IND vs ENG: ‘ಬಹುಶಃ ಅವರು ಪಂತ್ ಬ್ಯಾಟಿಂಗ್ ನೋಡಿಲ್ಲ ಅನಿಸುತ್ತೆ’; ಡಕೆಟ್​ಗೆ ತಿರುಗೇಟು ನೀಡಿದ ರೋಹಿತ್

| Updated By: ಪೃಥ್ವಿಶಂಕರ

Updated on: Mar 06, 2024 | 7:49 PM

IND vs ENG: ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಡಕೆಟ್, ಯಶಸ್ವಿ ಆಟ ನಮ್ಮ ಭಾಝ್ ಬಾಲ್ ಕ್ರಿಕೆಟ್​ನಿಂದ ಪ್ರೇರಿತವಾಗಿದೆ. ಎಲ್ಲ ತಂಡಗಳು ನಮ್ಮ ಶೈಲಿಯನ್ನು ಅಳವಡಿಸಿಕೊಳ್ಳುತ್ತಿವೆ ಎಂದಿದ್ದರು. ಅದಕ್ಕೀಗ ರೋಹಿತ್​, ರಿಷಭ್ ಪಂತ್ ಉದಾಹರಣೆ ನೀಡಿ ಡಕೆಟ್​ ಬಾಯಿ ಮುಚ್ಚಿಸಿದ್ದಾರೆ.

IND vs ENG: ‘ಬಹುಶಃ ಅವರು ಪಂತ್ ಬ್ಯಾಟಿಂಗ್ ನೋಡಿಲ್ಲ ಅನಿಸುತ್ತೆ’; ಡಕೆಟ್​ಗೆ ತಿರುಗೇಟು ನೀಡಿದ ರೋಹಿತ್
ರೋಹಿತ್ ಶರ್ಮಾ
Follow us on

ಧರ್ಮಶಾಲಾದಲ್ಲಿ ನಡೆಯಲ್ಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್‌ (India vs England) ತಂಡಗಳು ಸಜ್ಜಾಗಿವೆ. ಉಭಯ ತಂಡಗಳಿಗೂ ಈ ಪಂದ್ಯ ಬಹುಮುಖ್ಯವಾಗಿರುವುದರಿಂದ ಪಂದ್ಯದಲ್ಲಿ ರೋಚಕತೆ ನಿರೀಕ್ಷಿಸಬಹುದಾಗಿದೆ. ಈ ನಡುವೆ ಮೂರನೇ ಟೆಸ್ಟ ಪಂದ್ಯದ ಬಳಿಕ ಇಂಗ್ಲೆಂಡ್‌ ಆರಂಭಿಕ ಆಟಗಾರ ಬೆನ್ ಡಕೆಟ್ (Ben Duckett), ಯಶಸ್ವಿ ಜೈಸ್ವಾಲ್ (Yashasvi Jaiswa) ಬಗ್ಗೆ ನೀಡಿದ ಹೇಳಿಕೆಯೊಂದಕ್ಕೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಖಡಕ್ ಆಗಿ ಉತ್ತರಿಸಿದ್ದಾರೆ. ವಾಸ್ತವವಾಗಿ ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಡಕೆಟ್, ಯಶಸ್ವಿ ಆಟ ನಮ್ಮ ಭಾಝ್ ಬಾಲ್ ಕ್ರಿಕೆಟ್​ನಿಂದ ಪ್ರೇರಿತವಾಗಿದೆ. ಎಲ್ಲ ತಂಡಗಳು ನಮ್ಮ ಶೈಲಿಯನ್ನು ಅಳವಡಿಸಿಕೊಳ್ಳುತ್ತಿವೆ ಎಂದಿದ್ದರು. ಅದಕ್ಕೀಗ ರೋಹಿತ್​, ರಿಷಭ್ ಪಂತ್ (Rishab Pant) ಉದಾಹರಣೆ ನೀಡಿ ಡಕೆಟ್​ ಬಾಯಿ ಮುಚ್ಚಿಸಿದ್ದಾರೆ.

