IND vs ENG: 278 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ ಭಾರತ.. 95 ರನ್​ಗಳ ಮುನ್ನಡೆ; ಮಿಂಚಿದ ರಾಹುಲ್- ಜಡೇಜಾ

| Updated By: ಪೃಥ್ವಿಶಂಕರ

Updated on: Aug 06, 2021 | 8:45 PM

IND vs ENG: ಕೆಎಲ್ ರಾಹುಲ್ (84) ಮತ್ತು ರವೀಂದ್ರ ಜಡೇಜಾ (56) ಅವರ ಅರ್ಧ ಶತಕಗಳ ನೆರವಿನಿಂದಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 95 ರನ್​ಗಳ ಮುನ್ನಡೆ ಸಾಧಿಸಿತು.

IND vs ENG: 278 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ ಭಾರತ.. 95 ರನ್​ಗಳ ಮುನ್ನಡೆ; ಮಿಂಚಿದ ರಾಹುಲ್- ಜಡೇಜಾ
ರಾಹುಲ್, ಜಡೇಜಾ
Follow us on

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 278 ರನ್ ಗಳಿಸಿದೆ. ಕೆಎಲ್ ರಾಹುಲ್ (84) ಮತ್ತು ರವೀಂದ್ರ ಜಡೇಜಾ (56) ಅವರ ಅರ್ಧ ಶತಕಗಳ ನೆರವಿನಿಂದಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 95 ರನ್​ಗಳ ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ, ಭಾರತದ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಂಗ್ಲಿಷ್ ಬೌಲರ್‌ಗಳನ್ನು ತುಂಬಾ ತೊಂದರೆಗೊಳಿಸಿದರು ಮತ್ತು ಕೊನೆಯ ಎರಡು ವಿಕೆಟ್‌ಗಳಿಗೆ 46 ರನ್ ಸೇರಿಸಿದರು. ಇದರಲ್ಲಿ ಜಸ್ಪ್ರೀತ್ ಬುಮ್ರಾ 28, ಮೊಹಮ್ಮದ್ ಶಮಿ 13 ಮತ್ತು ಮೊಹಮ್ಮದ್ ಸಿರಾಜ್ ಔಟಾಗದೆ 7 ರನ್ ಗಳಿಸಿದರು. ಇಂಗ್ಲೆಂಡ್ ಪರ ಓಲಿ ರಾಬಿನ್ಸನ್ ಐದು ವಿಕೆಟ್ ಪಡೆದರೆ, ಜೇಮ್ಸ್ ಆಂಡರ್ಸನ್ ನಾಲ್ಕು ವಿಕೆಟ್ ಪಡೆದರು. ಈ ಸಮಯದಲ್ಲಿ, ಆಂಡರ್ಸನ್ 620 ವಿಕೆಟ್ಗಳನ್ನು ಪೂರೈಸಿದರು ಮತ್ತು ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 183 ರನ್ ಗಳಿಸಿತು.

ನಾಲ್ಕು ವಿಕೆಟ್‌ಗಳಿಗೆ 125 ರನ್​ಗಳಿಸಿದ ಭಾರತ 3ನೇ ದಿನದಾಟ ಆರಂಭಿಸಿತು. ಕೇವಲ 11 ಎಸೆತಗಳನ್ನು ಆಡಲಾಗಿದ್ದು ಮಳೆಯಿಂದಾಗಿ ಆಟವನ್ನು ನಿಲ್ಲಿಸಬೇಕಾಯಿತು. ಏತನ್ಮಧ್ಯೆ, ಜೇಮ್ಸ್ ಆಂಡರ್ಸನ್ (33 ಕ್ಕೆ 2)ಗೆ ಪಂತ್ ಹೊಡೆದ ಸುಂದರ ಕವರ್ ಡ್ರೈವ್ ಹೈಲೈಟ್ ಆಗಿತ್ತು. ಮಳೆಯಿಂದಾಗಿ, ಮೊದಲ 95 ನಿಮಿಷಗಳಲ್ಲಿ ಕೇವಲ 11 ಎಸೆತಗಳನ್ನು ಮಾತ್ರ ಎಸೆಯಲು ಸಾಧ್ಯವಾಯಿತು. ಆಟವು ಪುನರಾರಂಭವಾದಾಗ, ಪಂತ್ ಓಲ್ಲಿ ರಾಬಿನ್ಸನ್ (55 ಕ್ಕೆ 2) ಗೆ ಸಿಕ್ಸರ್ ಬಾರಿಸಿದರು. ಆದರೆ ನಂತರದ ಎಸೆತದಲ್ಲೇ ಪಂತ್ ಔಟಾದರು.

ಜಡೇಜಾ 2000 ಟೆಸ್ಟ್ ರನ್ ಮತ್ತು 200 ವಿಕೆಟ್
ರಾಹುಲ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು ಆದರೆ ಜಡೇಜಾ ತಮ್ಮ ಸಹಜ ಶೈಲಿಯಲ್ಲಿ ಆಡಿದರು. ಈ ಮಧ್ಯೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 2000 ರನ್ ಪೂರೈಸಿದರು ಮತ್ತು ಈ ಮೂಲಕ 200 ವಿಕೆಟ್ ಮತ್ತು 2000 ರನ್​ಗಳಿಸಿದ 5ನೇ ಭಾರತೀಯ ಆಟಗಾರ ಎನಿಸಿಕೊಮಡರು. ಜಡೇಜಾ ಅವರ ಹೆಸರಿನಲ್ಲಿ 221 ವಿಕೆಟ್ಗಳಿವೆ. ಈ ಸಾಧನೆ ಮಾಡಿದ ಐದನೇ ಭಾರತೀಯ ಆಲ್ ರೌಂಡರ್ ಅವರು.

Published On - 8:40 pm, Fri, 6 August 21