನ್ಸರ್ ಹಾಗೂ ಶಾರ್ಟ್ ಪಿಚ್ ಎಸೆತಗಳನ್ನು ಎಸೆಯುವಂತೆ ಸೂಚಿಸಿದ್ದರು. ಈ ಮೂಲಕ ಪಂತ್ ವಿಕೆಟ್ ಪಡೆಯಲು ಇಂಗ್ಲೆಂಡ್ ಪ್ಲ್ಯಾನ್ ರೂಪಿಸಿದ್ದರು.
ಆದರೆ ಹೀಗೆ ಒಂದೇ ಬದಿಯಲ್ಲಿ 7 ರಿಂದ 8 ಫೀಲ್ಡರ್‌ಗಳನ್ನು ಬಳಸಿಕೊಂಡಿರುವುದು ಅಚ್ಚರಿ. ಅದರಲ್ಲೂ ಲೆಗ್ ಸೈಡ್‌ನಲ್ಲಿ ಕೇವಲ 5 ಐವರು ಫೀಲ್ಡರ್‌ಗಳನ್ನು ಮಾತ್ರ ನಿಲ್ಲಿಸಲು ಅವಕಾಶವಿದ್ದರೂ, ಇಂಗ್ಲೆಂಡ್ಗೆ ಅದೇಗೆ ಹೆಚ್ಚುವರಿ ಫೀಲ್ಡರ್‌ಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈ ಬಗ್ಗೆ ಕಾಮೆಂಟ್ರಿ ಬಾಕ್ಸ್ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಇದನ್ನು ಕ್ರಿಕೆಟ್ ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಇದು ಕ್ರಿಕೆಟ್‌ಗೆ ವಿರುದ್ಧವಾಗಿದೆ. ಒಂದು ಸಮಯದಲ್ಲೇ ಲೆಗ್ ಸೈಡ್‌ನಲ್ಲಿ 6 ಕ್ಕಿಂತ ಹೆಚ್ಚು ಫೀಲ್ಡರ್‌ಗಳು ಇರಬಾರದು. ನಮ್ಮ ಕಾಲದಲ್ಲಿ ಒಂದೇ ಓವರ್ನಲ್ಲಿ ಎಷ್ಟು ಬೌನ್ಸರ್ಗಳನ್ನು ಎಸೆಯಲು ಅವಕಾಶವಿತ್ತು. ವೆಸ್ಟ್ ಇಂಡೀಸ್ ಬೌಲರ್ಗಳು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದರು. ಈ ಮೂಲಕ ಅನೇಕ ಬ್ಯಾಟ್ಸ್ಮನ್ಗಳ ಗಾಯಗೊಳಿಸಿದ್ದರು.
ಆ ಬಳಿಕ ಈ ಬಗ್ಗೆ ಇಂಗ್ಲೆಂಡ್ ಚಕಾರವೆತ್ತಿ ಈ ಬೌನ್ಸರ್ಗಳ ಸಂಖ್ಯೆಯನ್ನು ಓವರ್ಗೆ 2 ಕ್ಕೆ ಇಳಿಸಿದ್ದರು. ಇದೀಗ ಅದೇ ಇಂಗ್ಲೆಂಡ್ ಗಾಯಗೊಂಡಿದ್ದ ರಿಷಭ್ ಪಂತ್ ಅವರನ್ನು ಶಾರ್ಟ್ ಎಸೆತಗಳ ಮೂಲಕ ಗುರಿಯಾಗಿಸಿದ್ದಾರೆ. ಲೆಗ್ ಸೈಡ್‌ನಲ್ಲಿ ಹೆಚ್ಚು ಫೀಲ್ಡರ್‌ಗಳನ್ನು ನಿಲ್ಲಿಸಿ ಶಾರ್ಟ್ ಬಾಲ್ನಿಂದ ದಾಳಿ ಸಂಘಟಿಸಿರುವುದು ನನ್ನ ಪ್ರಕಾರ ತಪ್ಪು ಎಂದಿದ್ದಾರೆ.
ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್
ಅಷ್ಟೇ ಅಲ್ಲದೆ ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಗಂಗೂಲಿ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಯಮಗಳು ಮತ್ತು ಆಟದ ಪರಿಸ್ಥಿತಿಗಳಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿಗಳಿಗೆ ಸಲಹೆಗಳನ್ನು ನೀಡುತ್ತದೆ. ಹೀಗಾಗಿ ಫೀಲ್ಡರ್ಗಳ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲು ಸೌರವ್ ಗಂಗೂಲಿ ನೇತೃತ್ವ ಸಮಿತಿ ಮುಂದಾಗಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.