ಇಂಗ್ಲೆಂಡ್‌ನಿಂದ ಕಲಿತ ಪಾಠ

ವಾಸ್ತವವಾಗಿ ಮೂರನೇ ಟೆಸ್ಟ್‌ನ ನಂತರ ಯಶಸ್ವಿ ಜೈಸ್ವಾಲ್ ಆಟವನ್ನು ಹೊಗಳಿದ್ದ ಡಕೆಟ್, ಯಶಸ್ವಿ ಈ ರೀತಿಯ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಇಂಗ್ಲೆಂಡ್‌ನಿಂದ ಕಲಿತ ಪಾಠ ಎಂದಿದ್ದರು. ಇಂಗ್ಲೆಂಡ್ ಆಕ್ರಮಣಕಾರಿ ಕ್ರಿಕೆಟ್ ಆಡುವುದನ್ನು ನೋಡಿದ ನಂತರ ಇತರ ತಂಡಗಳು ಸಹ ಅದನ್ನು ಅಳವಡಿಸಿಕೊಳ್ಳುತ್ತಿವೆ. ಇತರ ಆಟಗಾರರು ಮತ್ತು ಇತರ ತಂಡಗಳು ಕೂಡ ಆಕ್ರಮಣಕಾರಿ ಶೈಲಿಯ ಕ್ರಿಕೆಟ್‌ನಲ್ಲಿ ಆಡುತ್ತಿರುವುದನ್ನು ನೋಡುವುದು ತುಂಬಾ ರೋಮಾಂಚನಕಾರಿಯಾಗಿದೆ. ಯಶಸ್ವಿ ಭವಿಷ್ಯದ ಸೂಪರ್‌ಸ್ಟಾರ್‌ನಂತೆ ಕಾಣುತ್ತಿದ್ದಾರೆ. ಆದರೆ, ಸದ್ಯ ಅವರು ಉತ್ತಮ ಫಾರ್ಮ್‌ನಲ್ಲಿರುವುದು ನಮ್ಮ ದುರದೃಷ್ಟಕರ ಎಂದು ಡಕೆಟ್ ಹೇಳಿದ್ದರು.

IND vs ENG: ಭಾರತ- ಇಂಗ್ಲೆಂಡ್‌ ಕೊನೆಯ ಟೆಸ್ಟ್ ಯಾವಾಗ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಡಕೆಟ್, ಪಂತ್ ಆಟ ನೋಡಿಲ್ಲ

ಇದೀಗ ಐದನೇ ಟೆಸ್ಟ್‌ಗೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಡಕೆಟ್‌ಗೆ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳನ್ನು ಗೆದ್ದು ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಪಂತ್ ಅವರನ್ನು ಡಕೆಟ್‌ಗೆ ರೋಹಿತ್ ನೆನಪಿಸಿದ್ದಾರೆ. ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ನೇರ ಸಿಕ್ಸರ್ ಬಾರಿಸುತ್ತಿರುವ ಹಿಟ್‌ಮ್ಯಾನ್ ರೋಹಿತ್, ಇಂಗ್ಲೆಂಡ್ ತಂಡಕ್ಕೆ, ವಿಶೇಷವಾಗಿ ಬೆನ್ ಡಕೆಟ್‌ಗೆ ಖಡಕ್ ರೀಪ್ಲೆ ನೀಡಿದ್ದಾರೆ. ‘ನಮ್ಮ ತಂಡದಲ್ಲಿ ರಿಷಬ್ ಪಂತ್ ಎಂಬ ಆಟಗಾರನಿದ್ದರು. ಬಹುಶಃ ಬೆನ್ ಡಕೆಟ್, ಪಂತ್ ಆಟವಾಡುವುದನ್ನು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