IND vs ENG: ಇದುವೇ ಅಸಲಿ ‘ಪಿಚ್​’ರ್: ಬೌಲರ್ or ಬ್ಯಾಟರ್, ಯಾರಿಗೆ ಸಹಕಾರಿ?

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಇಂಗ್ಲೆಂಡ್​ನಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 5 ಪಂದ್ಯಗಳನ್ನಾಡಲಿದೆ. ಹೆಡಿಂಗ್ಲೆಯಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿರುವ ಪಿಚ್​ ಅನಾವರಣಗೊಂಡಿದೆ.

IND vs ENG: ಇದುವೇ ಅಸಲಿ ಪಿಚ್​ರ್: ಬೌಲರ್ or ಬ್ಯಾಟರ್, ಯಾರಿಗೆ ಸಹಕಾರಿ?
Ind Vs Eng

Updated on: Jun 19, 2025 | 10:01 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್​ ಸರಣಿ ವೇದಿಕೆ ಸಿದ್ಧವಾಗಿದೆ. ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕಾಗಿ ಪಿಚ್ ರೆಡಿಯಾಗಿದೆ. ಈಗಾಗಲೇ ಹೆಡಿಂಗ್ಲೆ ಪಿಚ್​ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದರೊಂದಿಗೆ ಪಿಚ್ ಯಾರಿಗೆ ಸಹಕಾರಿ ಎಂಬ ಚರ್ಚೆಗಳು ಸಹ ಶುರುವಾಗಿದೆ.

ಹೆಡಿಂಗ್ಲೆ ಪಿಚ್​ನ ಮೇಲ್ಮೈಯಲ್ಲಿ ಹಸಿರು ಹುಲ್ಲುಗಳು ಕಾಣಿಸಿಕೊಂಡಿದೆ. ಹಚ್ಚ ಹಸಿರಿನ ಹುಲ್ಲಿನ ಪಿಚ್ ಎಂದರೆ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳಿಗೆ, ವಿಶೇಷವಾಗಿ ವೇಗದ ಬೌಲರ್‌ಗಳಿಗೆ ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಸ್ವಿಂಗ್ ಮತ್ತು ಸೀಮ್ ಬೌಲಿಂಗ್​ಗೆ ಸಹಕಾರಿ.

ಹೆಡಿಂಗ್ಲೆ ಪಿಚ್ ಮೇಲ್ಮೈ

ಇದಾಗ್ಯೂ ಈ ಪಿಚ್​ನಲ್ಲಿ ಬ್ಯಾಟಿಂಗ್ ಕಷ್ಟಕರ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪಂದ್ಯದ ಆರಂಭಿಕ ಹಂತಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಮುಕ್ತವಾಗಿ ರನ್ ಗಳಿಸಲು ಕಷ್ಟವಾಗುತ್ತದೆ. ಇದಾದ ಬಳಿಕ ಪಿಚ್​ ಬ್ಯಾಟಿಂಗ್​ಗೂ ಸಹಕಾರಿಯಾಗುವುದನ್ನು ನಿರೀಕ್ಷಿಸಬಹುದು. ಅಂದರೆ ಇಂತಹ ಪಿಚ್​ನಲ್ಲಿ ತಾಳ್ಮೆಯುತ ಬ್ಯಾಟಿಂಗ್ ಅತ್ಯವಶ್ಯಕ.

ಅದರಲ್ಲೂ ಸ್ವಿಂಗ್ ಹೆಚ್ಚಿರುವುದರಿಂದ ಔಟ್ ಸೈಡ್ ಆಫ್​ನತ್ತ ಹೋಗುವ ಚೆಂಡನ್ನು ಮುಟ್ಟುವ ಪ್ರಯತ್ನದಿಂದ ದೂರ ಇರುವುದು ಬ್ಯಾಟರ್​ಗಳಿಗೆ ಉತ್ತಮ. ಹೀಗಾಗಿ ಮೊದಲ ದಿನದಾಟದಲ್ಲಿ ಬ್ಯಾಟರ್​ಗಳು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಮಾತ್ರ ಮೇಲುಗೈ ಸಾಧಿಸಬಹುದು.

ಕ್ಯುರೇಟರ್ ಹೇಳಿದ್ದೇನು?

ಹೆಡಿಂಗ್ಲೆ ಪಿಚ್​ ಕ್ಯುರೇಟರ್ ರಿಚರ್ಡ್ ರಾಬಿನ್ಸನ್ ಪ್ರಕಾರ, ಮೊದಲ ಪಂದ್ಯಕ್ಕೆ ಸಮತೋಲಿತ ಪಿಚ್ ನಿರ್ಮಿಸಲಾಗಿದೆ. ಈ ಮೇಲ್ಮೈಯಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ 300 ರನ್‌ಗಳಿಸಿದರೆ ಅದುವೇ ಬೆಸ್ಟ್ ಸ್ಕೋರ್. ಅಲ್ಲದೆ ಸಮಯ ಕಳೆದಂತೆ ಬ್ಯಾಟಿಂಗ್ ಉತ್ತಮಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಅತ್ತ ಇಂಗ್ಲೆಂಡ್​ನಲ್ಲಿ ಉತ್ತಮ ಬಿಸಿಲು ಇರುವುದರಿಂದ ಮೊದಲ ದಿನದಾಟದ ಬೆನ್ನಲ್ಲೇ ಪಿಚ್ ಮೇಲ್ಮೈ ಬದಲಾಗುವ ಸಾಧ್ಯತೆಯಿದೆ. ಹೀಗಾಗಿಯೇ ಮೊದಲ ದಿನದ ಆರಂಭದಲ್ಲಿ ಬೌಲರ್​ಗಳು ಪಿಚ್​ನ ಲಾಭ ಪಡೆದರೆ, ಆ ಬಳಿಕ ಬ್ಯಾಟರ್​ಗಳಿಗೆ ಅನುಕೂಲವಾಗಲಿದೆ. ಹೀಗಾಗಿಯೇ ಸಮಯ ಕಳೆದಂತೆ ಬ್ಯಾಟಿಂಗ್ ಉತ್ತಮಗೊಳ್ಳುವ ನಿರೀಕ್ಷೆಯಿದೆ ಎಂದು ಪಿಚ್​ ಕ್ಯುರೇಟರ್ ರಿಚರ್ಡ್ ರಾಬಿನ್ಸನ್ ಹೇಳಿದ್ದಾರೆ.

ಒಟ್ಟಿನಲ್ಲಿ ಹೆಡಿಂಗ್ಲೆ ಮೈದಾನದಲ್ಲಿ ಗ್ರೀನ್ ಪಿಚ್ ಇರುವುದು ಖಚಿತವಾಗಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಅತ್ತ ಇಂಗ್ಲೆಂಡ್ ತಂಡವು ಈ ಪಂದ್ಯಕ್ಕಾಗಿ ಈಗಾಗಲೇ ಪ್ಲೇಯಿಂಗ್ ಇಲೆವೆನ್ ಘೋಷಿಸಿದ್ದು, ತಂಡದಲ್ಲಿ ಮೂವರು ಪ್ರಮುಖ ವೇಗಿಗಳಿಗೆ ಸ್ಥಾನ ನೀಡಲಾಗಿದೆ. ಇನ್ನು ಹೆಚ್ಚುವರಿ ವೇಗಿಯಾಗಿ ಬೆನ್ ಸ್ಟೋಕ್ಸ್ ಕೂಡ ತಂಡದಲ್ಲಿದ್ದು, ಇವರ ಜೊತೆ ಸ್ಪಿನ್ನರ್ ಆಗಿ ಶೊಯೆಬ್ ಬಶೀರ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ಅಂದರೆ ಐವರು ಬೌಲರ್​ಗಳೊಂದಿಗೆ ಇಂಗ್ಲೆಂಡ್ ಟೀಮ್ ಇಂಡಿಯಾವನ್ನು ಎದುರಿಸುವುದು ಕನ್ಫರ್ಮ್ ಆಗಿದೆ.

ಅತ್ತ ಇಂಗ್ಲೆಂಡ್ ಐವರು ಬೌಲರ್​ಗಳ ಸೂತ್ರವನ್ನು ಅಳವಡಿಸಿರುವ ಕಾರಣ, ಟೀಮ್ ಇಂಡಿಯಾ ಕೂಡ ನಾಲ್ವರು ವೇಗದ ಬೌಲರ್​ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: IND vs ENG: ವಿರಾಟ್ ಕೊಹ್ಲಿಯ ಸ್ಥಾನ ತುಂಬುವವರು ಇವರೇ..!

ಮೊದಲ ಟೆಸ್ಟ್​ಗೆ ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಶ್ ಟಂಗ್, ಶೊಯೆಬ್ ಬಶೀರ್.

Published On - 9:59 am, Thu, 19 June 25